RBI MPC Meeting: ಮಧ್ಯಮ ವರ್ಗದ ಜನರ ಕೈ ಹಿಡಿಯಲಿದೆ RBI : ಮುಂದಿನ ವಾರ ಸಿಗಲಿದೆ ಸಿಹಿ ಸುದ್ದಿ
RBI MPC Meeting: ಫೆಬ್ರವರಿ 8 ರಂದು ಸಭೆಯ ನಂತರ, ಆರ್‌ಬಿಐ ರೆಪೋ ದರದ ಬಗ್ಗೆ ಘೋಷಣೆ ಮಾಡಲಿದೆ.ಸಾಮಾನ್ಯ ಜನ ಈಗ ಆರ್‌ಬಿಐ ಸಭೆ (RBI MPC meeting) ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
RBI MPC Meeting : ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಘೋಷಣೆಗಳಾಗಿಲ್ಲ. ಆದಾಯ ತೆರಿಗೆಯಲ್ಲಿಯೂ ಪರಿಹಾರ ಸಿಗದ ಕಾರಣ ಮಧ್ಯಮ ವರ್ಗದವರಿಗೆ ನಿರಾಸೆಯಾಗಿದೆ. ಈಗ ಮಧ್ಯಮ ವರ್ಗದವರ ನಿರೀಕ್ಷೆಗಳು ಮುಂದಿನ ವಾರ 6 ರಿಂದ 8 2024 ರವರೆಗೆ ನಡೆಯಲಿರುವ RBI ನ ವಿತ್ತೀಯ ಪರಿಶೀಲನಾ ಸಭೆಯ ಮೇಲೆ ನೆಟ್ಟಿವೆ. ಫೆಬ್ರವರಿ 8 ರಂದು ಸಭೆಯ ನಂತರ, ಆರ್‌ಬಿಐ ರೆಪೋ ದರದ ಬಗ್ಗೆ ಘೋಷಣೆ ಮಾಡಲಿದೆ.ಸಾಮಾನ್ಯ ಜನ ಈಗ ಆರ್‌ಬಿಐ ಸಭೆ (RBI MPC meeting) ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
ಗೃಹ ಸಾಲ ಅಗ್ಗವಾಗಲಿದೆಯೇ? :
ಈ ಬಾರಿ ಬಜೆಟ್ ನಲ್ಲಿ ಆದಾಯ ತೆರಿಗೆಯ ಮೇಲೆ ಯಾವುದೇ ರೀತಿಯ ವಿನಾಯಿತಿ ಘೋಷಣೆಯಾಗಿಲ್ಲ. ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಸಿಗದ ಹಿನ್ನೆಲೆಯಲ್ಲಿ ಇದೀಗ ಜನ ಸಾಮಾನ್ಯರ ದೃಷ್ಟಿ ಆರ್‌ಬಿಐ ರೆಪೋ ದರದತ್ತ ನೆಟ್ಟಿದೆ. ರೆಪೋ ದರದಲ್ಲಿ ಕಡಿಮೆಯಾದರೆ ಗೃಹ ಸಾಲ ಅಗ್ಗವಾಗಲಿದೆ. ಸಾಲದ ಮೇಲಿನ ಇಎಂಐ ಹೊರೆ ಕಡಿಮೆಯಾಗುತ್ತದೆ. ಸಾಲದ ಹೊರೆಯಿಂದ ಸ್ವಲ್ಪ ಮುಕ್ತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರ ಕಣ್ಣು ಈಗ ಫೆಬ್ರವರಿ 8ರತ್ತ ನೆಟ್ಟಿದೆ.
ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
ಬಡ್ಡಿದರ ಕಡಿಮೆಯಾದರೆ ಪರಿಹಾರ :
ದೇಶದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಹಣದುಬ್ಬರವೂ ಕಡಿಮೆಯಾಗುತ್ತಿದೆ. ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಕೂಡಾ ಬಡ್ಡಿದರಗಳನ್ನು ಹೆಚ್ಚಿಸಿಲ್ಲ. ಬಡ್ಡಿದರಗಳನ್ನು ಬದಲಾಯಿಸದೆ, ಫೆಡ್ 5.25 ರಿಂದ 5.50 ಪರ್ಸೆಂಟ್ ನಡುವೆ ಇರಿಸಿದೆ. ಮಾರುಕಟ್ಟೆ ತಜ್ಞರ ಪ್ರಕಾರ, 2024ರ ವೇಳೆಗೆ ಹಣದುಬ್ಬರವು ಹೊಸ ವರ್ಷದ ದ್ವಿತೀಯಾರ್ಧದಲ್ಲಿ ಶೇಕಡಾ 2.5 ರಷ್ಟು ಕಡಿಮೆ ಮಟ್ಟಕ್ಕೆ ಇಳಿಯಬಹುದು. ಹೀಗಿರುವಾಗ ಈ ಬಾರಿ ಆರ್‌ಬಿಐ ಜನರಿಗೆ ದೊಡ್ಡ ಮಟ್ಟದ ಪರಿಹಾರ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಆರ್‌ಬಿಐನಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು :
ವಿತ್ತೀಯ ಕೊರತೆಯ ಇಳಿಕೆಯಿಂದಾಗಿ ಧನಾತ್ಮಕ ಚಿಹ್ನೆಗಳು ಕಂಡುಬರುತ್ತಿವೆ. ಇದರಿಂದಾಗಿ ಹಣದುಬ್ಬರ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.ಇದರಿಂದ ರಿಸರ್ವ್ ಬ್ಯಾಂಕ್ ಕೆಲಸವೂ ಸುಲಭವಾಗಲಿದೆ.ಹಣದುಬ್ಬರ ಕಡಿಮೆಯಾದರೆ, ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡುತ್ತದೆ.ಪ್ರಸ್ತುತ, ಆರ್‌ಬಿಐ ರೆಪೊ ದರವನ್ನು ಶೇಕಡಾ 6.5 ಕ್ಕೆ ಕಾಯ್ದುಕೊಂಡಿದೆ. ಈ ಬಾರಿ ಸರ್ಕಾರ ರೆಪೋ ದರವನ್ನು ಕಡಿತಗೊಳಿಸುವ ಮೂಲಕ ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದೆ. ಹೆಚ್ಚುತ್ತಿರುವ ಜಾಗತಿಕ ಹಣದುಬ್ಬರದಿಂದಾಗಿ, RBI ಮೇ 2022 ರಿಂದ ಫೆಬ್ರವರಿ 2023 ರವರೆಗೆ ರೆಪೊ ದರವನ್ನು ಕಡಿಮೆ ಮಾಡಿಲ್ಲ. ಆದ್ದರಿಂದ ಈ ಬಾರಿ RBI ಪರಿಹಾರವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : Zero Income Tax Countries: ಎಷ್ಟು ಬೇಕಾದಷ್ಟೂ ಹಣ ಸಂಪಾದಿಸಿ, ಇಲ್ಲಿ ನೈಯಾ ಪೈಸೆ ಕೂಡ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ