Ration Card News: ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದು, ತನ್ಮೂಲಕ ನೀವು ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನ ಪಡೆಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಅನರ್ಹ ಪಡಿತರ ಚೀಟಿದಾರರನ್ನು ಕಾರ್ಡ್‌ಗಳನ್ನು ಒಪ್ಪಿಸುವಂತೆ ಸರ್ಕಾರವು ಕೇಳುತ್ತಿದೆ ಎಂದು ಹೇಳುತ್ತಿವೆ. ಇದರೊಂದಿಗೆ ಅನರ್ಹರಿಂದ ವಸೂಲಾತಿಗೂ ಸರ್ಕಾರ ಚಿಂತನೆ ನಡೆಸಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಕೂಡ ಈ ಸುದ್ದಿಗಳಲ್ಲಿ ತಿಳಿಸಲಾಗಿದೆ. ಆದರೆ ಇದೀಗ ಖುದ್ದು ಸರ್ಕಾರ ಈ ಕುರಿತು ಸ್ಪಷ್ಟೀಕರಣ ನೀಡಿದೆ. ಬನ್ನಿ ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಇದನ್ನೂ ಓದಿ-Gold Price Today: ಚಿನ್ನ ಖರೀದಿಸ ಬಯಸುವವರಿಗೆ ಸಿಕ್ತು ಬಂಪರ್ ಲಾಟರಿ, ಬೆಲೆಯಲ್ಲಿ ಭಾರಿ ಇಳಿಕೆ


ಯಾವುದೇ ಆದೇಶ ಸರ್ಕಾರ ನೀಡಿಲ್ಲ
ಮೊದಲನೆಯದಾಗಿ ಈ ಕುರಿತಾದ ವದಂತಿಗಳು ಉತ್ತರ ಪ್ರದೇಶ ಸರ್ಕಾರ ತಳ್ಳಿಹಾಕಿದೆ. ಕಳೆದ ಕೆಲ ದಿನಗಳಲ್ಲಿ ಈ ಸುದ್ದಿ ಫಲಾನುಭವಿಗಳಲ್ಲಿ ವೇಗವಾಗಿ ಪಸರಿಸಿತ್ತು. ಅಷ್ಟೇ ಅಲ್ಲ, ಪಡಿತರ ಚೀಟಿಯನ್ನು ಒಪ್ಪಿಸಲು ಜನರ ಸಾಲುಗಳೇ ಕೆಲ ಜಿಲ್ಲೆಗಳಲ್ಲಿ ಕಂಡು ಬಂದಿದ್ದವು. ಆದರೆ ಇದೀಗ ಪಡಿತರ ಚೀಟಿಯನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಇದು ಶುದ್ಧ ವದಂತಿ ಎಂಬ ಸ್ಪಷ್ಟೀಕರಣ ಪ್ರಕಟಗೊಂಡಿದೆ. ಸರ್ಕಾರದ ಹೇಳಿಕೆಯಿಂದ ಲಕ್ಷಾಂತರ ಫಲಾನುಭವಿಗಳಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಈ ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ  ರಾಜ್ಯ ಆಹಾರ ಆಯುಕ್ತರು ಆದೇಶಿಸಿದ್ದಾರೆ.


ಇದನ್ನೂ ಓದಿ-ಈ ಕೆಲಸ ಇಂದೇ ಮಾಡಿ, ಇಲ್ದಿದ್ರೆ ನಿಮ್ಮ ಒಂದು ಮಹತ್ವದ ದಾಖಲೆ ಕಸದ ತೊಟ್ಟಿ ಸೇರುತ್ತೆ!


ದಾರಿತಪ್ಪಿಸುವ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ
ವದಂತಿಗಳಿಗೆ ತೆರೆ ಎಳೆದಿರುವ ರಾಜ್ಯ ಆಹಾರ ಆಯುಕ್ತರು, ಪಡಿತರ ಚೀಟಿ ಪರಿಶೀಲನೆ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದನ್ನು ಕಾಲಕಾಲಕ್ಕೆ ಸರ್ಕಾರ ಮಾಡುತ್ತದೆ. ಪಡಿತರ ಚೀಟಿ ಸರೆಂಡರ್ ಮತ್ತು ಹೊಸ ಅರ್ಹತಾ ಷರತ್ತುಗಳಿಗೆ ಸಂಬಂಧಿಸಿದ ತಪ್ಪು ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರೊಂದಿಗೆ ಸರಕಾರದಿಂದ ಪಡಿತರ ವಸೂಲಾತಿ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ-DA Hike Update: ಸರ್ಕಾರಿ ನೌಕರಿಗೊಂದು ಮಹತ್ವದ ಅಪ್ಡೇಟ್, ಜನವರಿ 1 ರಿಂದ ಎಷ್ಟು ಡಿಎ ಸಿಗಲಿದೆ ಗೊತ್ತಾ?


ನಿಯಮ ಏನು?
ಮನೆಯ ಪಡಿತರ ಚೀಟಿಗಳ 'ಅರ್ಹತೆ/ಅನರ್ಹತೆಯ ಮಾನದಂಡ 2014' ಅನ್ನು ನಿಗದಿಪಡಿಸಲಾಗಿದೆ. ಅದರ ನಂತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದಲ್ಲದೇ 2011ರ ಜನಗಣತಿ ಆಧಾರದ ಮೇಲೆ ಮಾತ್ರ ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ಪಡಿತರ ಚೀಟಿದಾರರು ಪಕ್ಕಾ ಮನೆ, ವಿದ್ಯುತ್ ಸಂಪರ್ಕ ಅಥವಾ ಏಕೈಕ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ಅಥವಾ ಮೋಟಾರ್ ಸೈಕಲ್ ಮಾಲೀಕರು ಮತ್ತು ಕೋಳಿ/ಹಸು ಸಾಕಣೆಯಲ್ಲಿ ತೊಡಗಿರುವ ಆಧಾರದ ಮೇಲೆ ಅನರ್ಹರೆಂದು ಘೋಷಿಸಲಾಗುವುದಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.