ನವದೆಹಲಿ : ಡಿಜಿಟಲ್ ಯುಗದಲ್ಲಿ, ಬ್ಯಾಂಕ್ ಖಾತೆ (Bank account) ವಂಚನೆಯ ಘಟನೆಗಳು ವೇಗವಾಗಿ ಹೆಚ್ಚಿವೆ. ಬ್ಯಾಂಕ್ ಖಾತೆಯಿಂದ ಅನಧಿಕೃತ ವಹಿವಾಟುಗಳು ಅಕ್ರಮ ರೀತಿಯಲ್ಲಿ ನಡೆಯುತ್ತವೆ. ಇದನ್ನು ಆನ್‌ಲೈನ್ ವಂಚನೆ, ಡಿಜಿಟಲ್ ವಂಚನೆ ಅಥವಾ ಸೈಬರ್ ವಂಚನೆ ಎಂದು ವ್ಯಾಖ್ಯಾನಿಸಲಾಗಿದೆ. ಹ್ಯಾಕರ್‌ಗಳು ನಿಮ್ಮ ಖಾತೆಯ ವಿವರಗಳನ್ನು ಪಡೆದು ನಿಮಗೆ ತಿಳಿಯದಂತೆ ನಿಮ್ಮ ಖಾತೆ ಖಾಲಿ ಮಾಡುತ್ತಾರೆ. ಈ ರೀತಿ ಹಣ ಕಳೆದುಕೊಂಡಾಗ ತಲೆ ಮೇಲೆ ಕೈ ಹೊತ್ತು ಕೂರುವುದರಿಂದ ಏನೂ ಪ್ರಯೋಜನವಿಲ್ಲ. ಆದರೆ ನಿಶ್ಚಿತವಾಗಿ ನಿಮ್ಮ ಪೂರ್ಣ ಹಣವನ್ನು ಮರಳಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಸೈಬರ್ ವಂಚನೆಗೆ ಒಳಗಾದವರು ತಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಮಾಹಿತಿ ನೀಡಿದೆ. ಯಾವುದೇ ಅನಧಿಕೃತ ವಹಿವಾಟಿನ ನಂತರವೂ ನಿಮ್ಮ ಪೂರ್ಣ ಹಣವನ್ನು ಮರಳಿ ಪಡೆಯಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ. ಇದಕ್ಕಾಗಿ ಜಾಗರೂಕತೆ ಅಗತ್ಯ. ಅಂತಹ ಯಾವುದೇ ವಹಿವಾಟಿನ ಬಗ್ಗೆ ತಕ್ಷಣ ಮಾಹಿತಿ ನೀಡುವ ಮೂಲಕ ನೀವು ನಷ್ಟವನ್ನು ತಪ್ಪಿಸಬಹುದು ಎಂದು ಆರ್‌ಬಿಐ ಹೇಳುತ್ತದೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಪ್ರಕಾರ, 'ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟಿನಿಂದ ನೀವು ನಷ್ಟವನ್ನು ಅನುಭವಿಸಿದ್ದರೆ ಮತ್ತು ಈ ಬಗ್ಗೆ ನಿಮ್ಮ ಬ್ಯಾಂಕ್‌ಗೆ ತಕ್ಷಣ ತಿಳಿಸಿದರೆ ನಿಮ್ಮ ಹೊಣೆಗಾರಿಕೆ ಸೀಮಿತವಾಗಿರಬಹುದು, ಆದರೆ ಶೂನ್ಯವೂ ಆಗಿರಬಹುದು.' ನಿಮ್ಮ ಖಾತೆಯಿಂದ ಯಾವುದೇ ಅಕ್ರಮ ವಹಿವಾಟು ನಡೆದಿದ್ದರೆ, ತಕ್ಷಣ ನಿಮ್ಮ ಬ್ಯಾಂಕ್‌ಗೆ ಅದರ ಬಗ್ಗೆ ತಿಳಿಸಿ. ವಿಳಂಬವಿಲ್ಲದೆ ಈ ಬಗ್ಗೆ ನೀವು ಬ್ಯಾಂಕಿಗೆ ಮಾಹಿತಿಯನ್ನು ನೀಡುವುದರಿಂದ ನಿಮ್ಮ ಎಲ್ಲಾ ಹಣವನ್ನು ನೀವು ಪಡೆಯಬಹುದು.


ಇದನ್ನೂ ಓದಿ - Alert! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ


ಪೂರ್ಣ ಹಣವನ್ನು ಮರಳಿ ಪಡೆಯುವುದು ಹೇಗೆ?
ಅಂತಹ ವಹಿವಾಟು ನಡೆದಿದ್ದರೆ ಹಣವನ್ನು ಹೇಗೆ ಮರುಪಾವತಿಸಲಾಗುತ್ತದೆ ಎಂಬ ಪ್ರಶ್ನೆ ಈಗ ಹೆಚ್ಚಿನ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಅಲ್ಲದೆ, ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂತೆಗೆದುಕೊಂಡ ನಂತರ ನೀವು ದೂರು ನೀಡಿದರೆ, ಬ್ಯಾಂಕ್ ಹಣವನ್ನು ಎಲ್ಲಿಂದ ಹಿಂದಿರುಗಿಸುತ್ತದೆ ಎಂದೂ ಕೂಡ ಕೆಲವರು ಯೋಚಿಸಬಹುದು. ವಾಸ್ತವವಾಗಿ, ಅಂತಹ ಸೈಬರ್ ವಂಚನೆಯ (Cyber Fraud) ದೃಷ್ಟಿಯಿಂದ ಬ್ಯಾಂಕುಗಳು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುತ್ತಾರೆ. ನಿಮಗೆ ಸಂಭವಿಸಿದ ವಂಚನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ನೇರವಾಗಿ ವಿಮಾ ಕಂಪನಿಗೆ ತಿಳಿಸುತ್ತದೆ ಮತ್ತು ಅಲ್ಲಿಂದ ವಿಮಾ ಹಣವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ. ಸೈಬರ್ ವಂಚನೆಯನ್ನು ತಪ್ಪಿಸಲು ವಿಮಾ ಕಂಪನಿಗಳು ಜನರಿಗೆ ನೇರ ವ್ಯಾಪ್ತಿಯನ್ನು ನೀಡುತ್ತಿವೆ.


ವಂಚನೆಯ ಬಗ್ಗೆ 3 ದಿನಗಳಲ್ಲಿ ದೂರು:
ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ನಿಮಗೆ ಗೊತ್ತಿಲ್ಲದೇ ಹಣವನ್ನು ಹಿಂತೆಗೆದುಕೊಂಡರೆ ಮತ್ತು ನೀವು ಮೂರು ದಿನಗಳೊಳಗೆ ಈ ವಿಷಯದ ಬಗ್ಗೆ ಬ್ಯಾಂಕಿಗೆ ದೂರು ನೀಡಿದರೆ, ನೀವು ಈ ನಷ್ಟವನ್ನು ಭರಿಸಬೇಕಾಗಿಲ್ಲ. ಗ್ರಾಹಕರ ಖಾತೆಯಿಂದ ಮೋಸದಿಂದ ಹಿಂಪಡೆಯಲಾದ ಮೊತ್ತವನ್ನು ನಿಗದಿತ ಸಮಯದೊಳಗೆ ಬ್ಯಾಂಕ್‌ಗೆ ತಿಳಿಸಿದರೆ ನಂತರ 10 -30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಿಂತಿರುಗಿಸಲಾಗುತ್ತದೆ. 4-7 ದಿನಗಳ ನಂತರ ಬ್ಯಾಂಕ್ ಖಾತೆ ವಂಚನೆ ವರದಿಯಾದರೆ ಗ್ರಾಹಕರು 25 ಸಾವಿರ ರೂ.ಗಳ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ಆರ್‌ಬಿಐ (RBI) ಹೇಳಿದೆ.


ಇದನ್ನೂ ಓದಿ- Whatsapp Fake Message: ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಲಿಂಕ್ ಅನ್ನು ಮರೆತೂ ಕೂಡ ಕ್ಲಿಕ್ ಮಾಡಬೇಡಿ


ಸೈಬರ್ ವಂಚನೆಗೆ ನೀವು ವಿಮೆ ಪಡೆಯಬಹುದು:
ನೀವು ಬಯಸಿದರೆ, ಸೈಬರ್ ವಂಚನೆಯನ್ನು ತಪ್ಪಿಸಲು ನೀವು ವಿಮೆಯನ್ನು (Insurance) ಸಹ ಪಡೆಯಬಹುದು. ಬಜಾಜ್ ಅಲಿಯಾನ್ಸ್ ಮತ್ತು ಎಚ್‌ಡಿಎಫ್‌ಸಿ ಅರ್ಗೋ ಮುಂತಾದ ಕಂಪನಿಗಳು ಅಂತಹ ವಿಮೆಯನ್ನು ಒದಗಿಸುತ್ತವೆ. ಇದರಲ್ಲಿ, ನಿಮ್ಮ ಖಾತೆಯಲ್ಲಿ ಯಾವುದೇ ಸೈಬರ್ ವಂಚನೆ ನಡೆದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯುತ್ತೀರಿ. ಆನ್‌ಲೈನ್ ವಹಿವಾಟಿನಿಂದಾಗಿ, ಸೈಬರ್ ವಂಚನೆಯನ್ನು ತಪ್ಪಿಸಲು ವಿಮೆಯ ವ್ಯಾಪ್ತಿಯೂ ಗಮನಾರ್ಹವಾಗಿ ಹೆಚ್ಚಾಗಿದೆ.


ರಿಸರ್ವ್ ಬ್ಯಾಂಕ್ ಗ್ರಾಹಕರ ರಕ್ಷಣೆ, ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟಿನಲ್ಲಿ ಗ್ರಾಹಕರ ಸೀಮಿತ ಹೊಣೆಗಾರಿಕೆ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ