Cyber Fraud - ದೇಶಾದ್ಯಂತ ಆನ್‌ಲೈನ್ ವಹಿವಾಟಿಗೆ ಸಂಬಂಧಿಸಿದಂತೆ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ವಂಚಕರು ನಿಮ್ಮ ಖಾತೆಯ ಮೇಲೂ ಕೂಡ ಕಣ್ಣು ಹಾಕುವ ಸಂಗತಿಯನ್ನು ಅಲ್ಲಗಳೆಯಲಾಗದು ಕರೋನಾ ಕಾಲದಲ್ಲಿ, ಜನರು ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ಬಳಸಲು ಪ್ರಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಂಚಕರು ತುಂಬಾ ಸಕ್ರಿಯರಾಗಿದ್ದಾರೆ. ಇಂತಹ ವಂಚಕರಿಂದ ಗ್ರಾಹಕರನ್ನು ರಕ್ಷಿಸಲು ಆರ್‌ಬಿಐ ಕಾಲಕಾಲಕ್ಕೆ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತಲೇ ಇರುತ್ತದೆ.


COMMERCIAL BREAK
SCROLL TO CONTINUE READING

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ RBI
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ತನ್ನ ಎಚ್ಚರಿಕೆಯಲ್ಲಿ, ಆರ್.ಬಿ. ಐ ಗ್ರಾಹಕರು ಹೇಗೆ ಈ ವಂಚನೆಗಳಿಂದ ಪಾರಾಗಬೇಕು ಎಂಬುದನ್ನು ಹೇಳಿದೆ. RBI ಸಲಹೆ ಅನುಸರಿಸುವ ಮೂಲಕ ಡಿಜಿಟಲ್  ವಹಿವಾಟಿನ ಸಮಯದಲ್ಲಿ ವಂಚನೆಗಳಿಂದ ಹೇಗೆ ಪಾರಾಗಬೇಕು ಎಂಬುದನ್ನು ತಿಳಿಯೋಣ ಬನ್ನಿ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡುವ ಮೂಲಕ, 'RBI ಹೇಳುತ್ತೆ.... ! ಸುರಕ್ಷಿತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಬ್ಯಾಂಕಿಂಗ್ ವಹಿವಾಟುಗಳಿಗಾಗಿ ಬಳಸಬೇಕು. ಅಲ್ಲದೆ, ವಹಿವಾಟುಗಳಿಗಾಗಿ ಸಾರ್ವಜನಿಕ ನೆಟ್‌ವರ್ಕ್‌ ಬಳಕೆಯನ್ನು ತಪ್ಪಿಸಬೇಕು. ಸುರಕ್ಷಿತ ವಹಿವಾಟು ನಿಮ್ಮಿಂದಲೇ ಆರಂಭವಾಗುತ್ತದೆ' ಎಂದು ಹೇಳಿದೆ.


Asaduddin Owaisi ಮೇಲೆ ಗುಂಡು ಹಾರಿಸಿದ್ದು ಯಾರು, ಯಾಕೆ ಆತ AIMIM ಸಂಸದನನ್ನು ಗುರಿಯಾಗಿಸಿದ್ದು?


3. ಅಧಿಕೃತ ವೆಬ್ ಸೈಟ್ ನಿಂದ ಕಾಂಟಾಕ್ಟ್ ಅನ್ನು ಪಡೆದುಕೊಳ್ಳಿ - ವಂಚಕರು ಯಾವಾಗಲು ಸುಳ್ಳು ಕಸ್ಟಮರ್ ಕೆಯರ್ ಸಂಖ್ಯೆಯನ್ನು ನೀಡುತ್ತಾರೆ. ಅದನ್ನು ನಂಬಲು ಅವರು ನಿಮಗೆ ತಾವು ಬ್ಯಾಂಕ್ ಅಥವಾ ಬಿಮಾ ಕಂಪನಿಯ ಅಧಿಕೃತ ಏಜೆಂಟ್ ಆಗಿರುವುದಾಗಿ ಮಾಹಿತಿ ನೀಡುತ್ತಾರೆ. ಹೀಗಾಗಿ ಅದನ್ನು ನಂಬುವ ಮೊದಲು ಬ್ಯಾಂಕ್ ಅಥವಾ ಬಿಮಾ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಸಂಖ್ಯೆಯನ್ನು ಮತ್ತೊಮ್ಮೆ ಕನ್ಫರ್ಮ್ ಮಾಡಿಕೊಳ್ಳಿ.


ಇದನ್ನೂ ಓದಿ-ನೀಟ್ ಸ್ನಾತಕೋತ್ತರ 2022 ಮುಂದೂಡಿಕೆ, ಆರೋಗ್ಯ ಸಚಿವಾಲಯ ನೀಡಿದ ಕಾರಣ ಇಲ್ಲಿದೆ


4. ಅಪರಿಚಿತ ಜಾಬ್/ e-ಕಾಮರ್ಸ್ ಪೋರ್ಟಲ್ ಬಳಸಿ ಪೇಮೆಂಟ್ ಮಾಡಬೇಡಿ - ನೋಂದಣಿ ಸಮಯದಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಇತ್ಯಾದಿ ಮಾಹಿತಿ ಹಂಚಿಕೊಳ್ಳುವ ಗ್ರಾಹಕರನ್ನು ವಂಚಿಸಲು ವಂಚಕರು ನಕಲಿ ಜಾಬ್ ಪೋರ್ಟಲ್ ಬಳಸುತ್ತಾರೆ. ಅಂತಹ ಪೋರ್ಟಲ್‌ಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಸುರಕ್ಷಿತ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.


ಇದನ್ನೂ ಓದಿ-ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಲಾಗಿದೆಯೇ? ಮನೆಯಲ್ಲೇ ಕುಳಿತು ಈ ರೀತಿ ಪರೀಕ್ಷಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.