Ration Card Update: ಪಡಿತರ ಚೀಟಿ ಮೂಲಕ ಸರ್ಕಾರದ ಉಚಿತ ಪಡಿತರ ಯೋಜನೆಯ ಸದುಪಯೋಗವನ್ನು ನೀವೂ ಪಡೆದುಕೊಳ್ಳುತ್ತಿದ್ದಾರೆ ಈ ಸುದ್ದಿ ನಿಮಗಾಗಿ. ಪಡಿತರ ವಿತರಣೆಗೆ ಸಂಬಂಧಿಸಿದ ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಈ ಅಪ್ಡೇಟ್ ಕೇಳಿ ನೀವೂ ಶಾಕ್ ಆಗಬಹುದು. ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಪಡಿತರ ವಿತರಣೆಯಾಗಬೇಕು. ಆದರೆ ಕೆಲವು ಜಿಲ್ಲೆಗಳಲ್ಲಿ ಇನ್ನೂ ಪಡಿತರ ವಿತರಣೆಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಇನ್ನೂ ಅಕ್ಕಿಯನ್ನು ಸರಬರಾಜು ಮಾಡಿಲ್ಲ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಇದರಿಂದ ಸರಿಯಾಗಿ ಪಡಿತರ ಪೂರೈಕೆಯಾಗುತ್ತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನೀವೂ ವಿವಾಹಿತರಾಗಿದ್ದಲ್ಲಿ ಮಾಸಿಕ ರೂ. 18,500 ಪಡೆಯಲು ಮಾರ್ಚ್ 31ರೊಳಗೆ ಈ ಕೆಲಸ ಮಾಡಿ


ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ವಿಳಂಬ
ಕೆಲವು ಪಡಿತರ ಕೋಟಾಗಳ ಅಂಗಡಿಗಳಿಗೆ ಎಫ್‌ಸಿಐನಿಂದ ಗೋಧಿ, ಸಕ್ಕರೆ, ಕಾಳು, ಎಣ್ಣೆ ಮತ್ತು ಉಪ್ಪನ್ನು ಮಾತ್ರ ತಲುಪಿಸಲಾಗಿದೆ. ಪಡಿತರ ವಿತರಣೆಗಾಗಿ ಈ ಅಂಗಡಿಗಳು ಅಕ್ಕಿಗಾಗಿ ಕಾಯುತ್ತಿವೆ. ಸದ್ಯದಲ್ಲೇ ಅಂಗಡಿಗಳಿಗೆ ಅಕ್ಕಿ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಕ್ಕಿ ಪಡಿತರ ಅಂಗಡಿಗಳಿಗೆ ಬಂದ ನಂತರ ವಿತರಣೆ ಆರಂಭಿಸಲಾಗುವುದು ಎಂದು ಸಾರ್ವಜನಿಕರಿಗೆ ಹೇಳಲಾಗುತ್ತಿದೆ. ವಿತರಣಾ ವ್ಯವಸ್ಥೆಯಲ್ಲಿನ ಅಡಚಣೆಯಿಂದಾಗಿ, ಜನವರಿಯಲ್ಲಿ ಕಾರ್ಡ್ ಹೊಂದಿರುವವರಿಗೆ ಪಡಿತರ ಪಡೆಯಲು ವಿಳಂಬವಾಗುತ್ತಿದೆ.


ಇದನ್ನೂ ಓದಿ-ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್ಬಿಐ! ಯಾವುದೇ ವ್ಯವಹಾರ ನಡೆಸದಿದ್ದರೂ ಆಟೋ ಡೆಬಿಟ್ ಆಗುತ್ತಿದೆ ಹಣ!


ಪಡಿತರ ಅಂಗಡಿಗಳಲ್ಲಿ ಅಕ್ಕಿ ಕೋಟಾ ಲಭ್ಯವಿಲ್ಲದ ಕಾರಣ ಪಾಯಿಂಟ್ ಆಫ್ ಸೇಲ್ಸ್ ಮೆಷಿನ್ (ಪಿಒಎಸ್) ಪಡಿತರ ವಿತರಣೆಯನ್ನು ಅನುಮತಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಡಿತರ ಚೀಟಿದಾರರು ತಮ್ಮ ಇಚ್ಛೆಗೆ ವಿರುದ್ಧವಾಗಿಯೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತೀಯ ಆಹಾರ ನಿಗಮದಿಂದ ಅಕ್ಕಿ ಪೂರೈಕೆಯಲ್ಲಿ ಏಕೆ ವಿಳಂಬವಾಗುತ್ತಿದೆ ಎಂಬ ಮಾಹಿತಿ ಇದುವರೆಗೆ ಬಹಿರಂಗಗೊಂಡಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.