RBI New Norm On Term Deposit: ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಹೂಡಿಕೆ ಮಾಡಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಿರ ಹೂಡಿಕೆಯ ಬಡ್ಡಿದರಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಆರ್‌ಬಿಐನ  ಈ ಬದಲಾವಣೆಯು ಬ್ಯಾಂಕುಗಳಲ್ಲಿನ ಸ್ಥಿರ ಠೇವಣಿ / ಅವಧಿಯ ಠೇವಣಿಯ ಮ್ಯಾಚುರಿಟಿ ಹೊಂದಿರುವ ಅನ್ಕ್ಲೆಮ್ಡ್  ಮೊತ್ತದ ಬಡ್ಡಿ ನಿಯಮಗಳಿಗೆ ಸಂಬಂಧಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಆರ್.ಬಿ. ಐ ಹೊರಡಿಸಿರುವ ಅಧಿಸೂಚನೆ ಪ್ರಕಾರ, FD ಮ್ಯಾಚ್ಯೂರಿಟಿ ಬಳಿಕ ಕ್ಲೇಮ್ ಮಾಡಲಾಗದೆ ಮೊತ್ತದ ಮೇಲೆ ಸಿಗುವ ಬಡ್ಡಿಯನ್ನು ಸಮೀಕ್ಷೆ ನಡೆಸಲಾಗಿದೆ. ಸ್ಥಿರ ಹೂಡಿಕೆಯ ನಿಗದಿತ ಅವಧಿ ಮುಕ್ತಾಯದ ನಂತರ ಮೊತ್ತ ಕ್ಲೇಮ್ ಮಾಡದೆ ಹಾಗೆಯೇ ಬ್ಯಾಂಕ್ ಬಳಿ ಉಳಿದಿದ್ದರೆ, ಅದರ ಮೇಲೆ ಬಡ್ಡಿ ದರ ಉಳಿತಾಯ ಖಾತೆಯ ಪ್ರಕಾರ ಅಥವಾ ಮ್ಯಾಚ್ಯುರ್ FD ಮೇಲಿನ ಬಡ್ಡಿ ದರ ಯಾವುದು ಕನಿಷ್ಠ ಅದನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕಹಾಕಲಾಗುವುದು ಎಂದು RBI ಜಾರಿಗೊಳಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.


ಪ್ರಸ್ತುತ ಇರುವ ನಿಯಮದ ಪ್ರಕಾರ ಒಂದೊಮ್ಮೆ  FD ಅವಧಿ ಪೂರ್ಣಗೊಂಡಬಳಿಕ ಮತ್ತು ಆ ಮೊತ್ತವನ್ನು ಕ್ಲೇಮ್ ಮಾಡದೆ ಹೋದರೆ, ಆ ಮೊತ್ತ ಬ್ಯಾಂಕ್ ಗಳ ಬಳಿ ಅನ್ ಕ್ಲೆಮ್ಡ್ ಪಟ್ಟಿಯಲ್ಲಿ ಹಾಗೆಯೇ ಉಳಿಯುತ್ತಿತ್ತು. ಈ ಅನ್ಕ್ಲೆಮ್ಡ್ ಮೊತ್ತಕ್ಕೆ ಬ್ಯಾಂಕುಗಳು ಉಳಿತಾಯ ಖಾತೆಗೆ ಕೊಡುವ ಬಡ್ಡಿಯನ್ನು ಪಾವತಿಸುತ್ತಿದ್ದವು. ಒಂದು ನಿಗದಿತ ಅವಧಿಗೆ, ನಿಗದಿತ ಬಡ್ಡಿದರದ ಮೇಲೆ ಬ್ಯಾಂಕ್ ಗಳಲ್ಲಿ ಮಾಡಲಾಗುವ ಹೂಡಿಕೆಯನ್ನು ಸ್ಥಿರ ಠೇವಣಿ / ಅವಧಿಯ ಠೇವಣಿ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ರಿಕರಿಂಗ್, ಕಮ್ಯುಲೇಟಿವ್, ಎನ್ಯೂಟಿ, ರೀಇನ್ವೆಸ್ಟ್ಮೆಂಟ್ ಡಿಪಾಸಿಟ್ ಹಾಗೂ ಕ್ಯಾಶ್ ಸರ್ಟಿಫಿಕೆಟ್ ಗಳಂತಹ ಡಿಪಾಸಿಟ್ ಗಳು ಶಾಮೀಲಾಗಿವೆ.


ಇದನ್ನೂ ಓದಿ- EPFO Interest Calculation- ನಿಮ್ಮ ಪಿಎಫ್‌ನ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂದು ತಿಳಿದಿದೆಯೇ?


ಸುರಕ್ಷಿತ ಹೂಡಿಕೆಗೆ FD ಉತ್ತಮ ಆಯ್ಕೆಗಳಾಗಿವೆ
ಭಾರತದಲ್ಲಿ ಬ್ಯಾಂಕ್ ಎಫ್‌ಡಿಗಳು ಸುರಕ್ಷಿತ ಹೂಡಿಕೆ ಮತ್ತು ಖಾತರಿಯ ಆದಾಯಕ್ಕಾಗಿ ಬಹಳ ಜನಪ್ರಿಯತೆ ಹೊಂದಿವೆ. ಸಾಂಪ್ರದಾಯಿಕವಾಗಿ ಇಂದಿಗೂ ಜನರು ಬ್ಯಾಂಕ್ ಎಫ್‌ಡಿಗಳನ್ನು ಬಯಸುತ್ತಾರೆ. ಆರ್‌ಬಿಐ ಟರ್ಮ್ ಠೇವಣಿ / ಸ್ಥಿರ ಠೇವಣಿ ಮೇಲಿನ ನಿಯಮಗಳಲ್ಲಿನ ಬದಲಾವಣೆಯು ಮ್ಯಾಚ್ಯುರಿಟಿ ನಂತರ ತಮ್ಮ ಎಫ್‌ಡಿ ನಗದು ಪಡೆಯದವರ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ- SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು


ನೂತನ ನಿಯಮದ ಪ್ರಕಾರ ಅನ್ಕ್ಲೆಮ್ಡ್ FD ವಿಷಯದಲ್ಲಿ ನಿಗದಿತ FD ಮೇಲಿನ ಬಡ್ಡಿ ದರ ಉಳಿತಾಯ ಖಾತೆಗೆ ಸಿಗುವ ಬಡ್ಡಿದರಕ್ಕಿಂತ ಹೆಚ್ಚಾಗಿದ್ದರೆ ಲಾಭ ಸಿಗಲಿದೆ ಹಾಗೂ ಒಂದು ವೇಳೆ ಇದು ಕಡಿಮೆಯಾಗಿದ್ದರೆ ಹೂಡಿಕೆದಾರರಿಗೆ ನಷ್ಟ ಉಂಟಾಗಲಿದೆ. ಆದರೆ, FD/TD ಮೇಲೆ ಸಿಗುವ ಬಡ್ಡಿ ದರ ತೆರಿಗೆ ಮಿತಿಗೆ ಒಳಪಡುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಿ. ಅಂದರೆ, ಒಂದು ವೇಳೆ ನಿಮಗೆ FDಯಿಂದ ಆದಾಯ ಬರುತ್ತಿದ್ದರೆ, ಆ ಆದಾಯಕ್ಕೆ ನೀವು ಬಡ್ಡಿ ಪಾವತಿಸಬೇಕು.


ಇದನ್ನೂ ಓದಿ-Modi Government Big Decision: MSME ಅಡಿ ಚಿಲ್ಲರೆ ಮತ್ತು ಸಗಟು ವ್ಯಾಪಾರ, ಮೋದಿ ಸರ್ಕಾರದ ಮಹತ್ವದ ನಿರ್ಧಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.