RBI New Rule For Online Shopping - ಒಂದು ವೇಳೆ ನೀವೂ ಕೂಡ ಆನ್ಲೈನ್ ನಲ್ಲಿ ಶಾಪಿಂಗ್ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಶೀಘ್ರದಲ್ಲಿಯೇ ಆನ್ಲೈನ್ ಶಾಪಿಂಗ್ ನಡೆಸುವ ವೇಳೆ ನಿಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ CVV ಜೊತೆಗೆ 16 ಅಂಕಿಗಳ ಕಾರ್ಡ್ ನಂಬರ್ ನಮೂದಿಸುವುದು ಕೂಡ ಕಡ್ಡಾಯವಾಗಲಿದೆ. ಗ್ರಾಹಕರ ಜೊತೆಗೆ ಆಗುತ್ತಿರುವ ಆನ್ಲೈನ್ ಫ್ರಾಡ್ ಅನ್ನು ತಡೆಗಟ್ಟುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಹೆಜ್ಜೆಯನ್ನು ಇಡಲಿದೆ. ಜೊತೆಗೆ ಗ್ರಾಹಕರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳನ್ನು ತಮ್ಮ ಸರ್ವರ್ ನಲ್ಲಿ ಸಂಗ್ರಹಿಸುವ ದೊಡ್ಡ ದೊಡ್ಡ ಟೆಕ್ ಕಂಪನಿಗಳಿಗೂ ಕೂಡ ಇದರಿಂದ ಕಡಿವಾಣ ಬೀಳಲಿದೆ.


COMMERCIAL BREAK
SCROLL TO CONTINUE READING

16 ಅಂಕಿಗಳ ಕಾರ್ಡ್ ಸಂಖ್ಯೆ ನಮೂದಿಸುವುದು ಕಡ್ಡಾಯ
ಆರ್‌ಬಿಐನ (Reserve Bank Of India) ಹೊಸ ನಿಯಮಗಳ ನಂತರ, ಗ್ರಾಹಕರ ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳ ಡೇಟಾವನ್ನು ತಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲು ಈ ಕಂಪನಿಗಳಿಗೆ  ಸಾಧ್ಯವಾಗುವುದಿಲ್ಲ. ಇನ್ಮುಂದೆ ಗ್ರಾಹಕರು ಯಾವುದೇ ಆನ್‌ಲೈನ್ ಪಾವತಿ ಮಾಡುವಾಗ (Online Payment) ಅವರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನ (Debit Or Credit Card)ಸಂಪೂರ್ಣ ವಿವರಗಳನ್ನು ನಮೂದಿಸಬೇಕಾಗುತ್ತದೆ. ಇದರರ್ಥ ಇನ್ಮುಂದೆ ನಿಮ್ಮ ಕಾರ್ಡ್ ನ ಕೇವಲ CVV Number ನಮೂದಿಸಿದರೆ ಮಾತ್ರ ಸಾಕಾಗುವುದಿಲ್ಲ. ಅದಷ್ಟೇ ಅಲ್ಲ ಯಾವುದೇ ವಹಿವಾಟು ಕೇವಲ ಸಿವಿವಿ ಸಂಖ್ಯೆ ಮೂಲಕ ನಡೆಸುವುದು ಸಾಧ್ಯವಿಲ್ಲ.  ಈ ಮೂಲಕ, ಕಂಪನಿಗಳು ಗ್ರಾಹಕರ ಡೇಟಾವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಮತ್ತು ಇದು ಗ್ರಾಹಕರ ಕಾರ್ಡ್ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. 


ಇದನ್ನೂ ಓದಿ-Online Shopping Tips: ಆನ್‌ಲೈನ್ ಶಾಪಿಂಗ್ ಮಾಡುವಾಗ ವಂಚನೆ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ


ಮುಂದಿನ ವರ್ಷದಿಂದ ಈ ನಿಯಮಗಳು ಜಾರಿಗೆ ಬರಲಿವೆ
ಮಾಧ್ಯಮ ವರದಿಗಳ ಪ್ರಕಾರ್ ಈ ಹೊಸ ನಿಯಮಗಳು ಮುಂದಿನ ವರ್ಷದ ಜನವರಿ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಇದಕ್ಕೂ ಮೊದಲು RBI ಈ ನಿಯಮವನ್ನು ಈ ವರ್ಷದ ಜುಲೈನಿಂದಲೇ ಜಾರಿಗೆ ತರುವುದಾಗಿ ಹೇಳಿತ್ತು. ಆದರೆ, ಈ ನಿಯಮದ ಎಕ್ಸಿಕೂಶನ್ ನಲ್ಲಾಗುತ್ತಿರುವ ಅಡಚಣೆಗಳ ಹಿನ್ನೆಲೆ ಇದು ಜಾರಿಗೆ ಬಂದಿರಲಿಲ್ಲ. ಇನ್ನೊಂದೆಡೆ ಬ್ಯಾಂಕುಗಳು ಕೂಡ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಿದ್ಧವಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಈ ನಿಯಮವನ್ನು ಜನವರಿ 2022 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. 


ಇದನ್ನೂ ಓದಿ-Online Shopping: ನೀವೂ Amazon-Flipkart ಮೇಲೆ Online Shopping ಮಾಡುತ್ತಿದ್ದರೆ ಈ ಸುದ್ದಿ ತಪ್ಪದೆ ಓದಿ


ಸೇಫ್ಟಿ ಹೆಚ್ಚಾಗಲಿದೆ
ಇನ್ನೊಂದೆಡೆ RBIನ ಈ ಹೊಸ ನಿಯಮದ ಕುರಿತು ತಮ್ಮ ಅಭಿಪ್ರಾಯ ಮಂಡಿಸಿರುವ ತಜ್ಞರು, ಈ ನಿಯಮದಿಂದ ಆನ್ಲೈನ್ ಪೇಮೆಂಟ್ ನಲ್ಲಿ ವಿಳಂಬವಾಗಲಿದೆ. ಆದರೆ, ಇದು ಹಣ ಪಾವತಿಸುವವರಿಗೆ ನಿಶ್ಚಿತ ರೂಪದಲ್ಲಿ ಭದ್ರತೆ ಒದಗಿಸಲಿದೆ. ಈ ನಿಯಮಗಳನ್ನು ಅನುಸರಿಸಿ, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ಗ್ರಾಹಕರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನ ಸಂಪೂರ್ಣ 16 ಅಂಕಿಗಳನ್ನು ನಮೂದಿಸಬೇಕಾಗಲಿದೆ. ಇದರೊಂದಿಗೆ, CVV, ಕಾರ್ಡ್ ಅವಧಿ ಮುಕ್ತಾಯ ದಿನಾಂಕದಂತಹ ವಿವರಗಳನ್ನು ಸಹ ಸ್ವಯಂಚಾಲಿತವಾಗಿ ನಮೂದಿಸಬೇಕಾಗಲಿದೆ. 


ಇದನ್ನೂ ಓದಿ-SBI YONO Super Saving Days: 50% ವರೆಗೆ ರಿಯಾಯಿತಿ ಜೊತೆಗೆ ಕ್ಯಾಶ್‌ಬ್ಯಾಕ್ ಕೂಡ ಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.