RBI Monitary Policy: ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರಕ್ಕೆ ಸಂಬಂಧಿಸಿದಂತೆ ತನ್ನ ಮುನ್ಸೂಚನೆಯನ್ನು ಪ್ರಕಟಿಸಿದೆ. 2023-24 ಹಣಕಾಸು ವರ್ಷದಲ್ಲಿ  ಹಣದುಬ್ಬರ ದರಾ ಶೇ. 5.1 ಕ್ಕೆ ಇಳಿಕೆಯಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ ಹಣಕಾಸು ನೀತಿ ಸಮಿತಿ ಫಲಿತಾಂಶಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಕ್ರಮಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡಲಿವೆ ಎಂದು ದಾಸ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಏಪ್ರಿಲ್‌ ಹಣದುಬ್ಬರ ದರಾ ಶೇ. 5.2 ರಷ್ಟಿತ್ತು ಎಂದು ಅಂದಾಜಿಸಲಾಗಿದೆ
ಏಪ್ರಿಲ್‌ನ ಹಣಕಾಸು ಪರಿಶೀಲನಾ ಸಭೆಯಲ್ಲಿ, ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು 2023-24ರಲ್ಲಿ ಶೇಕಡಾ 5.2 ಎಂದು ಅಂದಾಜಿಸಲಾಗಿತ್ತು. ಗ್ರಾಹಕರ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರವು ಫೆಬ್ರವರಿಯಲ್ಲಿನ ಶೇ. 6.4 ಕ್ಕಿಂತ ಈ ವರ್ಷ ಏಪ್ರಿಲ್‌ನಲ್ಲಿ ಶೇ. 4.7 ಕ್ಕೆ ಇಳಿದಿದೆ. ಹಣದುಬ್ಬರವು ಎಲ್ಲಾ ಮೂರು ಪ್ರಮುಖ ಗುಂಪುಗಳಲ್ಲಿ ಅನುಕೂಲಕರವಾದ ಮೂಲ ಪರಿಣಾಮ ಮತ್ತು ಉಳಿತಾಯವನ್ನು ಹೊಂದಿದೆ.


ಇದನ್ನೂ ಓದಿ-Monsoon: ಕೇರಳ ಕದ ತಟ್ಟಿದ ಮಾನ್ಸೂನ್, ದೇಶದ ಬೇರೆ ಬೇರೆ ಭಾಗಗಳಲ್ಲಿ ಮುಂಗಾರಿನ ಸಿಂಚನ ಯಾವಾಗ?


ಸಹನೆಯ ವ್ಯಾಪ್ತಿಯಲ್ಲಿದೆ ಹಣದುಬ್ಬರ
ಭಾರತದಲ್ಲಿ ಗ್ರಾಹಕ ಹಣದುಬ್ಬರವು ಮಾರ್ಚ್-ಏಪ್ರಿಲ್, 2023 ರ ಅವಧಿಯಲ್ಲಿ ಮಿತವಾಗಿದೆ ಮತ್ತು ಅದು ರಿಸರ್ವ್ ಬ್ಯಾಂಕಿನ ಶೇ.2 ರಿಂದ ಶೇ.6ರ ತೃಪ್ತಿಕರ ವ್ಯಾಪ್ತಿಯಲ್ಲಿ ಬಂದಿದೆ ಎಂದು ದಾಸ್ ಹೇಳಿದ್ದಾರೆ. 2022-23ರಲ್ಲಿ ಇದು ಶೇ.6.7ರಷ್ಟಿತ್ತು. ಪ್ರಮುಖ ಹಣದುಬ್ಬರವು ಇನ್ನೂ ಗುರಿಗಿಂತ ಮೇಲಿರಲಿದೆ ಮತ್ತು 2023-24 ರ ಉಳಿದ ತಿಂಗಳುಗಳಲ್ಲಿ ಇದು ಗುರಿಯ ಮೇಲೆ ಉಳಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Global Economy Outlook: ದುಬಾರಿ ಸಾಲ ವಿಶ್ವದ ಆರ್ಥಿಕ ಬೆಳವಣಿಗೆಗೆ ಭಾರಿ ಪೆಟ್ಟು ನೀಡಲಿದೆ ಎಂದ ವಿಶ್ವ ಬ್ಯಾಂಕ್


ಹಣದುಬ್ಬರದ ಬಗ್ಗೆ ಈ ಅಂದಾಜು ವ್ಯಕ್ತವಾಗಿದೆ
ಹೀಗಿರುವಾಗ, ಹಣ ವರ್ಗಾವಣೆಯ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡುವುದು ತುಂಬಾ ಮುಖ್ಯವಾದ ವಿಚಾರವಾಗಿದೆ ಎಂದು ದಾಸ್ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಮಾನ್ಸೂನ್ ಮುನ್ಸೂಚನೆಗಳು ಮತ್ತು ಎಲ್ ನಿನೋ ಪರಿಣಾಮಗಳು ಇನ್ನೂ ಅನಿಶ್ಚಿತವಾಗಿವೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರವು 2023-24ರಲ್ಲಿ ಶೇಕಡಾ ಶೇ. 5.1 ರಷ್ಟಿರುವ ಸಾಧ್ಯತೆ ಇದೆ ಎಂದು ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ಇದು ಮೊದಲ ತ್ರೈಮಾಸಿಕದಲ್ಲಿ ಶೇ.4.6, ಎರಡನೇ ತ್ರೈಮಾಸಿಕದಲ್ಲಿ ಶೇ.5.2, ಮೂರನೇ ತ್ರೈಮಾಸಿಕದಲ್ಲಿ ಶೇ.5.4 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.2 ಆಗಿರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.