Monsoon: ಕೇರಳ ಕದ ತಟ್ಟಿದ ಮಾನ್ಸೂನ್, ದೇಶದ ಬೇರೆ ಬೇರೆ ಭಾಗಗಳಲ್ಲಿ ಮುಂಗಾರಿನ ಸಿಂಚನ ಯಾವಾಗ?

Monsoon Update: ಮುಂಗಾರು ಮಳೆಗಾಗಿ ಕಾಯುತ್ತಿರುವವರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.  ಕೇರಳಕ್ಕೆ ಮುಂಗಾರು ಅಪ್ಪಳಿಸಿದೆ. ಆದರೆ, ಈ ಬಾರಿ ಮುಂಗಾರು ಸುಮಾರು 7 ದಿನ ತಡವಾಗಿದೆ ಆಗಮಿಸಿದೆ. ದೇಶದ ಇತರ ಭಾಗಗಳಲ್ಲಿ ಮುಂಗಾರಿನ ಆಗಮನ ಯಾವಾಗ ತಿಳಿದುಕೊಳ್ಳೋನ ಬನ್ನಿ,   

Written by - Nitin Tabib | Last Updated : Jun 8, 2023, 03:06 PM IST

    IMD ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಸಕ್ರಿಯವಾಗಲಿದೆ.

    ಇದರ ನಂತರ, ತಮಿಳುನಾಡು, ಕರ್ನಾಟಕ, ಈಶಾನ್ಯ ಮತ್ತು ನೈಋತ್ಯ ಭಾರತದಲ್ಲಿ ಮುಂಗಾರು ಪ್ರಭಾವವು ಗೋಚರಿಸಲಿದೆ.

    ಅದರ ನಂತರ ಅದು ಕ್ರಮೇಣ ಯುಪಿ, ಬಿಹಾರ, ದೆಹಲಿ, ರಾಜಸ್ಥಾನ, ಜಾರ್ಖಂಡ್, ಪಂಜಾಬ್ ಮತ್ತು ಹರಿಯಾಣವನ್ನು ತಲುಪಲಿದೆ.

    ಮಳೆಗಾಲದಲ್ಲಿ ತಮ್ಮ ಬೆಳೆಗಳನ್ನು ಬಿತ್ತನೆ ಮಾಡಲು ಕಾಯುತ್ತಿರುವ ಮಧ್ಯ ಭಾರತದ ರೈತರು ಸುಮಾರು 10 ದಿನಗಳು ಕಾಯಬೇಕಾಗಲಿದೆ.

    ಆದರೆ, ಒಮ್ಮೆ ಮಳೆ ಆರಂಭವಾದರೆ ಮುಂಗಾರು ವಿಳಂಬವಾದರೂ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ

Monsoon: ಕೇರಳ ಕದ ತಟ್ಟಿದ ಮಾನ್ಸೂನ್, ದೇಶದ ಬೇರೆ ಬೇರೆ ಭಾಗಗಳಲ್ಲಿ ಮುಂಗಾರಿನ ಸಿಂಚನ ಯಾವಾಗ? title=

Latest Monsoon Update: ಕೇರಳದಲ್ಲಿ ಮುಂಗಾರು ಪ್ರವೇಶಿಸಿದೆ. ಇದರಿಂದ ಮುಂಗಾರು ಮಳೆಯ ನಿರೀಕ್ಷೆಗೆ ತೆರೆಬಿದ್ದಂತಾಗಿದೆ. ಇನ್ನೆರಡು ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆಯ ಪರಿಣಾಮವನ್ನು ನೀವು ಕಾಣಬಹುದು. ಆದರೆ ಕಳೆದ ಬಾರಿಗಿಂತ ಒಂದು ವಾರ ತಡವಾಗಿ ಈ ಬಾರಿ ಮುಂಗಾರಿನ ಆಗಮನವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.  ಜೂನ್ 1ಕ್ಕೆ ಕೇರಳ ಮಾನ್ಸೂನ್ ತಲುಪಬೇಕಿತ್ತು. ಇದು ಸಾಮಾನ್ಯವಾಗಿ ಪ್ರತಿ ವರ್ಷ ನಡೆಯುತ್ತದೆ. ಈ ಬಾರಿ 7 ದಿನ ಮುಂಗಾರು ಆಗಮಿಸಿದೆ. ಹವಾಮಾನ ಇಲಾಖೆ (ಐಎಂಡಿ) ಸಹ ಜೂನ್ 4 ರೊಳಗೆ ಮುಂಗಾರು ಆಗಮನದ ಮುನ್ಸೂಚನೆ ನೀಡಿತ್ತು, ಆದರೆ ಅದು ಅದಕ್ಕಿಂತ ಹೆಚ್ಚು ವಿಳಂಬವಾಗಿ ಆಗಮಿಸಿದೆ. ಬಿಪರ ಜಾಯ್ ಚಂಡಮಾರುತದಿಂದಾಗಿ ಮುಂಗಾರು ಆಗಮನದಲ್ಲಿ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನೆರಡು ದಿನಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಮುಂಗಾರು ಮಳೆ ಕಾಣಿಸಿಕೊಳ್ಳಲಿದೆ. ಮುಂಗಾರು ಉತ್ತರ ಭಾರತವನ್ನು ಯಾವಾಗ ತಲುಪಲಿದೆ ಬನ್ನಿ ತಿಳಿದುಕೊಳ್ಳೋಣ, 

ಉತ್ತರ ಭಾರತದಲ್ಲಿ ಮುಂಗಾರಿನ ಆಗಮನ ಯಾವಾಗ?
IMD ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಸಕ್ರಿಯವಾಗಲಿದೆ. ಇದರ ನಂತರ, ತಮಿಳುನಾಡು, ಕರ್ನಾಟಕ, ಈಶಾನ್ಯ ಮತ್ತು ನೈಋತ್ಯ ಭಾರತದಲ್ಲಿ ಮುಂಗಾರು ಪ್ರಭಾವವು ಗೋಚರಿಸಲಿದೆ. ಅದರ ನಂತರ ಅದು ಕ್ರಮೇಣ ಯುಪಿ, ಬಿಹಾರ, ದೆಹಲಿ, ರಾಜಸ್ಥಾನ, ಜಾರ್ಖಂಡ್, ಪಂಜಾಬ್ ಮತ್ತು ಹರಿಯಾಣವನ್ನು ತಲುಪಲಿದೆ. ಮಳೆಗಾಲದಲ್ಲಿ ತಮ್ಮ ಬೆಳೆಗಳನ್ನು ಬಿತ್ತನೆ ಮಾಡಲು ಕಾಯುತ್ತಿರುವ ಮಧ್ಯ ಭಾರತದ ರೈತರು ಸುಮಾರು 10 ದಿನಗಳು ಕಾಯಬೇಕಾಗಲಿದೆ. ಆದರೆ, ಒಮ್ಮೆ ಮಳೆ ಆರಂಭವಾದರೆ ಮುಂಗಾರು ವಿಳಂಬವಾದರೂ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ-Global Economy Outlook: ದುಬಾರಿ ಸಾಲ ವಿಶ್ವದ ಆರ್ಥಿಕ ಬೆಳವಣಿಗೆಗೆ ಭಾರಿ ಪೆಟ್ಟು ನೀಡಲಿದೆ ಎಂದ ವಿಶ್ವ ಬ್ಯಾಂಕ್

ಕೇರಳಕ್ಕೆ ಮುಂಗಾರು ತಡವಾಗಿ ಬಂದಿದ್ದೇಕೆ?
ಬಿಪರ್‌ಜೋಯ್ ಚಂಡಮಾರುತವು ಪೂರ್ವ ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ನಿಧಾನವಾಗಿ ಉತ್ತರದ ಕಡೆಗೆ ಚಲಿಸುತ್ತಿದೆ. ಇದು ಈಗ ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದೆ. ಮುಂದಿನ 24 ಗಂಟೆಗಳಲ್ಲಿ ಇದು ಉತ್ತರಾಭಿಮುಖವಾಗಿ ಚಲಿಸುವ ಮತ್ತು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರ ನಂತರ ಅದು ಉತ್ತರ ಮತ್ತು ವಾಯುವ್ಯ ಕಡೆಗೆ ಚಲಿಸಬಹುದು. ಮುಂಗಾರು ವಿಳಂಬಕ್ಕೆ ಇದೇ ಕಾರಣ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ-RBI MPC Meting: ಇಂದಿನಿಂದ ಆರಂಭಗೊಂಡಿದೆ ಆರ್ಬಿಐ ಹಣಕಾಸು ನೀತಿ ಪರಿಶೀಲನಾ ಸಭೆ, ಈ ಬಾರಿಯೂ ರೆಪೋ ದರಗಳಲ್ಲಿ ಬದಲಾವಣೆ ಇಲ್ಲ ಎಂದ ತಜ್ಞರು

ಮಳೆಯ ಮುನ್ಸೂಚನೆ ಇಲ್ಲಿದೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಮಣಿಪುರ, ನಾಗಾಲ್ಯಾಂಡ್ ಮತ್ತು ಕೇರಳದಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.  ಈ ಸಮಯದಲ್ಲಿ, ತಮಿಳುನಾಡು, ರಾಯಲಸೀಮಾ, ಕರ್ನಾಟಕ ಮತ್ತು ಪಶ್ಚಿಮ ಹಿಮಾಲಯದಲ್ಲಿ ಮಳೆಯ ಮುನ್ಸೂಚನೆಯನ್ನು ವ್ಯಕ್ತಪಡಿಸಲಾಗಿದೆ. ಇದಲ್ಲದೇ ರಾಜಸ್ಥಾನದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News