ಬೆಂಗಳೂರು: ನೀವೂ ಸಾಲ ತೆಗೆದುಕೊಂಡಿದ್ದೀರಾ? ಮತ್ತು ಹಗಲು ರಾತ್ರಿ ರಿಕವರಿ ಏಜೆಂಟ್‌ಗಳ ಕರೆಗಳಿಂದ ತೊಂದರೆಗೊಳಗಾಗಿದ್ದಾರೆ ಈ ಸುದ್ದಿ ಕೇವಲ ನಿಮಗಾಗಿ, ಈ ನಿಟ್ಟಿನಲ್ಲಿ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿಶೇಷ ಪ್ರಸ್ತಾಪವೊಂದನ್ನು ಸಲ್ಲಿಸಿದೆ. ಒಂದೊಮ್ಮೆ ಅದು ಕಾಯರೂಪಕ್ಕೆ ಬಂದರೆ,  ವಸೂಲಾತಿ ಏಜೆಂಟ್‌ಗಳು ಸಂಜೆ 7 ರ ನಂತರ ನಿಮಗೆ ಕರೆ ಮಾಡಲು ಸಾಧ್ಯವಿಲ್ಲ. ಹೌದು, ಸಾಲ ವಸೂಲಾತಿಯ ಮಾನದಂಡಗಳ ಬಗ್ಗೆ ರಿಸರ್ವ್ ಬ್ಯಾಂಕ್ ತುಂಬಾ ಕಟ್ಟುನಿಟ್ಟಾಗಿದೆ.


COMMERCIAL BREAK
SCROLL TO CONTINUE READING

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ಬಾಕಿ ಇರುವ ಸಾಲಗಳ ವಸೂಲಾತಿಗಾಗಿ ಮಾನದಂಡಗಳನ್ನು ಬಿಗಿಗೊಳಿಸಲು ಪ್ರಸ್ತಾಪವನ್ನು ಸಲ್ಲಿಸಿದೆ. ಇದರ ಅಡಿಯಲ್ಲಿ, ಹಣಕಾಸು ಸಂಸ್ಥೆಗಳು ಮತ್ತು ಅದರ ವಸೂಲಾತಿ ಏಜೆಂಟ್‌ಗಳು ಸಾಲಗಾರರಿಗೆ ಬೆಳಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ.


ನಿಯಮಗಳನ್ನು ಅನುಸರಿಸಬೇಕು
ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಂತಹ ನಿಯಂತ್ರಿತ ಘಟಕಗಳು (ಆರ್‌ಇಗಳು) ಪ್ರಮುಖ ನಿರ್ವಹಣಾ ಕಾರ್ಯಗಳನ್ನು ಹೊರಗುತ್ತಿಗೆ ನೀಡಬಾರದು ಎಂದು ಆರ್‌ಬಿಐನ 'ಅಪಾಯ ನಿರ್ವಹಣೆ ಮತ್ತು ನೀತಿ ಸಂಹಿತೆಯ ಕರಡು ಸೂಚನೆಗಳು' ಹೇಳುತ್ತದೆ. ಈ ಕಾರ್ಯಗಳು ನೀತಿ ನಿರೂಪಣೆ ಮತ್ತು KYC ಮಾನದಂಡಗಳ ಅನುಸರಣೆ ಮತ್ತು ಸಾಲದ ಅನುಮೋದನೆಯನ್ನು ಒಳಗೊಂಡಿವೆ.


ನೀತಿ ಸಂಹಿತೆ ರೂಪಿಸಲಾಗುವುದು
ಹೊರಗುತ್ತಿಗೆ ವ್ಯವಸ್ಥೆಗಳಿಂದ ಗ್ರಾಹಕರ ಬಗೆಗಿನ ತಮ್ಮ ಜವಾಬ್ದಾರಿಗಳು ಕಡಿಮೆಯಾಗದಂತೆ ರಿಕವರಿ ಏಜೆಂಟ್ ಗಳು ಖಚಿತಪಡಿಸಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಪ್ರಕಾರ, ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೇರ ಮಾರಾಟದ ಏಜೆಂಟ್‌ಗಳು (ಡಿಎಸ್‌ಎ), ಡೈರೆಕ್ಟ್ ಮಾರ್ಕೆಟಿಂಗ್ ಏಜೆಂಟ್‌ಗಳು (ಡಿಎಂಎ) ಮತ್ತು ಕಲೆಕ್ಷನ್ ಏಜೆಂಟ್‌ಗಳಿಗೆ ನೀತಿ ಸಂಹಿತೆಯನ್ನು ರೂಪಿಸಬೇಕು. ನಿಯಂತ್ರಿತ ಘಟಕಗಳು ಡಿಎಸ್‌ಎಗಳು, ಡಿಎಂಎಗಳು ಮತ್ತು ರಿಕವರಿ ಏಜೆಂಟ್ರಿಗೆ ಸೂಕ್ತವಾಗಿ ತರಬೇತಿ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು ಇದರಿಂದ ಅವರು ತಮ್ಮ ಜವಾಬ್ದಾರಿಗಳನ್ನು ಸೂಕ್ಷ್ಮತೆಯಿಂದ ನಿರ್ವಹಿಸುತ್ತಾರೆ ಎಂದು ಹೇಳಿದೆ.


ಇದನ್ನೂ ಓದಿ-Diwali-Dhanteras ದಿನ ಚಿನ್ನ ಖರೀದಿಸಬೇಕೆ? ಅಸಲಿ-ನಕಲಿ ಚಿನ್ನವನ್ನು ಈ ರೀತಿ ಪತ್ತೆಹಚ್ಚಿ!


ರಿಕವರಿ ಏಜೆಂಟ್‌ಗಳು ಯಾವುದೇ ಸಾಲಗಾರನಿಗೆ ಬೆದರಿಕೆ ಹಾಕುವಂತಿಲ್ಲ
ಸಂಸ್ಥೆಗಳು ಮತ್ತು ಅದರ ವಸೂಲಾತಿ ಏಜೆಂಟ್‌ಗಳು ಸಾಲವನ್ನು ವಸೂಲಿ ಮಾಡುವಾಗ ಯಾವುದೇ ವ್ಯಕ್ತಿಯ ವಿರುದ್ಧ ಮೌಖಿಕ ಅಥವಾ ದೈಹಿಕವಾಗಿ ಯಾವುದೇ ರೀತಿಯ ಬೆದರಿಕೆ ಅಥವಾ ಕಿರುಕುಳವನ್ನು ನೀಡಬಾರದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.


ಇದನ್ನೂ ಓದಿ-Diwali 2023 ಹಬ್ಬಕ್ಕೆ ನೀವೂ 'ನೋ ಕಾಸ್ಟ್ ಇಎಂಐ' ಮೇಲೆ ಸರಕು ಖರೀದಿಸುತ್ತೀರಾ? ಬ್ಯಾಂಕ್ ಗಳ ಈ ಆಟ ನಿಮಗೆ ತಿಳಿದಿರಲಿ!


ಏಜೆಂಟರು ಸಾಲಗಾರರನ್ನು ಅವಮಾನಿಸಬಾರದು
ಇದಲ್ಲದೆ, ವಸೂಲಾತಿ ಏಜೆಂಟ್‌ಗಳು ಸಾಲಗಾರರನ್ನು ಸಾರ್ವಜನಿಕವಾಗಿ ಅವಮಾನಿಸುವಂತಿಲ್ಲ ಅಥವಾ ಅವರ ಗೌಪ್ಯತೆಗೆ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.