ಬೆಂಗಳೂರು: ಹೊಸ BPL ಮತ್ತು APL ಕಾರ್ಡ್‍ಗೆ ಅರ್ಜಿ ಸಲ್ಲಿಸಲು ನಾಳೆ(ಡಿ.3) ಒಂದೇ ಒಂದು ದಿನ ಅವಕಾಶವಿದೆ. ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಬೇರೆ ಯಾವುದೇ ರೀತಿಯ ಆನ್‍ಲೈನ್‍ ಸೆಂಟರ್‍ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.


ಇದನ್ನೂ ಓದಿ: ನೀವೂ ಸಿನಿಪ್ರಿಯರೆ? ಈ ಐದು ಕಾರ್ಡ್ ಬಳಸಿ ಉಚಿತ ಟಿಕೆಟ್, ಕ್ಯಾಶ್ಬ್ಯಾಕ್ ಹಾಗೂ ಭಾರಿ ಡಿಸ್ಕೌಂಟ್ ಪಡೆಯಿರಿ!


ಇನ್ನು ಹೊಸ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರವು ಗುಡ್‍ ನ್ಯೂಸ್ ನೀಡಿದ್ದು, ಶೀಘ್ರವೇ ಹೊಸ ಕಾರ್ಡ್ ವಿತರಣೆ ಮಾಡುವುದಾಗಿ ತಿಳಿಸಿದೆ.


ಅರ್ಜಿ ಸಲ್ಲಿಸಲು ಯಾವ ದಾಖಲಾತಿ ಅಗತ್ಯ?


1) ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ, ಗ್ರಾಮದ ಹೆಸರು.


2) ಮನೆಯ ವಿದ್ಯುತ್ ಬಿಲ್


3) ಕುಟುಂಬ ಸದಸ್ಯರ ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ವಾರ್ಷಿಕ ವರಮಾನ.


4) ಸದ್ಯ ವಾಸವಾಗಿರುವ ಮನೆಯಲ್ಲಿ ಎಷ್ಟು ವರ್ಷದಿಂದ ವಾಸವಾಗಿದ್ದಾರೆ ಅನ್ನೋ ಮಾಹಿತಿ.


5) ಮೊಬೈಲ್ ನಂಬರ್


6) ನಿವಾಸದ ಪೂರ್ಣ ವಿಳಾಸ, ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರ ಪೂರ್ಣ ವಿಳಾಸ


7) ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ ನೀಡಬೇಕು


ಅರ್ಜಿದಾರರು ಗಮನಿಸಬೇಕಾದ ವಿಷಯವೆಂದರೆ ಹೊಸ ರೇಷನ್ ಕಾ‍ರ್ಡ್‍ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‍ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. 6 ವರ್ಷ ಮೇಲ್ಪಟ್ಟವರಿಗೆ ಪ್ರಸಕ್ತ ಸಾಲಿನ ಜಾತಿ ಪ್ರಮಾಣಪತ್ರ ಅಂದರೆ 5 ವರ್ಷಕ್ಕಿಂತ ಒಳಗಿರುವಂತಹ ದಾಖಲೆಗಳನ್ನು ನೀಡಬೇಕು.


ಇದನ್ನೂ ಓದಿ: ಚಿನ್ನದ ಬೆಲೆ ಮತ್ತೆ ಏರಿಕೆ... 2000 ರೂಪಾಯಿ ಹೆಚ್ಚಳ, 10 ಗ್ರಾಂ ಗೋಲ್ಡ್‌ ರೇಟ್‌ ಎಷ್ಟಾಗಿದೆ ನೋಡಿ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.