ಈ ರಾಷ್ಟ್ರೀಯ ಬ್ಯಾಂಕ್ ವಿರುದ್ದ ಆರ್ ಬಿಐ ಕ್ರಮ ! ಲಕ್ಷಾಂತರ ಗ್ರಾಹಕರ ಮುಂದಿರುವ ಆಯ್ಕೆ ಏನು ?
ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರನ್ನು ಸೇರಿಸಿದ ಹಿನ್ನೆಲೆಯಲ್ಲಿ ಕೆಲವೊಂದು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಬೆಂಗಳೂರು : ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ (BOB) ಉಳಿತಾಯ ಅಥವಾ ಚಾಲ್ತಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿಯನ್ನು ಒಮ್ಮೆ ಓದಿ. ಬ್ಯಾಂಕ್ ಆಫ್ ಬರೋಡಾ (BOB) ತನ್ನ ಮೊಬೈಲ್ ಅಪ್ಲಿಕೇಶನ್ 'ಬಾಬ್ ವರ್ಲ್ಡ್' ನಲ್ಲಿ ಹೊಸ ಗ್ರಾಹಕರನ್ನು ಸೇರಿಸುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಬಂಧಿಸಿದೆ. ರಿಸರ್ವ್ ಬ್ಯಾಂಕ್ ನ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ. ಇದರರ್ಥ ಈಗ ಹೊಸ ಗ್ರಾಹಕರು ಅಪ್ಲಿಕೇಶನ್ ಮೂಲಕ ಸೇರಲು ಸಾಧ್ಯವಾಗುವುದಿಲ್ಲ. ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರನ್ನು ಸೇರಿಸಿದ ಹಿನ್ನೆಲೆಯಲ್ಲಿ ಕೆಲವೊಂದು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಹಳೆಯ ಗ್ರಾಹಕರು ಮೊದಲಿನಂತೆ ಆಪ್ ಮೂಲಕ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.
ಅಸ್ತಿತ್ವದಲ್ಲಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಇಲ್ಲ :
ಬಾಬ್ ವರ್ಲ್ಡ್' ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೊಸ ಗ್ರಾಹಕರನ್ನು ಸೇರಿಸುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕ್ ಆಫ್ ಬರೋಡಾಗೆ ಸೂಚಿಸಲಾಗಿದೆ ಎಂದು ಆರ್‌ಬಿಐ ಹೊರಡಿಸಿದ ಹೇಳಿಕೆಯಲ್ಲಿ ಹೇಳಲಾಗಿದೆ. ಬ್ಯಾಂಕ್ ಕಂಡುಕೊಂಡ ನ್ಯೂನತೆಗಳನ್ನು ತಕ್ಷಣವೇ ಪರಿಹರಿಸಬೇಕು. ಸಂಬಂಧಿತ ಪ್ರಕ್ರಿಯೆಗಳನ್ನು ಬಲಪಡಿಸಬೇಕು.ಮಾತ್ರವಲ್ಲ, ಈ ಪ್ರಕ್ರಿಯೆಗಳಿಂದ ತೃಪ್ತಿಗೊಂಡ ನಂತರವೇ 'ಬಾಬ್ ವರ್ಲ್ಡ್' ಆ್ಯಪ್‌ನಲ್ಲಿ ಗ್ರಾಹಕರನ್ನು ಸೇರಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಆದರೆ ಆರ್ ಬಿಐ ಕೈಗೊಂಡ ಕ್ರಮದಿಂದ ಅಸ್ತಿತ್ವದಲ್ಲಿರುವ 'ಬಾಬ್ ವರ್ಲ್ಡ್' ಗ್ರಾಹಕರು ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎನ್ನುವುದನ್ನು ಕೂಡಾ ಬ್ಯಾಂಕ್ ಖಚಿತಪಡಿಸಿಕೊಳ್ಳಬೇಕು ಎಂದು ಆರ್‌ಬಿಐ ಬ್ಯಾಂಕ್‌ಗೆ ಆದೇಶಿಸಿದೆ.
ಇದನ್ನೂ ಓದಿ : ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿವೆ ಈ 4 ಬ್ಯಾಂಕ್ ಗಳು! ಇಲ್ಲಿದೆ ವರದಿ
ನ್ಯೂನತೆ ನಿವಾರಣೆಗೆ ಕ್ರಮ:
ಬ್ಯಾಂಕ್ ಆಫ್ ಬರೋಡಾ ಹೊರಡಿಸಿದ ಹೇಳಿಕೆಯಲ್ಲಿ, ಆರ್‌ಬಿಐ ಕಳವಳಗಳನ್ನು ಪರಿಹರಿಸಲು ಈಗಾಗಲೇ ಸುಧಾರಣೆಗೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗಿದೆ. ಗುರುತಿಸಲಾದ ಉಳಿದ ಕೊರತೆಗಳನ್ನು ಪರಿಹರಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗ್ರಾಹಕರು ಯಾವುದೇ ಸಮಸ್ಯೆ ಎದುರಿಸಬೇಕಾಗಿಲ್ಲ ಎಂದು ಬ್ಯಾಂಕ್ ಭರವಸೆ ನೀಡಿದೆ. ಅಲ್ಲದೆ, BoB ವರ್ಲ್ಡ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಯಾವುದೇ ಅಡಚಣೆಯಿಲ್ಲದೆ ಸೇವೆಯನ್ನು ಬಳಸುವುದನ್ನು ಮುಂದುವರಿಸಲಾಗುತ್ತದೆ. ನೆಟ್ ಬ್ಯಾಂಕಿಂಗ್, ವಾಟ್ಸಾಪ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಎಟಿಎಂನಂತಹ ಇತರ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸ್ತುತ ಗ್ರಾಹಕರ ಸೇವೆಗಳ ಜೊತೆಗೆ ಹೊಸ ಗ್ರಾಹಕರನ್ನು ಸೇರಿಸುವುದರ ಮೇಲೆ ಈ ಆದೇಶವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬ್ಯಾಂಕ್ ಪರವಾಗಿ ಹೇಳಲಾಗಿದೆ.
ಬ್ಯಾಂಕ್‌ನ ಕೆಲವು ಉದ್ಯೋಗಿಗಳು BOB ವರ್ಲ್ಡ್ ಆ್ಯಪ್‌ನಲ್ಲಿ ಗ್ರಾಹಕರನ್ನು ಮೋಸದಿಂದ ನೋಂದಾಯಿಸುವಲ್ಲಿ ತೊಡಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಾದ ನಂತರ RBIನ ಈ ಕ್ರಮ ಕೈಗೊಂಡಿದೆ. ಬ್ಯಾಂಕ್‌ನ ಭೋಪಾಲ್ ವಲಯ ಕಚೇರಿಯ ಕೆಲವು ಉದ್ಯೋಗಿಗಳು ಕೆಲವು ಬ್ಯಾಂಕ್ ಖಾತೆಗಳನ್ನು ವಿವಿಧ ಜನರ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು. BOB ವರ್ಲ್ಡ್‌ನಲ್ಲಿ ನೋಂದಣಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು.
ಇದನ್ನೂ ಓದಿ : ಸರ್ಕಾರಿ ನೌಕರರ ಕನಿಷ್ಟ ವೇತನ 26,000 ರೂ.ಗೆ ಏರಿಕೆ ! ಈ ದಿನದಂದು ಹೊರ ಬೀಳುವುದು ಅಧಿಸೂಚನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.