RBI New Rules: ನೀವು ಸಹ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ ಆಗಸ್ಟ್ 31, 2023ರ ಬಳಿಕ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಾಗದೇ ಇರಬಹುದು. ಈ ಕುರಿತಂತೆ,  ದೇಶದ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೋಟೀಸ್ ನೀಡಿದ್ದು ಕೆವೈಸಿ ವಿವರಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ. 


COMMERCIAL BREAK
SCROLL TO CONTINUE READING

ಹೌದು, ಬ್ಯಾಂಕ್ ಗ್ರಾಹಕರು ತಮ್ಮ ಕೆವೈಸಿಯನ್ನು ಪೂರ್ಣಗೊಳಿಸಲು 31 ಆಗಸ್ಟ್ 2023ರವರೆಗೆ ಗಡುವು ನೀಡಲಾಗಿದ್ದು, ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಗ್ರಾಹಕರಿಗೆ ಸೆಪ್ಟೆಂಬ್ 01, 2023ರಿಂದ ಬ್ಯಾಂಕಿಂಗ್ ವಹಿವಾಟು ನಡೆಸಲು ಸಮಸ್ಯೆಗಳು ಎದುರಾಗಬಹುದು. 


KYC ಪೂರ್ಣಗೊಳಿಸದ ಗ್ರಾಹಕರಿಗೆ ಬ್ಯಾಂಕ್ ನೋಟೀಸ್:
ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರ ನೋಂದಾಯಿತ ವಿಳಾಸಕ್ಕೆ ನೋಟೀಸ್ ಕಳುಹಿಸುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ, ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕವೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 


ಇದನ್ನೂ ಓದಿ- ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದರೆ ಇನ್ನೊಂದು ವಾರದಲ್ಲಿ RBI ನೀಡಲಿದೆ ಸಿಹಿ ಸುದ್ದಿ !


ವಾಸ್ತವವಾಗಿ, ಆರ್‌ಬಿ‌ಐ ಹೊಸ ನಿಯಮಗಳ ಪ್ರಕಾರ, ಆಗಸ್ಟ್ 31, 2023ರ ಮೊದಲು ಬ್ಯಾಂಕ್ ಗ್ರಾಹಕರು ತಮ್ಮ ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ಭವಿಷ್ಯದಲ್ಲಿ ಅವರ ಬ್ಯಾಂಕಿಂಗ್ ವಹಿವಾತುಗಳಿಗೆ ಅಡತಡೆ ಉಂಟಾಗಬಹುದು. 


ಬ್ಯಾಂಕ್ ಗ್ರಾಹಕರು ಕೆವೈಸಿ ಪೂರ್ಣಗೊಳಿಸಲು ಏನು ಮಾಡಬೇಕು? 
ಭಾರತೀಯ ರಿಸರ್ವ್ ಬ್ಯಾಂಕ್ ನೀಡುರುವ ಮಾಹಿತಿಯ ಪ್ರಕಾರ, ಬ್ಯಾಂಕ್ ಗ್ರಾಹಕರು ತಮ್ಮ ಕೆವೈಸಿ ಪೂರ್ಣಗೊಳಿಸುವುದು ಅತ್ಯಾವಶ್ಯಕವಾಗಿದೆ. ಇದನ್ನು ಬ್ಯಾಂಕಿನ ವೆಬ್‌ಸೈಟ್ ಮೂಲಕವೂ ಪೂರ್ಣಗೊಳಿಸಬಹುದು. ಇಲ್ಲವೇ, ಗ್ರಾಹಕರು ಸ್ವತಃ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕವೂ ಕೆವೈಸಿಯನ್ನು ನವೀಕರಿಸಬಹುದು.  


ಇದನ್ನೂ ಓದಿ- ನಿಮ್ಮದೇ ಸ್ವಂತ ಕಂಪನಿ ಆರಂಭಿಸುವ ಉತ್ಸಾಹದಲ್ಲಿ ನೀವಿದ್ದಿರಾ..? ಕಂಪನಿ ಆರಂಭಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ 


ಕೆವೈಸಿ ಪೂರ್ಣಗೊಳಿಸಲು ಯಾವ ದಾಖಲೆಗಳು ಅಗತ್ಯ? 
ನೀವು ಬ್ಯಾಂಕ್ ಗ್ರಾಹಕರಾಗಿದ್ದು ಕೆವೈಸಿ ಪೂರ್ಣಗೊಳಿಸಲು ಬಯಸಿದರೆ ಇದಕ್ಕಾಗಿ ಸರ್ಕಾರದಿಂದ ನೀಡಲಾಗಿರುವ ಯಾವುದಾದರೂ ಒಂದು ಗುರುತಿನ ದಾಖಲೆ, ವಿಳಾಸ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಫೋಟೋ,  ನೋಂದಾಯಿತ ಮೊಬೈಲ್ ಸಂಖ್ಯೆ, ಫ್ಯಾನ್ ಕಾರ್ಡ್ ಅನ್ನು ನೀಡಬೇಕಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.