ನವದೆಹಲಿ: Banking Alert - ಒಂದು ವೇಳೆ ನೀವೂ ಕೂಡ SBI, PNB ಹಾಗೂ ICICI ಗ್ರಾಹಕರಾಗಿದ್ದರೆ ಈ ಸುದ್ದಿಯನ್ನು ಓದಲು ಮರೆಯದಿರಿ, ಏಕೆಂದರೆ ಈ ಮೂರೂ ಬ್ಯಾಂಕ್ ಗಳು ತಮ್ಮ ತಮ್ಮ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ. ತನ್ನ ಗ್ರಾಹಕರಿಗೆ ಅಲರ್ಟ್ ಜಾರಿಗೊಳಿಸಿರುವ ಈ ಮೂರು ಬ್ಯಾಂಕ್ ಗಳು ಆನ್ಲೈನ್ ಫ್ರಾಡ್ (ONLINE FRAUD) ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಕಾರಣ ಎಚ್ಚರಿಕೆಯಿಂದ ಇರಲು ಸೂಚಿಸಿವೆ. ದೇಶಾದ್ಯಂತ ಮುಂದುವರೆದಿರುವ ಕೊರೊನಾ (Covid-19) ಪ್ರಕೋಪದ ನಡುವೆ ಈ ಬ್ಯಾಂಕ್ಗಳು ತಮ್ಮ ಕೋಟ್ಯಂತರ ಗ್ರಾಹಕರಿಗೆ ಈ ಎಚ್ಚರಿಕೆನ್ನು ನೀಡಿವೆ. ದೇಶಾದ್ಯಂತ ಡಿಜಿಟಲ್ ಪೇಮೆಂಟ್ ಸೇವೆ ಹೆಚ್ಚು ಪ್ರಚಲಿತವಾಗಿರುವ ಹಿನ್ನೆಲೆ ವಂಚನೆಯ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿವೆ. ಈ ಹಿನ್ನೆಲೆ ಮೂರು ಬ್ಯಾಂಕ್ ಗಳು ಟ್ವೀಟ್ ಮಾಡುವ ಮೂಲಕ ಈ ಕುರಿತು ಹೇಳಿಕೊಂಡಿವೆ. ಹಾಗಾದರೆ ಬನ್ನಿ ಈ ಮೂರು ಬಂಕುಗಳು ತಮ್ಮ ಟ್ವೀಟ್ ನಲಿ ಏನನ್ನು ಹೇಳಿಕೊಂಡಿವೆ ನೋಡೋಣ.
State Bank Of India
ನೀವೂ ಕೂಡ ಸ್ಟೇಟ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ SBI ಒಂದು ವೇಳೆ ನಿಮೆಗೆ ಬೇರೆ ಎಲ್ಲಿಂದಾದರು QR ಕೋಡ್ ಪಡೆದುಕೊಂಡಿದ್ದರೆ ಅದನ್ನು ಸ್ಕ್ಯಾನ್ ಮಾಡಬೇಡಿ ಎಂದು SBI ಹೇಳಿದೆ. ಇದರಿಂದ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗುವ ಸಾಧ್ಯತೆ ಇದೆ. QR Code ಸ್ಕ್ಯಾನ್ ಮಾಡಿದಾಗ ನಿಮಗೆ ಹಣ ಸಿಗುವುದಿಲ್ಲ ಎಂದು SBI ತನ್ನ ಟ್ವೀಟ್ ನಲ್ಲಿ ಹೇಳಿದೆ. ಕೇವಲ ಯಾವುಅ ಖಾತೆಗೆ x ಹಣ ಹೋಗಿದೆ ಎಂಬುದರ ಕುರಿತು SMS ಮಾತ್ರ ನಿಮಗೆ ಸಿಗಲಿದೆ. ಹೀಗಾಗಿ ಯಾರೋ ಒಬ್ಬರು ನಡೆದಿರುವ QR ಕೋಡ್ ಸ್ಕ್ಯಾನ್ ಮಾಡಬೇಡಿ.
ATM ಕಾರ್ಡ್ ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ - ಇದಲ್ಲದೆ ಗ್ರಾಹಕರು ತಮ್ಮ ಏಟಿಎಂ ಕಾರ್ಡ್ ಅನ್ನೂ ಕೂಡ ಯಾರೊಂದಿಗೂ ಹಂಚಿಕೊಳ್ಳಬಾರದು ಇಂದರಿಂದ ನಿಮ್ಮ ATM ಕಾರ್ಡ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದ್ದು , ವಂಚಕರು ನಿಮಗೆ ವಂಚನೆ ಎಸಗುವ ಸಾದ್ಯತೆ ಇದೆ.
Punjab National Bank ಕೂಡ ತನ್ನ ಗ್ರಾಹಕರಿಗೆ ಬ್ಯಾಂಕ್ ವಂಚನೆಯ ಕುರಿತು ಅಲರ್ಟ್ ಜಾರಿಗೊಳಿಸಿ, ಫಿಶಿಂಗ್ ನಿಂದ ಎಚ್ಚರಿಕೆಯಿಂದಿರಲು ಸೂಚಿಸಿದೆ. ನಿಮ್ಮ ಚಿಕ್ಕ ತಪ್ಪಿನ ಕಾರಣ ನಿಮ್ಮ ಖಾತೆಯಲ್ಲಿನ ಹಣ ಕಾಲಿಯಾಗುವ ಸಾಧ್ಯತೆ ಇದೆ. ಈ ರೀತಿಯ ವಂಚನೆಯಿಂದ ಪಾರಾಗಲು ಬ್ಯಾಂಕ್ ಕೆಲ ಸಲಹೆಗಳನ್ನು ಕೂಡ ನೀಡಿದೆ.
ಇದನ್ನೂ ಓದಿ- PM Kissan : ಈ ದಿನ ರೈತರ ಖಾತೆಗೆ ಬೀಳಲಿದೆ 8ನೇ ಕಂತಿನ ಹಣ
ಫ್ರಾಡ್ ನಿಂದ ಹೇಗೆ ತೆಪ್ಪಿಸಿಕೊಳ್ಳಬೇಕು? 1. OTP, PIN, CVV, UPI PIN ಹಂಚಿಕೊಳ್ಳಬೇಡಿ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡರೆ ಏನು ಮಾಡಬೇಕು. 3. ಫೋನ್ ನಲ್ಲಿ ಎಂದಿಗೂ ಕೂಡ ಬ್ಯಾಂಕಿಂಗ್ ಮಾಹಿತಿ ಸಂಗ್ರಹಿಸಿಡಬೇಡಿ, 4. ATM ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹಂಚಿಕೊಲ್ಲಬೇಡಿ. 5. ನಿಮ್ಮಿಂದ ಬ್ಯಾಂಕ್ ಎಂದಿಗೂ ಕೂಡ ಈ ಮಾಹಿತಿ ಕೇಳುವುದಿಲ್ಲ 6. ಆನ್ಲೈನ್ ಪೇಮೆಂಟ್ ಮಾಡುವಾಗ ಎಚ್ಚರಿಕೆವಹಿಸಿ. 7. ಪರಿಶೀಲಿಸದೆ ಯಾವುದೇ ಸಾಫ್ಟ್ ವೆಯರ್ ಇನ್ಸ್ಟಾಲ್ ಮಾಡಬೇಡಿ. 8. ಅಪರಿಚಿತ ಲಿಂಕ್ ಗಳ ಮೇಲೆ ಕ್ಲಿಕ್ಕಿಸಬೇಡಿ 9. ಸ್ಪೈವೆಯರ್ ಗಳ ಕುರಿತು ಎಚ್ಚರಿಕೆ ವಹಿಸಿ.
ಇದನ್ನೂ ಓದಿ- ESIC Scheme: ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯ, ಸರ್ಕಾರದ ನಿಯಮಗಳನ್ನು ತಿಳಿಯಿರಿ
ICICI ಬ್ಯಾಂಕ್ ಹೇಳಿದ್ದೇನು?
ಈ ಕುರಿತು ಟ್ವೀಟ್ ಮಾಡಿರುವ ICICI ಬ್ಯಾಂಕ್ ಕೂಡ, ಬ್ಯಾಂಕ್ ನಿಮ್ಮಿಂದ ಎಂದಿಗೂ ಕೂಡ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ. ಬ್ಯಾಂಕ್ ನಿಮ್ಮಿಂದ ಎಂದಿಗೂ ಕೂಡ OTP, PIN, CVV, UPI PIN ಕೇಳುವುದಿಲ್ಲ. ಅಷ್ಟೇ ಅಲ್ಲ ಈ ರೀತಿಯ ಮಾಹಿತಿ ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್ ಎಚ್ಚರಿಸಿದೆ.
ಇದನ್ನೂ ಓದಿ- ತಪ್ಪಿ ಬೇರೆಯವರ ಖಾತೆಗೆ ದುಡ್ಡು ಟ್ರಾನ್ಸ್ಫರ್ ಆದರೆ ಹೀಗೆ ಮಾಡಿ ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.