ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಲಾಗಿದೆಯೇ? ಮನೆಯಲ್ಲೇ ಕುಳಿತು ಈ ರೀತಿ ಪರೀಕ್ಷಿಸಿ

ನೀವು ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಬಹುದು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನೀವು ಯಾವುದೇ ಗುರುತಿನ ಪುರಾವೆಯೊಂದಿಗೆ ಮತದಾರರ ಮಾಹಿತಿ ಸ್ಲಿಪ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳುವ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ನೋಡುವುದು ಹೇಗೆ ಎಂದು ತಿಳಿದುಕೊಳ್ಳಿರಿ.

Written by - Puttaraj K Alur | Last Updated : Feb 4, 2022, 01:18 PM IST
  • ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 1 ವರ್ಷವಷ್ಟೇ ಬಾಕಿ ಇದೆ
  • ನೀವು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಒಮ್ಮೆ ಪರಿಶೀಲಿಸಿರಿ
  • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ತಿಳಿದುಕೊಳ್ಳಿ
ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಲಾಗಿದೆಯೇ? ಮನೆಯಲ್ಲೇ ಕುಳಿತು ಈ ರೀತಿ ಪರೀಕ್ಷಿಸಿ title=
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ..?

ನವದೆಹಲಿ: ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ(5 State Election 2022)ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಯುಪಿಯಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಕೇವಲ 1 ವಾರ ಮಾತ್ರ ಬಾಕಿ ಉಳಿದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೂ ಕೇವಲ 1 ವರ್ಷ ಮಾತ್ರ ಬಾಕಿ ಇದೆ. ಹೀಗಾಗಿ ಈ ಸುದ್ದಿ ನಿಮಗೆ ಉಪಯೋಗವಾಗಬಹುದು. ನೀವು ಮತದಾನಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಒಮ್ಮೆ ಪರಿಶೀಲಿಸಿ. ಮತದಾರರ ಪಟ್ಟಿ(Voter List)ಯಲ್ಲಿ ಹೆಸರು ಪರಿಶೀಲಿಸಲು ಕಂಪ್ಯೂಟರ್ ಅಥವಾ ಮೊಬೈಲ್ ಬೇಕು. ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಇಂಟರ್ನೆಟ್‌ನಲ್ಲಿ ನಿಮ್ಮ ಹೆಸರನ್ನು ನೋಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ? ಇಲ್ಲವೋ?(Name In Voter List) ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು?

  • ಮೊದಲನೆಯದಾಗಿ ನೀವು  ಮತದಾರರ ಪಟ್ಟಿಯನ್ನು ಪರಿಶೀಲಿಸಲು http://sec.up.nic.in/site/PRIVoterSearch.aspx ಗೆ ಹೋಗಿ .
  • ಇಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
  • ಇದರ ನಂತರ ನಿಮ್ಮ Development Block ಅನ್ನು ಆಯ್ಕೆ ಮಾಡಿ.
  • ನಂತರ ನೀವು ಗ್ರಾಮ ಪಂಚಾಯತ್ ಅನ್ನು ಕ್ಲಿಕ್ ಮಾಡಿ.
  • - ಕೆಳಗೆ ಮತದಾರರ ಹೆಸರನ್ನು ನಮೂದಿಸಿ.
  • ನಿಮ್ಮ ತಾಯಿಯ/ತಂದೆಯ/ಗಂಡ ಅಥವಾ ಹೆಂಡತಿ ಹೆಸರನ್ನು ನಮೂದಿಸಿ.
  • ಮನೆ ಸಂಖ್ಯೆಯ ಬಾಕ್ಸ್ ನಲ್ಲಿ ನಿಮ್ಮ ಮನೆಯ ಸಂಖ್ಯೆ ನಮೂದಿಸಿ.
  • ಬಾಕ್ಸ್‌ ನಲ್ಲಿ ಕೆಳಗೆ ನೀಡಲಾದ Captcha Codeಅನ್ನು ಭರ್ತಿ ಮಾಡಿದ ನಂತರ, Search ಆಯ್ಕೆಯನ್ನು ಆರಿಸಿ. ಇದರ ನಂತರ ನಿಮ್ಮ ವಿವರಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Central Government Jobs: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆ ಖಾಲಿ

ಮತದಾರರ ಪಟ್ಟಿಯಲ್ಲಿ ಹೆಸರು ತಿಳಿಯುವ ಮತ್ತೊಂದು ಮಾರ್ಗ

ಮೊದಲನೆಯದಾಗಿ ನೀವು ಮತದಾರರ ಪಟ್ಟಿಯನ್ನು ಪರಿಶೀಲಿಸಲು https://Electoralsearch.in ವೆಬ್‌ಸೈಟ್‌ಗೆ ಹೋಗಿ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು 2 ಮಾರ್ಗಗಳಿವೆ. ನಿಮ್ಮ ಹೆಸರು, ವಿಳಾಸ ಇತ್ಯಾದಿ ವಿವರಗಳಿಂದ (Search Details) ಅಥವಾ ಗುರುತಿನ ಚೀಟಿಯ ವಿವರಗಳಿಂದ (Search By EPIC No.)ನೀವು ಹುಡುಕಬಹುದು.

1. ಹೆಸರು, ವಿಳಾಸ ಈ ರೀತಿಯ ಪ್ರಮುಖ ವಿವರಗಳ ಮೂಲಕ ಹುಡುಕಿ

  • ಮೇಲ್ಭಾಗದಲ್ಲಿ ನೀವು ‘Search Details’ ಆಯ್ಕೆಯನ್ನು ನೋಡುತ್ತೀರಿ.
  • ಇಲ್ಲಿ ನಿಮ್ಮ ಹೆಸರು, ತಂದೆ/ಗಂಡನ ಹೆಸರು ಮತ್ತು ಲಿಂಗವನ್ನು ನಮೂದಿಸಿ.
  • ನೀವು ಸೇರಿರುವ ರಾಜ್ಯವನ್ನು ಆಯ್ಕೆಮಾಡಿ, ಉದಾಹರಣೆಗೆ ನೀವು ಕರ್ನಾಟಕದ ನಿವಾಸಿಯಾಗಿದ್ದರೆ, ‘ಕರ್ನಾಟಕ’ ಆಯ್ಕೆಯನ್ನು ಆರಿಸಿ.
  • ಇದರ ನಂತರ ಕೆಳಗೆ ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ.
  • ನಂತರ ನೀವು ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡುತ್ತೀರಿ.
  • ಈಗ ನೀವು ಕೊಟ್ಟಿರುವ Captcha Codeಅನ್ನು ಬಾಕ್ಸ್‌ ನಲ್ಲಿ ನಮೂದಿಸಬೇಕು.
  • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಆ ವಿವರಗಳು ಈಗ ನಿಮ್ಮ ಮುಂದೆ ಕಾಣಿಸುತ್ತವೆ.   
  • ಇಲ್ಲಿ ನೀವು ಮತದಾರರ ಪಟ್ಟಿಯ ಮಾಹಿತಿಯ ಪ್ರಿಂಟ್ ತೆಗೆದುಕೊಳ್ಳಬಹುದು.

ಇದನ್ನೂ ಓದಿ: NEET PG Exam Postpone: ನೀಟ್ ಸ್ನಾತಕೋತ್ತರ 2022 ಮುಂದೂಡಿಕೆ, ಆರೋಗ್ಯ ಸಚಿವಾಲಯ ನೀಡಿದ ಕಾರಣ ಇಲ್ಲಿದೆ

2. ID ಸಂಖ್ಯೆ / EPIC ಸಂಖ್ಯೆ ಮೂಲಕ ಪರಿಶೀಲಿಸಿ.

  • ಮೊದಲನೆಯದಾಗಿ(Search by Identity No./Search by EPIC No.) ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • ಇಲ್ಲಿ ಹಲವು ವಿವರಗಳು ನಿಮ್ಮ ಮುಂದೆ ಬರಲಿವೆ.
  • ಇದರಲ್ಲಿ ನೀವು ನಿಮ್ಮ ಮತದಾರರ ಗುರುತಿನ ಸಂಖ್ಯೆ / EPIC ಸಂಖ್ಯೆ ನಮೂದಿಸಬಹುದು. ನಿಮ್ಮ ಗುರುತಿನ ಚೀಟಿಯಲ್ಲಿ ನಮೂದಿಸಿದಂತೆ EPIC ಸಂಖ್ಯೆ ನಮೂದಿಸಿ.
  • ಇದರ ನಂತರ ರಾಜ್ಯಗಳ ಪಟ್ಟಿಯ ಆಯ್ಕೆಯಿಂದ ನಿಮ್ಮ ರಾಜ್ಯವನ್ನು ಆಯ್ಕೆಮಾಡಿ (Select State from List)
  • ನಂತರ ಕೊಟ್ಟಿರುವ ಕೋಡ್ ಅನ್ನು Captcha Text ಬಾಕ್ಸ್‌ ನಲ್ಲಿ ನಮೂದಿಸಿ.
  • ಇದರ ನಂತರ ‘Search/Search’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಇದಾದ ನಂತರ ನಿಮ್ಮ ಎಲ್ಲಾ ವಿವರಗಳು ನಿಮ್ಮ ಮುಂದೆ ಬರುತ್ತವೆ. ಬೇಕಾದರೆ ನೀವು ಪ್ರಿಂಟ್ ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News