Hero ಕಂಪನಿಯ ಹೊಸ 100ಸಿಸಿ ಬೈಕ್, ಬೆಲೆ ಕೇವಲ 60 ಸಾವಿರ ಮಾತ್ರ, ಮೈಲೆಜ್ ಕೂಡ ಜಬ್ಬರ್ದಸ್ತ್!

Hero 100cc Bike: ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಅನ್ನು ನವೀಕರಿಸಿದೆ. ಇದರ ಬೆಲೆ ರೂ.60,760 ರಿಂದ ಪ್ರಾರಂಭವಾಗುತ್ತದೆ. ಈ ಬೆಲೆ ಬೈಕ್‌ನ ಕಿಕ್ ಸ್ಟಾರ್ಟ್ ಆವೃತ್ತಿಯದ್ದಾಗಿದೆ.  

Written by - Nitin Tabib | Last Updated : Jun 3, 2023, 08:50 PM IST
  • ನೀವು ಈ ಬೈಕ್ ನಲ್ಲಿ USB ಚಾರ್ಜರ್ ಅನ್ನು ವೈಶಿಷ್ಟ್ಯದ ರೂಪದಲ್ಲಿ ಪಡೆಯಬಹುದು.
  • ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಅಲಾಯ್ ಚಕ್ರಗಳು SELF ಮತ್ತು SELF i3S ರೂಪಾಂತರಗಳೊಂದಿಗೆ ಸಹ ನೀಡಲಾಗಿದೆ.
  • ಇತರ ವೈಶಿಷ್ಟ್ಯಗಳು ಸೈಡ್ ಸ್ಟ್ಯಾಂಡ್ ಸೂಚಕಗಳು ಮತ್ತು ಟೋ ಗಾರ್ಡ್‌ಗಳನ್ನು ಒಳಗೊಂಡಿವೆ.
Hero ಕಂಪನಿಯ ಹೊಸ 100ಸಿಸಿ ಬೈಕ್, ಬೆಲೆ ಕೇವಲ 60 ಸಾವಿರ ಮಾತ್ರ, ಮೈಲೆಜ್ ಕೂಡ ಜಬ್ಬರ್ದಸ್ತ್! title=

Hero HF Deluxe 2023: 100 ಸಿಸಿ ಕಮ್ಯೂಟರ್ ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೆ ಕಾರಣದಿಂದ ಹೋಂಡಾ ತನ್ನ ಹೊಸ 100 ಸಿಸಿ ಮೋಟಾರ್‌ಸೈಕಲ್ ಹೋಂಡಾ ಶೈನ್ 100 ಅನ್ನು ಕೆಲ ದಿನಗಳ ಹಿಂದೆ ಮಾರುಕಟ್ಟೆಗೆ  ಬಿಡುಗಡೆ ಮಾಡಿತ್ತು. ಇದೀಗ ದೇಶದ ಅತಿದೊಡ್ಡ ವಾಹನ ತಯಾರಕ ಹೀರೋ ಮೋಟೋಕಾರ್ಪ್ ಕೂಡ ತನ್ನ ಪೋರ್ಟ್ಫೋಲಿಯೊವನ್ನು ನಿರಂತರವಾಗಿ ನವೀಕರಿಸುತ್ತಿದೆ ಮತ್ತು ಈ ಅನುಕ್ರಮದಲ್ಲಿ ಕಂಪನಿಯು ತನ್ನ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಅನ್ನು ನವೀಕರಿಸಿದೆ. ಈ ಬೈಕ್ ನಲ್ ಬೆಲೆ ರೂ.60,760 ರಿಂದ ಪ್ರಾರಂಭವಾಗುತ್ತದೆ. ಈ ಬೆಲೆ ಬೈಕ್‌ನ ಕಿಕ್ ಸ್ಟಾರ್ಟ್ ಆವೃತ್ತಿಯದ್ದಾಗಿದೆ. ಸೆಲ್ಫ್ ಸ್ಟಾರ್ಟ್ ಮಾಡೆಲ್ ಬೆಲೆ 66,408 ರೂ. ಆಗಿದೆ ಎಂಬುದು ಇಲ್ಲಿ ಗಮನಾರ್ಹ. 

ಸ್ಪೋರ್ಟಿಯರ್ ಶೈಲಿಯ ಬೈಕ್ ಗೆ ಆದ್ಯತೆ ನೀಡುವವರಿಗೆ, ಹೀರೋ HF ಡಿಲಕ್ಸ್‌ನ ಹೊಸ ಕ್ಯಾನ್ವಾಸ್ ಬ್ಲ್ಯಾಕ್ ಆವೃತ್ತಿಯನ್ನು ಪರಿಚಯಿಸಿದೆ. ಇದು ಹೆಡ್‌ಲ್ಯಾಂಪ್ ಕೌಲ್, ಎಂಜಿನ್, ಲೆಗ್ ಗಾರ್ಡ್, ಫ್ಯೂಯಲ್ ಟ್ಯಾಂಕ್, ಎಕ್ಸಾಸ್ಟ್ ಪೈಪ್, ಅಲಾಯ್ ವೀಲ್‌ಗಳು ಮತ್ತು ಗ್ರ್ಯಾಬ್ ರೈಲ್ ಅನ್ನು ಒಳಗೊಂಡಿರುವ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಹ್ಯಾಂಡಲ್‌ಬಾರ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ರಿಯರ್ ಸಸ್ಪೆನ್ಷನ್ ಕ್ರೋಮ್ ಫಿನಿಶ್ ಅನ್ನು ಉಳಿಸಿಕೊಂಡಿದೆ. ಹೊಸ ಸ್ಟ್ರೈಪ್ಸ್ ಗ್ರಾಫಿಕ್ಸ್ ಅನ್ನು ಹೆಡ್‌ಲ್ಯಾಂಪ್ ಕೌಲ್, ಫ್ಯುಯೆಲ್ ಟ್ಯಾಂಕ್, ಸೈಡ್ ಪ್ಯಾನೆಲ್‌ಗಳು ಮತ್ತು ಸೀಟ್ ಪ್ಯಾನಲ್‌ಗಳ ಕೆಳಗೆ ನೀವು ಕಾಣಬಹುದು. ಗ್ರಾಹಕರು ಈ ಬೈಕ್ ಅನ್ನು ನಾಲ್ಕು ವಿಭಿನ್ನ ಬಣ್ಣದ ಆಯ್ಕೆಗಳಿಂದ ಆಯ್ದುಕೊಳ್ಳಬಹುದು. ಇವುಗಳಲ್ಲಿ ನೆಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್, ಬ್ಲ್ಯಾಕ್ ವಿತ್ ಹೆವಿ ಗ್ರೇ ಮತ್ತು ಸ್ಪೋರ್ಟ್ಸ್ ರೆಡ್ ವಿತ್ ಬ್ಲ್ಯಾಕ್ ಶಾಮೀಲಾಗಿವೆ.

ನೀವು ಈ ಬೈಕ್ ನಲ್ಲಿ USB ಚಾರ್ಜರ್ ಅನ್ನು ವೈಶಿಷ್ಟ್ಯದ ರೂಪದಲ್ಲಿ ಪಡೆಯಬಹುದು. ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಅಲಾಯ್ ಚಕ್ರಗಳು SELF ಮತ್ತು SELF i3S ರೂಪಾಂತರಗಳೊಂದಿಗೆ ಸಹ ನೀಡಲಾಗಿದೆ. ಇತರ ವೈಶಿಷ್ಟ್ಯಗಳು ಸೈಡ್ ಸ್ಟ್ಯಾಂಡ್ ಸೂಚಕಗಳು ಮತ್ತು ಟೋ ಗಾರ್ಡ್‌ಗಳನ್ನು ಒಳಗೊಂಡಿವೆ.

ಇದನ್ನೂ ಓದಿ-Edible Oil Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ ಈ ರಾಜ್ಯ ಸರ್ಕಾರ, ಇಲ್ಲಿದೆ ಲೇಟೆಸ್ಟ್ ದರ

ಹೀರೋ HF ಡಿಲಕ್ಸ್- ಎಂಜಿನ್ ಮತ್ತು ಪವರ್
ಎಂಜಿನ್‌ನಲ್ಲಿ ಯಾವುದೇ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ಇದು 97.2cc ಏರ್-ಕೂಲ್ಡ್, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ 'XSens ಟೆಕ್ನಾಲಜಿ' ಅನ್ನು ಹೊಂದಿದೆ. Hero XSens ಅಡಿಯಲ್ಲಿ, ನೀವು ಉತ್ತಮ ಮೈಲೇಜ್, ದೀರ್ಘ ಎಂಜಿನ್ ಬಾಳಿಕೆ, ಸ್ಥಿರ ಸವಾರಿ ಮತ್ತು ಕಡಿಮೆ ನಿರ್ವಹಣೆಯನ್ನು ಪಡೆಯಬಹುದು. ಎಂಜಿನ್ ಗರಿಷ್ಠ 8.02 PS ಪವರ್ ಮತ್ತು 8.05 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 100cc ಸ್ಪ್ಲೆಂಡರ್ ಪ್ಲಸ್ ಅನ್ನು ಹೋಲುತ್ತದೆ. ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಪ್ರತಿಸ್ಪರ್ಧಿ ಹೋಂಡಾ ಶೈನ್ 98.98cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 7.38PS ಮತ್ತು 8.05Nm ಅನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ-ICICI ಹಾಗೂ ಪಿಎನ್ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ

2023 HF ಡಿಲಕ್ಸ್ 1965 mm ಉದ್ದ, 720 mm ಅಗಲ ಮತ್ತು 1045 mm ಎತ್ತರ ಹೊಂದಿದೆ. ಇದರ ವ್ಹೀಲ್ ಬೇಸ್ 1,235 ಎಂಎಂ. ಸೀಟ್ ಎತ್ತರ 805 ಮಿಮೀ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ, ಎಚ್‌ಎಫ್ ಡಿಲಕ್ಸ್ ಅನ್ನು ವಿವಿಧ ಭೂಪ್ರದೇಶಗಳಲ್ಲಿ ಬಳಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News