RBI On Paytm Payment Bank: ಭಾರತೀಯ ರಿಸರ್ವ್ ಬ್ಯಾಂಕ್ ಇಂದು Paytm ಪೇಮೆಂಟ್ಸ್ ಬ್ಯಾಂಕ್ ಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಹೆಚ್ಚುವರಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ನೀವು Paytm ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗಾಗಿ. @paytm ಹ್ಯಾಂಡಲ್ ಮೂಲಕ ಯುಪಿಐ ಪಾವತಿ ಮಾಡುವ ಗ್ರಾಹಕರಿಗೆ ಡಿಜಿಟಲ್ ವಹಿವಾಟುಗಳು ಸರಿಯಾಗಿ ಕಾರ್ಯನಿರ್ವಹಿಸುವಿಕೆಯನ್ನು ಖಚಿತಪಡಿಸಲು ಆರ್ಬಿಐ  ಇಂದು ಕೆಲ ಕ್ರಮಗಳನ್ನು ಕೈಗೊಂಡಿದೆ. ಇತರ ಹೊಸ ಬ್ಯಾಂಕ್‌ಗಳಿಗೆ @paytm ಹ್ಯಾಂಡಲ್ ಅನ್ನು ಮೈಗ್ರೇಟ್ ಮಾಡಲು  ಡಿಜಿಟಲ್ ಪಾವತಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಸಂಸ್ಥೆಯಾದ ಎನ್ಪಿಸಿಐ ಅನ್ನು ಸೆಂಟ್ರಲ್ ಬ್ಯಾಂಕ್ ಕೋರಿದೆ.(Business News In Kannada)


COMMERCIAL BREAK
SCROLL TO CONTINUE READING

ಯುಪಿಐ ವ್ಯವಸ್ಥೆಯ ಅಡಿಯಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಲು One 97 Communications Ltd ನ ವಿನಂತಿಯನ್ನು ಪರಿಶೀಲಿಸುವಂತೆ  ಆರ್ಬಿಐ ಎನ್ಪಿಸಿಐ ಅನ್ನು ಕೋರಿದೆ. ಒಂದೊಮ್ಮೆ ಒಸಿಎಲ್ ಟಿಪಿಎಪಿ ಸ್ಥಿತಿಯನ್ನು ಪಡೆದುಕೊಂಡ ಬಳಿಕ, ಗ್ರಾಹಕರನ್ನು ಯಾವುದೇ ತೊಂದರೆಗೆ ಸಿಲುಕಿಸದೆ @paytm ಹ್ಯಾಂಡಲ್ ಹೊಸ ಬ್ಯಾಂಕ್ ಗಳಿಗೆ ಮೈಗ್ರೇಟ್ ಮಾಡಬೇಕು ಎಂದು ಆರ್ಬಿಐ ಹೇಳಿದೆ.


ಇದನ್ನೂ ಓದಿ-Rail Fare Reduced: ದಿನನಿತ್ಯ ಪ್ರಯಾಣಿಸುವ ಯಾತ್ರಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ರೇಲ್ವೆ ಮಂಡಳಿ, ಕನಿಷ್ಠ ಪ್ರಯಾಣ ದರದಲ್ಲಿ ಭಾರಿ ಇಳಿಕೆ!


ಎನ್‌ಪಿಸಿಐಗೆ ಆರ್‌ಬಿಐ ಸಲಹೆ
ಇತರ ಹೊಸ ಬ್ಯಾಂಕ್‌ಗಳಿಗೆ @paytm ಹ್ಯಾಂಡಲ್ ಅನ್ನು ಮೈಗ್ರೇಟ್ ಮಾಡಲು ಎನ್ಪಿಸಿಐಗೆ ಆರ್ಬಿಐ ಸಲಹೆ ನೀಡಿದೆ. ವಲಸೆ ಪೂರ್ಣಗೊಳ್ಳುವವರೆಗೆ ಯಾವುದೇ ಹೊಸ ಗ್ರಾಹಕರನ್ನು ಸೇರಿಸಲು ಒಸಿಎಲ್ ಗೆ ಸಾಧ್ಯವಾಗುವುದಿಲ್ಲ. ತಡೆರಹಿತ ವಲಸೆಗಾಗಿ ಎನ್ಪಿಸಿಐ 4-5 ಬ್ಯಾಂಕ್‌ಗಳನ್ನು ಪಾವತಿ ಸೇವಾ ಪೂರೈಕೆದಾರರು ಎಂದು ಪ್ರಮಾಣೀಕರಿಸುತ್ತದೆ. ಇವು ಹೆಚ್ಚಿನ ಪ್ರಮಾಣದ ಯುಪಿಐ ವಹಿವಾಟುಗಳನ್ನು ನಿಭಾಯಿಸಬಲ್ಲ ಬ್ಯಾಂಕ್‌ಗಳಾಗಿವೆ.


ಇದನ್ನೂ ಓದಿ-Good News: PM Kisan 16ನೇ ಕಂತಿನ ನಿರೀಕ್ಷೆಗೆ ತೆರೆ, ಈ ದಿನ ಬಿಡುಗಡೆಯಾಗಲಿದೆ ಹಣ!


ಪೇಟಿಎಂ ಬಳಕೆದಾರರಿಗೆ ಆರ್ಬಿಐ ಸಲಹೆ
Paytm ಮರ್ಚೆಂಟ್ಸಗಳಿಗೆ ಉಂಟಾಗುವ ಸಂಭಾವ್ಯ ತೊಂದರೆ ತಪ್ಪಿಸಲು, Paytm ಪಾವತಿ ಸೇವಾ ಪೂರೈಕೆದಾರರು ಬ್ಯಾಂಕ್‌ನಲ್ಲಿ ಸೆಟಲ್ಮೆಂಟ್ ಖಾತೆಗಳನ್ನು ತೆರೆಯುವ ಮೂಲಕ ಮರ್ಚೆಂಟ್ಸ್ ಗಳನ್ನು  ಇತ್ಯರ್ಥಪಡಿಸಬಹುದು. Paytm ನಲ್ಲಿ ವ್ಯಾಲೆಟ್ ಹೊಂದಿರುವ ಗ್ರಾಹಕರು ತಮ್ಮ ವ್ಯಾಲೆಟ್ ಅನ್ನು ಇತರ ಬ್ಯಾಂಕ್‌ಗಳಲ್ಲಿ ತೆರೆಯಬೇಕು ಎಂದು ಆರ್ಬಿಐ ಸಲಹೆ ನೀಡಿದೆ. ಮಾರ್ಚ್ 15 ರ ಮೊದಲು ಮತ್ತೊಂದು ಆಯ್ಕೆಯನ್ನು ಹುಡುಕಲು Paytm ಪೇಮೆಂಟ್ ಬ್ಯಾಂಕ್ ನೀಡಿದ ಫಾಸ್ಟ್ಯಾಗ್ ಮತ್ತು ಎನ್ಸಿಎಂಸಿ  ಕಾರ್ಡ್‌ದಾರರಿಗೆ RBI ಸಲಹೆ ನೀಡಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.