Online Shopping Tips: ಆನ್‌ಲೈನ್ ಶಾಪಿಂಗ್ ಮಾಡುವಾಗ ವಂಚನೆ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ

ಆನ್‌ಲೈನ್ ಶಾಪಿಂಗ್ ಸಮಯದಲ್ಲಿ ಅನೇಕ ವಂಚನೆ ಪ್ರಕರಣಗಳು ಬರುತ್ತಲೇ ಇರುತ್ತವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ವಂಚನೆಯನ್ನು ತಪ್ಪಿಸಲು ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿದಬೇಕು.

Written by - Yashaswini V | Last Updated : Jul 27, 2021, 11:48 AM IST
  • ಇತ್ತೀಚಿನ ದಿನಗಳಲ್ಲಿ ಶಾಪಿಂಗ್‌ಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿದೆ
  • ಗ್ರಾಹಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ, ಆಫ್‌ಲೈನ್‌ಗಿಂತ ಹೆಚ್ಚಿನ ಕೊಡುಗೆಗಳು ಮತ್ತು ಡೀಲ್‌ಗಳ ಲಾಭವನ್ನು ಪಡೆಯುತ್ತಾರೆ
  • ಅಲ್ಲದೆ, ಒಂದೇ ಸಮಯದಲ್ಲಿ ಉತ್ಪನ್ನದ ಹಲವು ಆಯ್ಕೆಗಳನ್ನು ನೀವು ಇಲ್ಲಿ ನೋಡಬಹುದು
Online Shopping Tips: ಆನ್‌ಲೈನ್ ಶಾಪಿಂಗ್ ಮಾಡುವಾಗ ವಂಚನೆ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ title=
Online Shopping Tips

Safe Online Shopping Tips: ಇತ್ತೀಚಿನ ದಿನಗಳಲ್ಲಿ ಶಾಪಿಂಗ್‌ಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿದೆ. ವಿಶೇಷವಾಗಿ ಕರೋನಾ ಯುಗದಲ್ಲಿ, ಜನದಟ್ಟಣೆ ತಪ್ಪಿಸಲು ಜನರು ಆನ್‌ಲೈನ್ ಶಾಪಿಂಗ್ (Online Shopping) ಸಂಸ್ಕೃತಿಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಅಳವಡಿಸಿಕೊಂಡಿದ್ದಾರೆ. ಗ್ರಾಹಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ, ಆಫ್‌ಲೈನ್‌ಗಿಂತ ಹೆಚ್ಚಿನ ಕೊಡುಗೆಗಳು ಮತ್ತು ಡೀಲ್‌ಗಳ ಲಾಭವನ್ನು ಪಡೆಯುತ್ತಾರೆ. ಅಲ್ಲದೆ, ಒಂದೇ ಸಮಯದಲ್ಲಿ ಉತ್ಪನ್ನದ ಹಲವು ಆಯ್ಕೆಗಳನ್ನು ನೀವು ಇಲ್ಲಿ ನೋಡಬಹುದು. ಇದು ಮಾತ್ರವಲ್ಲ, ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಬೆಲೆಯನ್ನು ಹೋಲಿಸಿದರೆ ನೀವು ಉತ್ಪನ್ನವನ್ನು ಕಡಿಮೆ ವೆಚ್ಚದಲ್ಲಿ ಖರೀದಿಸಬಹುದು. ಆದರೆ ಕೆಲವು ಬಳಕೆದಾರರು ಆನ್‌ಲೈನ್ ಶಾಪಿಂಗ್ ಸಮಯದಲ್ಲಿ ವಂಚನೆಗೂ ಬಲಿಯಾಗಿರುವ ಬಗ್ಗೆ ಹಲವು ವರದಿಗಳು ಬೆಳಕಿಗೆ ಬಂದಿವೆ. ಹಾಗಾಗಿ ವಂಚನೆಯನ್ನು ತಪ್ಪಿಸಲು ಆನ್‌ಲೈನ್ ಶಾಪಿಂಗ್‌ಗೆ ಮೊದಲು ಯಾವ ಯಾವ ವಿಷಯಗಳ ಬಗ್ಗೆ ನೆನಪಿನಲ್ಲಿಡಬೇಕು ಎಂದು ತಿಳಿಯಿರಿ.

ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಖರೀದಿಸಿ:
ಇ-ಕಾಮರ್ಸ್ ಸೈಟ್‌ಗಳ (e-Commerece Sites) ಹೊರತಾಗಿ, ನೀವು ಸಾಮಾನ್ಯವಾಗಿ ಫೇಸ್‌ಬುಕ್ ಅಥವಾ ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲೂ ಕೆಲವು ಶಾಪಿಂಗ್ ಆಯ್ಕೆಗಳನ್ನು ನೋಡುತ್ತೀರಿ. ಅಲ್ಲಿ ಅನೇಕ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ. ಆದರೆ ಈ ಅಪ್ಲಿಕೇಶನ್‌ಗಳ ಮೂಲಕ ಶಾಪಿಂಗ್ ಮಾಡುವ ಮೊದಲು ಅದನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ. ಏಕೆಂದರೆ ಇವುಗಳು ವಂಚನೆಯ ಜಾಲವಾಗಿರಬಹುದು ಮತ್ತು ಉತ್ಪನ್ನವನ್ನು ಖರೀದಿಸುವ ವೇಳೆ ಬ್ಯಾಂಕ್ ಖಾತೆ ಮಾಹಿತಿಯು ಸೋರಿಕೆಯಾಗುವ ಅಪಾಯವಿದೆ. ಹಾಗಾಗಿ ಇಂತಹ ವಂಚನೆಗಳನ್ನು ತಪ್ಪಿಸಲು ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದಲೇ ಶಾಪಿಂಗ್ ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ- Photo, Videoಗಳಿಂದ ತುಂಬಿ ಹೋಗಿದೆಯಾ ಫೋನ್ ? ಈ ಟ್ರಿಕ್ ಮೂಲಕ ಸ್ಟೋರೇಜ್ ಸ್ಪೇಸ್ ಹೆಚ್ಚಿಸಿಕೊಳ್ಳಿ

ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸಿ:
ಆನ್‌ಲೈನ್ ಶಾಪಿಂಗ್ (Online Shopping) ಸಮಯದಲ್ಲಿ ಪಾವತಿ ಮಾಡಲು ಸುರಕ್ಷಿತ ಮಾರ್ಗವೆಂದರೆ ಸಿಒಡಿ ಅಂದರೆ ಕ್ಯಾಶ್ ಆನ್ ಡೆಲಿವರಿ ಆಯ್ಕೆ. ಇದರಲ್ಲಿ, ಸರಕುಗಳು ಮೊದಲು ನಿಮ್ಮನ್ನು ತಲುಪುತ್ತವೆ ಮತ್ತು ನಂತರ ನೀವು ಪಾವತಿಸಬೇಕಾಗುತ್ತದೆ. ಆನ್‌ಲೈನ್ ಶಾಪಿಂಗ್ ಸಮಯದಲ್ಲಿ ವಂಚನೆಯನ್ನು ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ.

ಎಟಿಎಂ ಕಾರ್ಡ್ ವಿವರಗಳನ್ನು ಉಳಿಸಬೇಡಿ:
ಆಗಾಗ್ಗೆ ಆನ್‌ಲೈನ್ ಶಾಪಿಂಗ್ ಸಮಯದಲ್ಲಿ, ಬಳಕೆದಾರರು ತಮ್ಮ ಎಟಿಎಂ ಕಾರ್ಡ್ ವಿವರಗಳನ್ನು ಉಳಿಸುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಶಾಪಿಂಗ್ ಅನ್ನು ಆರಾಮವಾಗಿ ಮಾಡಬಹುದು ಎಂದು ಅವರು ನಂಬುತ್ತಾರೆ. ಆದರೆ ಶಾಪಿಂಗ್ ಸೈಟ್‌ಗಳಲ್ಲಿ ಎಟಿಎಂ ಕಾರ್ಡ್ ವಿವರಗಳನ್ನು ಉಳಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಆನ್‌ಲೈನ್ ಪಾವತಿ ಮಾಡುವಾಗ, ಕಾರ್ಡ್ ವಿವರಗಳನ್ನು ಉಳಿಸುವ ಆಯ್ಕೆಯ ಟಿಕ್ ಅನ್ನು ತೆಗೆದುಹಾಕಿ ಮತ್ತು ನಂತರ ಪಾವತಿ ಮಾಡುವುದು ಉತ್ತಮ. ಇದರೊಂದಿಗೆ ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ-  Aadhaar Card ಅನ್ನು ಅಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ

ದಯವಿಟ್ಟು ವೆಬ್‌ಸೈಟ್ URL ಅನ್ನು ಪರಿಶೀಲಿಸಿ:
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಯಾವುದೇ ವಂಚನೆಯನ್ನು ತಪ್ಪಿಸಲು, ನೀವು ವೆಬ್‌ಸೈಟ್‌ನ URL ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ವೆಬ್‌ಸೈಟ್‌ನ URL ಎಚ್‌ಟಿಟಿಪಿ ಬದಲಿಗೆ ಎಚ್‌ಟಿಟಿಪಿಎಸ್ ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. HTTPS ಎಂದರೆ ಸೈಟ್ ಅನ್ನು Google ನಿಂದ ಸುರಕ್ಷಿತಗೊಳಿಸಲಾಗಿದೆ ಎಂದರ್ಥ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News