ನವದೆಹಲಿ : ಕಳೆದ ಕೆಲವು ದಿನಗಳಿಂದ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸುವ (Old Note and Coin) ಮತ್ತು ಮಾರಾಟ ಮಾಡುವ ಪ್ರವೃತ್ತಿ ತೀವ್ರಗೊಂಡಿದೆ. ಹಲವರು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ (Online platform) ಮೂಲಕ ಮಾರಾಟ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಆರ್‌ಬಿಐ (RBI), ಇತ್ತೀಚೆಗೆ ಈ ಬಗ್ಗೆ ಒಂದು ಪ್ರಮುಖ ಮಾಹಿತಿಯನ್ನು ನೀಡಿದೆ. ಆನ್‌ಲೈನ್, ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ನೋಟುಗಳು ಮತ್ತು ನಾಣ್ಯಗಳ ಮಾರಾಟಕ್ಕಾಗಿ ಕೆಲವು ಮೋಸದ ಜಾಲ  ಕೇಂದ್ರೀಯ ಬ್ಯಾಂಕಿನ ಹೆಸರು ಮತ್ತು ಲಾಂಛನವನ್ನು ಬಳಸುತ್ತಿವೆ ಎಂದು ಆರ್‌ಬಿಐ ಹೇಳಿದೆ.


COMMERCIAL BREAK
SCROLL TO CONTINUE READING

ನೀವು ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ (Old Note and Coin) ಮಾಡಲು ಅಥವಾ ಖರೀದಿಸುವ ತಯಾರಿಯಲ್ಲಿದ್ದರೆ, ಮೊದಲು ಆರ್‌ಬಿಐ (RBI) ನೀಡಿರುವ ಈ ಸಂದೇಶವನ್ನು ತಿಳಿದುಕೊಳ್ಳಬೇಕು. ಆನ್‌ಲೈನ್ ವಂಚಕರು ನಿರಂತರವಾಗಿ ಗ್ರಾಹಕರನ್ನು ವಂಚಿಸಲು ಪ್ರಯತ್ನಿಸುತ್ತಿರುತ್ತಾರೆ ಎಂದು ಅದು ಹೇಳಿದೆ. 


ಇದನ್ನೂ ಓದಿ : BH-Series System: ಇನ್ಮುಂದೆ ನಿಮ್ಮ ವಾಹನದಿಂದ ನೀವು ಯಾವ ರಾಜ್ಯಕ್ಕೆ ಬೇಕಾದರೂ ಕೂಡ ಪ್ರಯಾಣ ಬೆಳೆಸಬಹುದು, ಪ್ರತ್ಯೇಕ RTO ನೋಂದಣಿ ಅಗತ್ಯವಿಲ್ಲ


ಆರ್‌ಬಿಐ ಹೇಳಿರುವುದೇನು ? :
ಈ ಬಗ್ಗೆ ಆರ್‌ಬಿಐ (RBI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ. ಕೆಲವರು "ಭಾರತೀಯ ರಿಸರ್ವ್ ಬ್ಯಾಂಕ್ ಹೆಸರು ಮತ್ತು ಲೋಗೋವನ್ನು ತಪ್ಪಾದ ರೀತಿಯಲ್ಲಿ ಬಳಸುತ್ತಿದ್ದಾರೆ. ವಿವಿಧ ಆನ್‌ಲೈನ್,  ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ (Onine, offline platform) ಮೂಲಕ ಹಳೆಯ ನೋಟ್ ಮತ್ತು ನಾಣ್ಯ ಮಾರಾಟ ಮಾಡಲು ಹಣ, ಕಮಿಷನ್, ತೆರಿಗೆ ಪಡೆಯುತ್ತಿರುವು ಗಮನಕ್ಕೆ ಬಂದಿದೆ ಎಂದು ಆರ್‌ಬಿಐ ಹೇಳಿದೆ.


ಮುಂದಿನ ತಿಂಗಳಿನಿಂದ PF ನಿಯಮದಲ್ಲಿ ಭಾರೀ ಬದಲಾವಣೆ! ನಿಮ್ಮ EPF ಹಣ ಸಿಕ್ಕಿಹಾಕಿಕೊಳ್ಳಬಹುದು, ತಕ್ಷಣವೇ ವಿವರಗಳನ್ನು ಪರಿಶೀಲಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.