ನವದೆಹಲಿ: ಹೂಡಿಕೆ ಬಂಡವಾಳ ನಿರ್ವಹಣೆಯ ಬಗ್ಗೆ ವಿವೇಕಯುತ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೋಮವಾರ ಐಸಿಐಸಿಐ ಬ್ಯಾಂಕ್‌ಗೆ 3 ಕೋಟಿ ರೂ.ಗಳ ದಂಡ ವಿಧಿಸಿದೆ ಎಂದು ಕೇಂದ್ರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ:
ಐಆರ್ಬಿಐ ಪ್ರಕಾರ, ಸೆಕ್ಯೂರಿಟಿಗಳನ್ನು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ವರ್ಗಾಯಿಸುವ ವಿಷಯದಲ್ಲಿ ರಿಸರ್ವ್ ಬ್ಯಾಂಕಿನ ಸೂಚನೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ಯಾಂಕ್ ತಪ್ಪಿತಸ್ಥರೆಂದು ಕಂಡುಬಂದಿದೆ. ಏತನ್ಮಧ್ಯೆ, ಐಸಿಐಸಿಐ ಬ್ಯಾಂಕ್ (ICICI Bank) ಷೇರು ಮಾರುಕಟ್ಟೆಗೆ ತಿಳಿಸಿದ್ದು, ಮೇ 2017 ರಲ್ಲಿ, ಎಚ್‌ಟಿಎಂ ವರ್ಗದಿಂದ ಎಎಫ್‌ಎಸ್ ವರ್ಗಕ್ಕೆ ಕೆಲವು ಹೂಡಿಕೆಗಳಿಗೆ 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ನಿಬಂಧನೆಗಳ ಪ್ರಕಾರ ದಂಡ ವಿಧಿಸಲಾಗಿದೆ. ಸ್ಪಷ್ಟ ಅನುಮೋದನೆ ಇಲ್ಲದೆ 2017 ರ ಮೇ ತಿಂಗಳಲ್ಲಿ ಎರಡನೇ ಬಾರಿಗೆ ಸೆಕ್ಯೂರಿಟಿಗಳನ್ನು ವರ್ಗಾವಣೆ ಮಾಡುವುದು ಅದರ ಸೂಚನೆಗಳ ಉಲ್ಲಂಘನೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.


ಇದನ್ನೂ ಓದಿ - Banking Alert: SBI, PNB, ICICI ಬ್ಯಾಂಕ್ ಗ್ರಾಹಕರೇ ಗಮನಿಸಿ, ಅಪ್ಪಿ-ತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ


ಈ ಸಂದರ್ಭದಲ್ಲಿ, ಐಸಿಐಸಿಐ ಬ್ಯಾಂಕ್‌ಗೆ ಶೋ ಕಾಸ್ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಬ್ಯಾಂಕ್ ನೀಡಿದ ಉತ್ತರ ಮತ್ತು ವಿಚಾರಣೆಯಲ್ಲಿ ನೀಡಿದ ಮೌಖಿಕ ಪ್ರತಿಕ್ರಿಯೆಯ ನಂತರ, ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿನ ವಿರುದ್ಧ ಅನುಸರಿಸದ ಆರೋಪಗಳು ನಿಜವೆಂದು ನಿರ್ಧರಿಸಿ ಬ್ಯಾಂಕಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ ಮಂಗಳವಾರ, ಐಸಿಐಸಿಐ ಬ್ಯಾಂಕ್ ಷೇರುಗಳು 3.75 ಪಾಯಿಂಟ್ (0.62%) ಕುಸಿದು ನಿಫ್ಟಿಯಲ್ಲಿ 596.75 ರೂ.ನಲ್ಲಿ ವಹಿವಾಟು ನಡೆಸಿದೆ.


ಇದನ್ನೂ ಓದಿ- SBI, HDFC, ICICI ಖಾತೆದಾರರೇ ಎಚ್ಚರ! OTPಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೇ ತಿಳಿಯಿರಿ


ಈ ಬೆಳವಣಿಗೆ ಗ್ರಾಹಕರ ಹಣದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ:
ಗ್ರಾಹಕರ ಬ್ಯಾಂಕಿನಲ್ಲಿ ಠೇವಣಿ ಇರಿಸಿದ ಹಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆರ್‌ಬಿಐ ಪ್ರಕಾರ, ಬ್ಯಾಂಕುಗಳ ವಿರುದ್ಧ ತೆಗೆದುಕೊಳ್ಳುವ ಇಂತಹ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ. ಬ್ಯಾಂಕುಗಳು ಮತ್ತು ಗ್ರಾಹಕರ ನಡುವಿನ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದ ಬಗ್ಗೆ ತೀರ್ಪು ನೀಡುವುದು ಇದರ ಉದ್ದೇಶವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಕ್ರಮವು ಈ ಬ್ಯಾಂಕಿನ ಗ್ರಾಹಕರ ಹಣದ ಮೇಲೆ ಪರಿಣಾಮ ಬೀರುವುದಿಲ್ಲ. ಯಾವುದೇ ವಹಿವಾಟಿನ ಸಿಂಧುತ್ವ ಅಥವಾ ತನ್ನ ಗ್ರಾಹಕರೊಂದಿಗಿನ ಒಪ್ಪಂದದ ಬಗ್ಗೆ ಇದು ಬ್ಯಾಂಕ್‌ನ ನಿರ್ಧಾರವಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.