ನವದೆಹಲಿ : ಏಪ್ರಿಲ್ ತಿಂಗಳು ಪ್ರಾರಂಭವಾಗಲಿದೆ. ಇದರೊಂದಿಗೆ ಹೊಸ ಹಣಕಾಸು ವರ್ಷವೂ ಆರಂಭವಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ದಿನದಂದು ಬ್ಯಾಂಕ್‌ಗಳಲ್ಲಿ ಯಾವುದೇ ಸಾರ್ವಜನಿಕ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ. ಏಪ್ರಿಲ್  ತಿಂಗಳಲ್ಲಿ ಸುಮಾರು 15 ದಿನ ಬ್ಯಾಂಕ್‌ ರಜೆ ಇವೆ. 15 ದಿನಗಳ ರಜಾದಿನಗಳು ವಿವಿಧ ವಲಯಗಳಲ್ಲಿ ವಿಭಿನ್ನ ದಿನಗಳಾಗಿವೆ.


COMMERCIAL BREAK
SCROLL TO CONTINUE READING

ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ


ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್‌ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಬ್ಯಾಂಕುಗಳನ್ನು ಮುಚ್ಚಿದಾಗ, ಅದನ್ನು RBI ನಿರ್ಧರಿಸುತ್ತದೆ ಮತ್ತು ಕೆಲವೊಮ್ಮೆ ಸ್ಥಳೀಯ ಮಟ್ಟದಲ್ಲಿ, ರಾಜ್ಯ ಸರ್ಕಾರಗಳು ಸಹ ನಿರ್ಧರಿಸುತ್ತವೆ. ಆರ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಬ್ಯಾಂಕ್ ರಜೆ ಪಟ್ಟಿಯ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದಂದು ಬ್ಯಾಂಕ್‌ಗಳು ಬಂದ್ ಇರುತ್ತವೆ.


ಇದನ್ನೂ ಓದಿ : Arecanut Price: ಕಾರವಾರ, ಶಿವಮೊಗ್ಗ & ತುಮಕೂರಿನಲ್ಲಿ ಇಂದಿನ ಅಡಿಕೆ ಧಾರಣೆ


ಏಪ್ರಿಲ್ 1: ಹೊಸ ತಿಂಗಳು ಮತ್ತು ಆರ್ಥಿಕ ವರ್ಷದ ಮೊದಲ ದಿನದಂದು ಹೆಚ್ಚಿನ ವಲಯಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.ಅಂದು ಬ್ಯಾಂಕ್ ಆಡಿಟಿಂಗ್ ಇರುತ್ತದೆ. ಹೀಗಾಗಿ ಸಾರ್ವಜನಿಕರ ಕೆಲಸಗಳಿಗೆ ಅವಕಾಶವಿರುವುದಿಲ್ಲ.


ಏಪ್ರಿಲ್ 2: ಬೇಲಾಪುರ್, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ(Mumbai), ನಾಗ್ಪುರ, ಪಣಜಿ, ಬೆಂಗಳೂರು ಮತ್ತು ಶ್ರೀನಗರ ವಲಯಗಳು ಗುಡಿ ಪಾಡ್ವಾ / ಯುಗಾದಿ ಹಬ್ಬ / ನವರಾತ್ರಿಯ ಮೊದಲ ದಿನ ಇತ್ಯಾದಿಗಳ ಕಾರಣ ರಜೆ.


ಏಪ್ರಿಲ್ 3: ಈ ದಿನ ಭಾನುವಾರದ ಕಾರಣ ರಜೆ ಇರುತ್ತದೆ.


ಏಪ್ರಿಲ್ 4: ಸರ್ಹುಲ್ ಸಂದರ್ಭದಲ್ಲಿ, ರಾಂಚಿ ವಲಯದ ಬ್ಯಾಂಕ್‌ಗಳ ಶಾಖೆಗಳು ರಜೆ.


ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹೈದರಾಬಾದ್ ವಲಯದಲ್ಲಿ ರಜೆ ಇರುತ್ತದೆ.


ಏಪ್ರಿಲ್ 9: ತಿಂಗಳ ಎರಡನೇ ಶನಿವಾರದ ಕಾರಣ ಬ್ಯಾಂಕ್‌ಗಳಿಗೆ ರಜೆ.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ಡಿಎಯಲ್ಲಿ ಶೇ.3ರಷ್ಟು ಹೆಚ್ಚಳ, ಸಚಿವ ಸಂಪುಟದಲ್ಲಿ ಘೋಷಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.