PM Kisan: ದೇಶದ ಕೋಟ್ಯಾಂತರ ರೈತರಿಗೆ ಬಿಗ್ ಶಾಕ್ !

PM Kisan Samman Nidhi: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಬಜೆಟ್ ಅನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಇತರೆ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಈ ಯೋಜನೆಗಾಗಿ ಕೇವಲ 60 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದೆ. ರೈತರಿಗೆ ಶೀಘ್ರವೇ ಮುಂದಿನ ಕಂತಿನ ಹಣ ಸಿಗುವ ನಿರೀಕ್ಷೆ ಇದೆ.  

Written by - Nitin Tabib | Last Updated : Feb 3, 2023, 01:59 PM IST
  • ಆರ್ಥಿಕವಾಗಿ ದುರ್ಬಲವಾಗಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಆರಂಭಿಸಲಾಗಿದೆ.
  • ಬಡ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
  • ಯೋಜನೆಯಡಿ ಕೇಂದ್ರ ಸರ್ಕಾರವು ವಾರ್ಷಿಕ 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಕಳುಹಿಸುತ್ತದೆ.
PM Kisan: ದೇಶದ ಕೋಟ್ಯಾಂತರ ರೈತರಿಗೆ ಬಿಗ್ ಶಾಕ್ ! title=
ಪಿಎಂ ಕಿಸಾನ್ ಅಪ್ಡೇಟ್!

PM Kisan Scheme: ಈ ಬಾರಿಯ ಬಜೆಟ್‌ ನಲ್ಲಿ ಸರ್ಕಾರ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯನ್ನು ರೈತರು ಹೊಂದಿದ್ದರು. ಮಾಧ್ಯಮಗಳಲ್ಲೂ ಇಂತಹ ಸುದ್ದಿಗಳು ಪ್ರಕಟಗೊಂಡಿದ್ದವು. ವಾರ್ಷಿಕ ರೂ.6 ಸಾವಿರದಿಂದ ರೂ.8 ಸಾವಿರಕ್ಕೆ ಸಹಾಯ ಧನ ಏರಿಕೆಯಾಗುವ ಸಾಧ್ಯತೆಯೂ ವರ್ತಿಸಲಾದ ಕಾರಣ ರೈತರೂ ಕೂಡ ಸಂತಸದಲ್ಲಿದ್ದರು. ಇದೇ ಕಾರಣದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಬಜೆಟ್ ಮಂಡಿಸುವಾಗ ರೈತರು ಬಜೆಟ್ ನತ್ತ ತಮ್ಮ ಗಮನ ಕೇಂದ್ರೀಕರಿಸಿದ್ದರು. ಆದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ವಿಷಯದಲ್ಲಿ ಅವರಿಗೆ ಭಾರಿ ನಿರಾಶೆ ಸಿಕ್ಕಂತಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12 ಕಂತುಗಳು ರೈತರ ಖಾತೆಗೆ ಬಂದಿದೆ. ಆದರೆ ಜನವರಿ ಕಳೆದರೂ 13ನೇ ಕಂತು ಖಾತೆಗೆ ಬಂದಿಲ್ಲ ಎಂಬುದೂ ಕೂಡ ಇದೀಗ ರೈತರ ಆತಂಕಕ್ಕೆ ಇನ್ನೊಂದು ಕಾರಣವಾಗಿದೆ. ಕೇಂದ್ರ ಸರ್ಕಾರದಿಂದ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಗೆ ಸಂಬಂಧಿಸಿದಂತೆ e ಬಾರಿಯ ಬಜೆಟ್ ನಲ್ಲಿ ಯಾವುದೇ ಸಂತಸದ ಸುದ್ದಿ ಪ್ರಕಟಗೊಂಡಿಲ್ಲ.

ನಿಧಿಗಾಗಿ 5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಬಜೆಟ್ ಮೀಸಲಿಡಲಾಗಿದೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ರೈತರ ಮೇಲೆ ಆರ್ಥಿಕವಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಈ ಯೋಜನೆಯು ದೇಶದಲ್ಲಿ ರಾಜಕೀಯ ಪ್ರಭಾವ ಕೂಡ ಹೊಂದಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಮೊತ್ತ ಹೆಚ್ಚಳಕ್ಕೆ  ರೈತರು ಕಾಯುತ್ತಿದ್ದರು. ಆದರೆ ಬಜೆಟ್‌ನಿಂದ ರೈತರಿಗೆ ಈ ವಿಷಯದಲ್ಲಿ ನಿರಾಸೆಯಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವರು ಯಾವುದೇ ಘೋಷಣೆ ಮಾಡಿಲ್ಲ. ಇದೇ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಿದ್ದು. ಇದರಲ್ಲಿ ಯೋಜನೆಗಾಗಿ ಕೇವಲ 60 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ. ವಿಶೇಷವೆಂದರೆ ಕಳೆದ 5 ವರ್ಷಗಳಲ್ಲಿ ಈ ಯೋಜನೆಯಡಿ ಬಜೆಟ್ ಬಿಡುಗಡೆಯಾಗಿದೆ. 5 ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಬಜೆಟ್ ಆಗಿದೆ.

ಇದನ್ನೂ ಓದಿ- Income Tax ಗೆ ಸಂಬಂಧಿಸಿದ ಮಹತ್ವದ ಸುದ್ದಿ ಪ್ರಕಟ, ವೇತನ 7 ಲಕ್ಷಕ್ಕಿಂತ ಹೆಚ್ಚಿದ್ದರೂ ತೆರಿಗೆ ಪಾವತಿಸಬೇಕಾಗಿಲ್ಲ

ಕಳೆದ ವರ್ಷಕ್ಕೆ ಹೋಲಿಸಿದರೆ 8 ಸಾವಿರ ಕೋಟಿ ಕಡಿತ
ಮಾಧ್ಯಮ ವರದಿಗಳ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಬಜೆಟ್ ಅನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. 2022-23ನೇ ಸಾಲಿನಲ್ಲಿ ಈ ಯೋಜನೆಗೆ 68000 ಕೋಟಿ ರೂ. ಅನುದಾನ ನೀಡಲಾಗಿತ್ತು ಆದರೆ ಈ ಬಾರಿ ಕೇವಲ 60 ಸಾವಿರ ಕೋಟಿ. ಮಾತ್ರ ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ 13ರಷ್ಟು ಕಡಿಮೆಯಾಗಿದೆ. ಆದರೆ, 2021-22ರಲ್ಲಿ ಪಿಎಂ-ಕಿಸಾನ್‌ಗಾಗಿ 66,825 ಕೋಟಿ ರೂ. ಅನುದಾನ ನೀಡಲಾಗಿತ್ತು.

ಇದನ್ನೂ ಓದಿ-Budget 2023: ಏನಿದು 'ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ'? ಇದರಿಂದ ಮಹಿಳೆಯರಿಗೆನು ಲಾಭ?

ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ
ಆರ್ಥಿಕವಾಗಿ ದುರ್ಬಲವಾಗಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಆರಂಭಿಸಲಾಗಿದೆ. ಬಡ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯಡಿ ಕೇಂದ್ರ ಸರ್ಕಾರವು ವಾರ್ಷಿಕ 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಕಳುಹಿಸುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2 ಸಾವಿರ ರೂ. ನೇರ ಲಾಭಾಂಶ ವರ್ಗಾವಣೆ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಈ ವರ್ಷ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕಂತನ್ನು 3 ರಿಂದ 4 ಕ್ಕೆ ಹೆಚ್ಚಿಸಬಹುದು ಎಂಬ ಚರ್ಚೆಗಳು ನಡೆದಿದ್ದವು ಮತ್ತು ಈ ಮೂಲಕ ರೈತರಿಗೆ 6 ಸಾವಿರದ ಬದಲು 8 ಸಾವಿರ ರೂ.ಸಿಗಲಿದೆ ಎಂದು ವರ್ತಿಸಲಾಗಿತ್ತು. ಆದರೆ, ಇದೀಗ ಬಜೆಟ್‌ ಬಿಡುಗಡೆಯಾದ ಬಳಿಕ ಎಲ್ಲರ ಅದರಲ್ಲಿಯೂ ರೈತ ಬಾಂಧವರ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ-Budget 2023: ಅಗ್ನಿ ವೀರರಿಗಾಗಿ ಬಜೆಟ್ ನಲ್ಲಿ ಮಹತ್ವದ ಘೋಷಣೆ, ತೆರಿಗೆಯಲ್ಲಿ ಭಾರಿ ವಿನಾಯಿತಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಧ್ಯಮ ವರದಿಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News