ನವದೆಹಲಿ: ನಿಯಮಗಳ ಉಲ್ಲಂಘನೆ ಹಿನ್ನೆಲೆ 8 ಬ್ಯಾಂಕ್‌ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ 8 ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿದೆ. ಗುಜರಾತ್‌ನ ಮೆಹ್ಸಾನಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಗರಿಷ್ಠ 40 ಲಕ್ಷ ರೂ. ದಂಡ ವಿಧಿಸಲಾಗಿದೆ.


COMMERCIAL BREAK
SCROLL TO CONTINUE READING

ನಿಯಮ ಪಾಲಿಸಿದ ಬ್ಯಾಂಕುಗಳಿಗೆ ದಂಡ  


ಮಾಹಿತಿಯ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Interest Rate on Co-operative Bank Deposits)ದ 2016ರ ನಿರ್ದೇಶನಗಳ ಕೆಲವು ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಮೆಹ್ಸಾನಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ದಂಡವನ್ನು ವಿಧಿಸಲಾಗಿದೆ. ಸಾಲದ ನಿಯಮಗಳಿಗೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಹಾರಾಷ್ಟ್ರದ ಇಂದಾಪುರದ ಇಂದಾಪುರ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ಗೆ 7 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Royal Enfield Hunter 350 ಭಾರತದಲ್ಲಿ ಬಿಡುಗಡೆ, ಕಂಪನಿಯ ಅತ್ಯಂತ ಹಗುರ ಬೈಕ್ ನ ಬೆಲೆ ಎಷ್ಟು ಗೊತ್ತಾ?


ಛತ್ತೀಸ್‌ಗಢ ಬ್ಯಾಂಕಿಗೆ 25 ಲಕ್ಷ ರೂ. ದಂಡ


ಮಹಾರಾಷ್ಟ್ರದ ವರುದ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಮಧ್ಯಪ್ರದೇಶದ ಮರ್ಯಾಡಿತ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಛಿಂದ್ವಾರಾ ಮತ್ತು ಮಹಾರಾಷ್ಟ್ರದ ಯವತ್ಮಾಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ನೋ ಯುವರ್ ಕಸ್ಟಮರ್ (ಕೆವೈಸಿ) ನಿಯಮಗಳ ಉಲ್ಲಂಘನೆ ಹಿನ್ನೆಲೆ 25 ಲಕ್ಷ ರೂ. ದಂಡ ವಿಧಿಸಲಾಗಿದೆ. KYC ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ರಾಯಪುರದ ಛತ್ತೀಸ್‌ಗಢ ರಾಜ್ಯ ಸಹಕಾರ ಬ್ಯಾಂಕ್ ಗೆ 25 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಲ್ಲದೇ ಗುಣದ ಸಹಕಾರಿ ಬ್ಯಾಂಕ್ ಮತ್ತು ಪಣಜಿಯ ಗೋವಾ ರಾಜ್ಯ ಸಹಕಾರ ಬ್ಯಾಂಕ್‌ಗೂ ದಂಡ ವಿಧಿಸಲಾಗಿದೆ.


ಈ ಹಿಂದೆ 3 ಸಹಕಾರಿ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆ  ಆರ್‌ಬಿಐ ಹಣ ಹಿಂಪಡೆಯುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಬಾಸ್ಮತ್‌ನಗರದ ಜಯಪ್ರಕಾಶ್ ನಾರಾಯಣ ನಗರಿ ಸಹಕಾರಿ ಬ್ಯಾಂಕ್ ಮೇಲೆ ನಿಷೇಧ ಹೇರಿರುವುದರಿಂದ ಖಾತೆದಾರರು ತಮ್ಮ ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲವೆಂದು ಆರ್‌ಬಿಐ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ


ಇದಲ್ಲದೇ ಸೊಲ್ಲಾಪುರದ ಕರ್ಮಲಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಖಾತೆದಾರರು ತಮ್ಮ ಖಾತೆಯಿಂದ ಕೇವಲ 10,000 ರೂ. ತೆಗೆದುಕೊಳ್ಳಬಹುದು. ವಿಜಯವಾಡದ ದುರ್ಗಾ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಅನ್ನು RBI ನಿಷೇಧಿಸಿದೆ. ಇದರ ಗ್ರಾಹಕರು ತಮ್ಮ ಠೇವಣಿಗಳಿಂದ 1.5 ಲಕ್ಷದವರೆಗೆ ಹಿಂಪಡೆಯಬಹುದಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.