Reserve Bank of India Repo Rates: ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಪರಿಶೀಲನಾ ಸಭೆ (ಆರ್‌ಬಿಐ ಎಂಪಿಸಿ ಸಭೆ ) ಇಂದಿನಿಂದ ಅಂದರೆ ಮಂಗಳವಾರದಿಂದ ಆರಂಭವಾಗಿದೆ. ಕಳೆದ ಕೆಲವು ಸಮಯದಿಂದ ರೆಪೋ ದರಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಇದೇ ವೇಳೆ, ಏಪ್ರಿಲ್ ತಿಂಗಳಲ್ಲಿ ನಡೆದ ಸಭೆಯಲ್ಲಿ, RBI ಬಡ್ಡಿದರಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಿರಲಿಲ್ಲ.


COMMERCIAL BREAK
SCROLL TO CONTINUE READING

ಈ ಬಾರಿಯೂ ಬದಲಾವಣೆಯಾಗುವ ನಿರೀಕ್ಷೆ ಕಡಿಮೆ ಎಂದ ತಜ್ಞರು
ವಿತ್ತೀಯ ನೀತಿ ಸಮಿತಿಯ ದ್ವೈಮಾಸಿಕ ಸಭೆಯು ಚಿಲ್ಲರೆ ಹಣದುಬ್ಬರದ ನಿಟ್ಟಿನಲ್ಲಿ ಭಾರಿ ಪರಿಹಾರವನ್ನು ಕಂಡುಕೊಂಡ ಕಾರಣ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ನೀತಿ ರೆಪೋ ರೇಟ್ ಅನ್ನು ಶೇ. 6.5 ಕ್ಕೆ  ಇರಿಸುವ ಸಾಧ್ಯತೆ ಇದೇ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


ಸಭೆಯ ನಿರ್ಧಾರಗಳು ಜೂನ್ 8 ರಂದು ಹೊರಬೀಳಲಿದೆ
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರು ಸದಸ್ಯರ ಎಂಪಿಸಿ ಸಭೆ ಆರಂಭವಾಗಿದೆ. ಸಭೆಯ ನಿರ್ಧಾರಗಳು ಜೂನ್ 8 ರಂದು ಅಂದರೆ ಗುರುವಾರ ಪ್ರಕಟಿಸಲಾಗುವುದು. ಕಳೆದ ಏಪ್ರಿಲ್‌ನಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಪಾಲಸಿ ರೇಟ್ ಹೆಚ್ಚಿಸುವ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಈ ಹಿಂದೆ, ಹಣದುಬ್ಬರವನ್ನು ನಿಗ್ರಹಿಸಲು, ಸೆಂಟ್ರಲ್ ಬ್ಯಾಂಕ್ ಮೇ 2022 ರಿಂದ ರೆಪೊ ದರವನ್ನು ಶೇಕಡಾ 2.5 ರಷ್ಟು ಹೆಚ್ಚಿಸಿತ್ತು.


ಇದನ್ನೂ ಓದಿ-Stock Market Update: ಸೆನ್ಸೆಕ್ಸ್ ನಲ್ಲಿ ಭಾರಿ ಗೂಳಿ ಜಿಗಿತ, ಹಸಿರು ಅಂಕಿಗಳಲ್ಲಿ ವಹಿವಾಟು ನಿಲ್ಲಿಸಿದ ಷೇರುಪೇಟೆ


ರೆಪೊ ದರಗಳನ್ನು ಶೇ.6.5ರಲ್ಲಿ ಸ್ಥಿರವಾಗಿರಿಸಲಾಗಿದೆ
ಏಪ್ರಿಲ್ ತಿಂಗಳಿನಲ್ಲಿ, RBI ತನ್ನ ರೆಪೋ ದರಗಳನ್ನು ಶೇ. 6.5ಕ್ಕೆ ಸ್ಥಿರವಾಗಿರಿಸಿದೆ. ಆರ್ಥಿಕತೆಯ ಅಭಿವೃದ್ಧಿಯನ್ನು ಮುಂದುವರಿಸಲು, ಹಿಂದಿನ ಮಟ್ಟದಲ್ಲಿ ರೆಪೋ ದರವನ್ನು ಉಳಿಸಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗವರ್ನರ್ ಹೇಳಿದ್ದರು. ಬ್ಯಾಂಕಿಂಗ್ ಮತ್ತು ಎನ್‌ಬಿಎಫ್‌ಸಿ ಹಣಕಾಸು ವ್ಯವಸ್ಥೆ ಬಲಿಷ್ಠವಾಗಿದೆ ಎಂದು ಆರ್‌ಬಿಐ ಗವರ್ನರ್ ಈಗಾಗಲೇ ಹೇಳಿದ್ದಾರೆ.


ಇದನ್ನೂ ಓದಿ-Indian Economy: ಪ್ರಬಲ ಆರ್ಥಿಕತೆಯ ಸಂಕೇತ ನೀಡುತ್ತಿವೆ GDP ಅಂಕಿ-ಅಂಶಗಳು, ಕೃಷಿ-ಸೇವಾ ವಲಯಗಳಲ್ಲಿ ಭಾರಿ ಉತ್ಕರ್ಷ


ಪ್ರತಿ 2 ತಿಂಗಳಿಗೊಮ್ಮೆ ಸಭೆ ನಡೆಯುತ್ತದೆ
ಈ ಸಭೆಯನ್ನು ರಿಸರ್ವ್ ಬ್ಯಾಂಕಿನ ಹಣಕಾಸು ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸುತ್ತದೆ. ಈ ಸಭೆಯನ್ನು 3 ದಿನಗಳವರೆಗೆ ನಡೆಸಲಾಗುತ್ತದೆ. ದಿನದ ಸಭೆ ಮುಂದುವರಿಯುತ್ತದೆ ಮತ್ತು ಮೂರನೇ ದಿನ, ಪತ್ರಿಕಾಗೋಷ್ಠಿಯಲ್ಲಿ, ಆರ್‌ಬಿಐ ಗವರ್ನರ್ ಸಮಿತಿಯ ನಿರ್ಧಾರವನ್ನು ಪ್ರಕಟಿಸುತ್ತಾರೆ. ಈ ಬಾರಿಯ ಸಭೆ ಇಂದಿನಿಂದ ಅಂದರೆ ಜೂನ್ 6, 2023 ರಿಂದ ಪ್ರಾರಂಭವಾಗುತ್ತಿದ್ದು, ಜೂನ್ 8 ರಂದು ನೀತಿ ನಿರ್ಧಾರದ ಪ್ರಕಟನೆಯೊಂದಿಗೆ ಮುಕ್ತಾಯವಾಗಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.