IRCTC Train Ticket Reservation: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್

 ನೀವು ಪ್ರತಿ ತಿಂಗಳು ಭಾರತೀಯ ರೈಲ್ವೆಯಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದರೆ ಆದರೆ ಟಿಕೆಟ್ ಬುಕಿಂಗ್ ಮಿತಿಯಿಂದಾಗಿ ನೀವು ತೊಂದರೆ ಅನುಭವಿಸುತ್ತಿದ್ದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ನಿಯಮಗಳನ್ನು ರೈಲ್ವೆ ಬದಲಾಯಿಸಿದೆ. ವಾಸ್ತವವಾಗಿ, ಈಗ ನೀವು ಆಧಾರ್ ಲಿಂಕ್ ಮಾಡಲಾದ ಐಆರ್ಸಿಟಿಸಿ  ಬಳಕೆದಾರ ಐಡಿ ಇಲ್ಲದೆಯೇ ಒಂದು ತಿಂಗಳಲ್ಲಿ ಗರಿಷ್ಠ 12 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದೇ ಸಮಯದಲ್ಲಿ, ಆಧಾರ್ ಲಿಂಕ್ ಮಾಡಿದ ಬಳಕೆದಾರ ಐಡಿ ಮೂಲಕ ಗರಿಷ್ಠ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು.

Written by - Yashaswini V | Last Updated : Jun 7, 2022, 12:41 PM IST
  • ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ನಿಯಮಗಳನ್ನು ರೈಲ್ವೆ ಬದಲಾಯಿಸಿದೆ.
  • ಒಂದು ತಿಂಗಳಲ್ಲಿ ಹೆಚ್ಚಿನ ಟಿಕೆಟ್‌ಗಳನ್ನು ಕಾಯ್ದಿರಿಸುವ ಅವಕಾಶ
  • IRCTC ಬಳಕೆದಾರರ ಐಡಿಯಿಂದ ಒಂದು ತಿಂಗಳಲ್ಲಿ ಗರಿಷ್ಠ 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.
IRCTC Train Ticket Reservation: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್  title=
IRCTC Train Ticket Reservation

ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ನಿಯಮದಲ್ಲಿ ಬದಲಾವಣೆ:  ನೀವು ಪ್ರತಿ ತಿಂಗಳು ಭಾರತೀಯ ರೈಲ್ವೆಯಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದರೆ ಆದರೆ ಟಿಕೆಟ್ ಬುಕಿಂಗ್ ಮಿತಿಯಿಂದಾಗಿ ನೀವು ತೊಂದರೆ ಅನುಭವಿಸುತ್ತಿದ್ದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ನಿಯಮಗಳನ್ನು ರೈಲ್ವೆ ಬದಲಾಯಿಸಿದೆ. ವಾಸ್ತವವಾಗಿ, ಈಗ ನೀವು ಆಧಾರ್ ಲಿಂಕ್ ಮಾಡಲಾದ ಐಆರ್ಸಿಟಿಸಿ  ಬಳಕೆದಾರ ಐಡಿ ಇಲ್ಲದೆಯೇ ಒಂದು ತಿಂಗಳಲ್ಲಿ ಗರಿಷ್ಠ 12 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದೇ ಸಮಯದಲ್ಲಿ, ಆಧಾರ್ ಲಿಂಕ್ ಮಾಡಿದ ಬಳಕೆದಾರ ಐಡಿ ಮೂಲಕ ಗರಿಷ್ಠ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ ಮಾಸಿಕ ಮಿತಿ ಹೆಚ್ಚಿಸಿದ ಐಆರ್ಸಿಟಿಸಿ :
ಇದಕ್ಕೂ ಮೊದಲು ಆಧಾರ್ ಲಿಂಕ್ಡ್ ಯೂಸರ್ ಐಡಿ ಇಲ್ಲದೆ, ಒಂದು ತಿಂಗಳಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶವಿತ್ತು. ಆದರೆ ಆಧಾರ್ ಲಿಂಕ್ಡ್ ಯೂಸರ್ ಐಡಿ ಮೂಲಕ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶವಿತ್ತು. ಇದೀಗ ರೈಲ್ವೇ ಪ್ರಯಾಣಿಕರಿಗೆ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ ಮಿತಿಯನ್ನು ಹೆಚ್ಚಿಸಲಾಗಿದೆ. ಇದರಿಂದ ನೀವು ಒಂದು ತಿಂಗಳಲ್ಲಿ ಹೆಚ್ಚಿನ ಟಿಕೆಟ್‌ಗಳನ್ನು ಬುಕ್ ಮಾಡುವ ಅವಕಾಶವನ್ನು ಪಡೆಯುತ್ತೀರಿ.   

ಇದನ್ನೂ ಓದಿ- LPG Subsidy: ಉಚಿತ ಎಲ್ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ! ನೀವೂ ತಿಳಿದುಕೊಳ್ಳಿ

ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಭಾರತೀಯ ರೈಲ್ವೇಯು ಆಧಾರ್ ಲಿಂಕ್ ಮಾಡದ ಬಳಕೆದಾರರ ಐಡಿ ಮೂಲಕ ಒಂದು ತಿಂಗಳಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡುವ ಮಿತಿಯನ್ನು 12 ಟಿಕೆಟ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ ಮತ್ತು ಬಳಕೆದಾರರಿಂದ ಒಂದು ತಿಂಗಳಲ್ಲಿ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡುವ ಮಿತಿಯನ್ನು 24 ಟಿಕೆಟ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಆಧಾರ್ ಲಿಂಕ್ ಆಗಿರುವ ಐಡಿ ಮತ್ತು ಟಿಕೆಟ್ ಬುಕಿಂಗ್ ಮಾಹಿತಿಯನ್ನು ಆಧಾರ್ ಮೂಲಕ ಪರಿಶೀಲಿಸಬಹುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಹಾಗೂ ಕುಟುಂಬ ಸದಸ್ಯರಿಗೆ ರೈಲು ಟಿಕೆಟ್ ಕಾಯ್ದಿರಿಸಲು ಒಂದೇ ಖಾತೆಯನ್ನು ಬಳಸುವವರಿಗೆ ಈ ಹೊಸ ನಿಯಮದಿಂದ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ- Sukanya Samriddhi ಯೋಜನೆಯಲ್ಲಿ ಸರ್ಕಾರದಿಂದ 5 ಪ್ರಮುಖ ಬದಲಾವಣೆಗಳು!

ಐಆರ್ಸಿಟಿಸಿ ಖಾತೆಯನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ? 
>> ಮೊದಲಿಗೆ ಐಆರ್ಸಿಟಿಸಿ ಅಧಿಕೃತ ವೆಬ್‌ಸೈಟ್ http://irctc.co.in ಗೆ ಹೋಗಿ.
>> ಐಆರ್ಸಿಟಿಸಿ ಖಾತೆಗೆ ಲಾಗ್ ಇನ್ ಮಾಡಿ.
>> ಮುಖಪುಟದಲ್ಲಿ, 'My Account' ಆಯ್ಕೆಯಲ್ಲಿ 'Link Your Aadhaar' ಅನ್ನು ಕ್ಲಿಕ್ ಮಾಡಿ.
>> ಇದರ ನಂತರ, ಆಧಾರ್ ಸಂಬಂಧಿತ ಮಾಹಿತಿಯನ್ನು ನಮೂದಿಸಿ ಮತ್ತು ಚೆಕ್ ಬಾಕ್ಸ್‌ಗೆ ಹೋಗಿ ಮತ್ತು 'ಒಟಿಪಿ ಕಳುಹಿಸಿ' ಆಯ್ಕೆಯನ್ನು ಆರಿಸಿ.
>> ಈಗ ಒಟಿಪಿ ಅನ್ನು ನಮೂದಿಸುವಾಗ, ಒಟಿಪಿ ಅನ್ನು ಪರಿಶೀಲಿಸಿ ಆಯ್ಕೆಮಾಡಿ.
>> ಕೆವೈಸಿ ಪೂರ್ಣಗೊಂಡ ನಂತರ, ನಿಮ್ಮ ಆಧಾರ್ ಅನ್ನು ಐಆರ್ಸಿಟಿಸಿ  ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News