ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಸಾಲದ ನಿಯಮಗಳನ್ನು ಬದಲಾಯಿಸಿದೆ. ನಿರ್ದೇಶಕರಿಗೆ ವೈಯಕ್ತಿಕ ಸಾಲದ ಮಿತಿಯನ್ನು ಆರ್‌ಬಿಐ ಪರಿಷ್ಕರಿಸಿದೆ. ಈ ಹೊಸ ನಿಯಮಗಳ ಪ್ರಕಾರ, ಬ್ಯಾಂಕುಗಳ ನಿರ್ದೇಶಕರ ಮಂಡಳಿ ಮತ್ತು ಅವರ ಕುಟುಂಬಗಳಿಗೆ ಸಾಲದ ಮಿತಿಯನ್ನು 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಮೊದಲು ಯಾವುದೇ ಬ್ಯಾಂಕ್ ನಿರ್ದೇಶಕರ ವೈಯಕ್ತಿಕ ಸಾಲ ಮಿತಿ 25 ಲಕ್ಷ ರೂ. ಇತ್ತು. ಇದರ ವಿವರವಾದ ಮಾಹಿತಿ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

RBI ಹೊಸ ನಿಯಮಗಳು :


ಆರ್‌ಬಿಐ(Reserve Bank of India) ಹೊರಡಿಸಿದ ಸುತ್ತೋಲೆಯಲ್ಲಿ, ಬ್ಯಾಂಕುಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಅಥವಾ ತಮ್ಮ ಸ್ವಂತ ಬ್ಯಾಂಕಿನ ಇತರ ನಿರ್ದೇಶಕರು ಮತ್ತು ಇತರರ ಸದಸ್ಯರು ಮತ್ತು ಅವರ ಮಕ್ಕಳನ್ನು ಹೊರತುಪಡಿಸಿ ಯಾವುದೇ ಸಂಬಂಧಿಕರಿಗೆ 5 ಕೋಟಿ ರೂ.ಗಿಂತ ಹೆಚ್ಚಿನ ಸಾಲವನ್ನು ನೀಡಲು ಬ್ಯಾಂಕುಗಳಿಗೆ ಅವಕಾಶವಿದೆ ಎಂದು ಹೇಳಲಾಗಿದೆ. ಸಂಗಾತಿ ಮತ್ತು ಅವರ ಮಕ್ಕಳನ್ನು ಹೊರತುಪಡಿಸಿ ಯಾವುದೇ ಸಂಬಂಧಿ ಪಾಲುದಾರ, ಪ್ರಮುಖ ಷೇರುದಾರ ಅಥವಾ ನಿರ್ದೇಶಕರಾಗಿರುವ ಯಾವುದೇ ಸಂಸ್ಥೆಯ ಎಲ್ಲ ಸದಸ್ಯೆರಿಗೂ ಇದು ಅನ್ವಯಿಸುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಸಿಹಿ ಸುದ್ದಿ : ಏಳನೇ ದಿನವು ಸ್ಥಿರ ಉಳಿದ ಪೆಟ್ರೋಲ್-ಡೀಸೆಲ್ ಬೆಲೆ 


ಸಾಲದ ಬಗ್ಗೆ ಮಂಡಳಿಗೆ ಮಾಹಿತಿ ನೀಡಲಾಗುತ್ತಿದೆ :


25 ಲಕ್ಷ ಅಥವಾ ₹ 5 ಕೋಟಿಗಿಂತ ಕಡಿಮೆ ಸಾಲ(Personal Loan) ಪಡೆಯುವವರಿಗೆ ಸಾಲ ಸೌಲಭ್ಯಕ್ಕಾಗಿ ಪ್ರಸ್ತಾವನೆಗಳನ್ನು ಮಾತ್ರ ಪ್ರಾಧಿಕಾರ ಅನುಮೋದಿಸಬಹುದು ಎಂದು ಆರ್‌ಬಿಐ ಹೇಳಿದೆ. ಆದರೆ ಬ್ಯಾಂಕ್ ಸಾಲ ನೀಡಲು ಬೇಕಾದ ಎಲ್ಲಾ ದಾಖಲೆಗಳನ್ನು ಮಂಡಳಿಗೆ ಮಾಹಿತಿ ನೀಡಬೇಕು. ಅದರ ನಂತರವೇ ಮಂಡಳಿಯು ಅದನ್ನು ನಿರ್ಧರಿಸುತ್ತದೆ.


ಸಾಲಕ್ಕಾಗಿ ಕಚೇರಿಯ ದುರುಪಯೋಗ :


ವಾಸ್ತವವಾಗಿ, ಇದಕ್ಕೂ ಮುಂಚೆಯೇ ಇಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ, ಇದರಲ್ಲಿ ಪ್ರಸ್ತುತ ನಿರ್ದೇಶಕರು ತಮ್ಮ ಕುಟುಂಬ ಸದಸ್ಯರಿಗೆ ಸಾಲ(Loan) ನೀಡುವದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್ ಎಂಡಿ ಮತ್ತು ಸಿಇಒ ಚಂದಾ ಕೊಚ್ಚರ್ ಅವರಿಂದ, ವಿಡಿಯೋಕಾನ್‌ಗೆ ₹3250 ಕೋಟಿ ಸಾಲ ನೀಡಲು ತಮ್ಮ ಹುದ್ದೆಯನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗೆ ಅನೇಕ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ಆರೋಪಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ಆರ್‌ಬಿಐ ಈಗ ಕೂಡ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ಬಹಳ ಒಳ್ಳೆಯ ಸುದ್ದಿಯಾಗಿದೆ.


ಇದನ್ನೂ ಓದಿ : PM Kisan: ಪಿಎಂ ಕಿಸಾನ್ ಫಲಾನುಭವಿಗಳು ಕೈಗೆಟುಕುವ ದರದಲ್ಲಿ ಸಾಲ ಪಡೆಯಲು ಇಲ್ಲಿದೆ ಸುಲಭ ಪ್ರಕ್ರಿಯೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ