ಕರ್ನಾಟಕದ ಮತ್ತೊಂದು ಬ್ಯಾಂಕ್ನ ಲೈಸೆನ್ಸ್ ರದ್ದುಗೊಳಿಸಿದ RBI, ಠೇವಣಿದಾರರಿಗೆ ಸಮಸ್ಯೆ!
ಶೇ.99ಕ್ಕಿಂತ ಹೆಚ್ಚಿನ ಠೇವಣಿದಾರರಿಗೆ ಠೇವಣಿಗಳ ಪೂರ್ಣ ಮೊತ್ತವನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನಿಂದ ಸ್ವೀಕರಿಸಲು ಅವಕಾಶವಿರುತ್ತದೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕರ್ನಾಟಕದ ಸಹಕಾರಿ ಬ್ಯಾಂಕ್ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ. ಬಾಗಲಕೋಟೆಯಲ್ಲಿರುವ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ಆರ್‌ಬಿಐ ರದ್ದುಗೊಳಿಸಿದೆ. ಈ ಆದೇಶ ಜೂನ್ 8ರಿಂದ ಜಾರಿಗೆ ಬಂದಿದೆ. ಆರ್‌ಬಿಐನ ಈ ಕ್ರಮದ ನಂತರ ಮುಧೋಳ ಸಹಕಾರಿ ಬ್ಯಾಂಕ್‌ಗೆ ಠೇವಣಿ ಮರುಪಾವತಿ ಮತ್ತು ನಗದು ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ಠೇವಣಿದಾರರಿಗೆ ಸಮಸ್ಯೆ..!
ಪರವಾನಗಿ ರದ್ದುಗೊಳಿಸುವುದಾಗಿ ಘೋಷಿಸಿರುವ ಆರ್‌ಬಿಐ ಮುಧೋಳ ಕೋ-ಆಪರೇಟಿವ್ ಬ್ಯಾಂಕ್‌ಗೆ ಸಾಕಷ್ಟು ಬಂಡವಾಳ ಮತ್ತು ಆದಾಯದ ನಿರೀಕ್ಷೆಗಳಿಲ್ಲ ಎಂದು ಹೇಳಿದೆ. ಬ್ಯಾಂಕ್ ತನ್ನ ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ತನ್ನ ಅಸ್ತಿತ್ವದಲ್ಲಿರುವ ಠೇವಣಿದಾರರಿಗೆ ಪೂರ್ಣಪ್ರಮಾಣದ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: Bullet Train : ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ : ಟಿಕೆಟ್ ದರ ತಿಳಿಸಿದ ಸರ್ಕಾರ!
ಗ್ರಾಹಕರ ಹಣಕ್ಕೆ ಏನಾಗುತ್ತದೆ..?
ಕೇಂದ್ರೀಯ ಬ್ಯಾಂಕಿನ ನಿಯಮಗಳ ಪ್ರಕಾರ, ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾದ ಗ್ರಾಹಕರು ತಮ್ಮ ಮೊತ್ತವನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ ತೆಗೆದುಕೊಳ್ಳಬಹುದು. ಈ ನಿಯಮದ ಪ್ರಕಾರ 5 ಲಕ್ಷ ರೂ.ವರೆಗೆ ವಿಮಾ ಮೊತ್ತ ನೀಡಲು ನಿಯಮವಿದೆ. ಇದಕ್ಕಿಂತ ಹೆಚ್ಚಿನ ಮೊತ್ತ ನಿಮಗೆ ಸಿಗುವುದಿಲ್ಲ.
ಇದರಡಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಉಳಿತಾಯ, ಸ್ಥಿರ, ಚಾಲ್ತಿ, ಸ್ಥಿರ ಠೇವಣಿ ಮುಂತಾದ ಎಲ್ಲಾ ರೀತಿಯ ಠೇವಣಿಗಳನ್ನು ಸೇರಿಸಲಾಗಿದೆ. ಇದರಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳು ಸಹ ಬರುತ್ತವೆ.
ಇದನ್ನೂ ಓದಿ: PPF ನಲ್ಲಿ ಸರ್ಕಾರದ ವತಿಯಿಂದ 5 ಮಹತ್ವದ ಬದಲಾವಣೆಗಳು, ಹೂಡಿಕೆ ಮಾಡುವ ಮೊದಲು ಈ ಸುದ್ದಿ ಓದಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.