ಬೆಂಗಳೂರು : ಜನರು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ. ಕಷ್ಟದ ಸಮಯದಲ್ಲಿ ಈ ಹಣವು ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ ಈ ರೀತಿ ಬ್ಯಾಂಕ್ ನಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಬ್ಯಾಂಕ್ ನಷ್ಟ ಅನುಭವಿಸಿ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ.  ಆಗ ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟವರ ಸ್ಥಿತಿ ಅಯೋಮಯವಾಗಿರುತ್ತದೆ.  


COMMERCIAL BREAK
SCROLL TO CONTINUE READING

ಆದ್ದರಿಂದ, ನಿಮ್ಮ ಹಣವನ್ನು ಯಾವ ಬ್ಯಾಂಕ್ ನಲ್ಲಿಯೇ ಇಡಬೇಕಾದರೂ  ಆ ಬ್ಯಾಂಕ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ, ಆರ್‌ಬಿಐ ಒಂದು ಪಟ್ಟಿಯನ್ನು ( D-SIBs) ಬಿಡುಗಡೆ ಮಾಡಿತ್ತು. ದೇಶದ ಸುರಕ್ಷಿತ ಬ್ಯಾಂಕ್ ಗಳ ಹೆಸರನ್ನು ಇದರಲ್ಲಿ ಸೇರಿಸಲಾಗಿದೆ.


ಇದನ್ನೂ ಓದಿ : UPI Payment Safety Tips: ಯು‌ಪಿ‌ಐ ಪೇಮೆಂಟ್ ವೇಳೆ ನೆನಪಿರಲಿ ಈ ವಿಷಯಗಳು


ಈ ವರ್ಷದ ಆರಂಭದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂದು ಆರ್‌ಬಿಐ ನಿಮ್ಮ ಹಣ ಯಾವ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿದೆ ಮತ್ತು ಯಾವ ಬ್ಯಾಂಕ್‌ಗಳಲ್ಲಿ ನಿಮ್ಮ ಹಣ ಸುರಕ್ಷಿತವಾಗಿಲ್ಲ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.


ಒಂದು ದೇಶದಲ್ಲಿ ಒಂದು ದೊಡ್ಡ ಬ್ಯಾಂಕ್ ಕುಸಿದರೆ, ಅದರ ನಷ್ಟವು ಇಡೀ ಭಾರತೀಯ ಆರ್ಥಿಕತೆಯ ಮೇಲೆ ಬೀಳುತ್ತದೆ. ಇದರ ಜೊತೆಗೆ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. 


ಇದನ್ನೂ ಓದಿ : Arecanut today price (15-09-2023): ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ


ಈ ಪಟ್ಟಿಯಲ್ಲಿ ಯಾವ ಬ್ಯಾಂಕ್‌ಗಳಿವೆ : 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಸುರಕ್ಷಿತ ಬ್ಯಾಂಕ್‌ಗಳ ಪಟ್ಟಿಯಲ್ಲಿ ಒಂದು ಸರ್ಕಾರಿ ಮತ್ತು 2 ಖಾಸಗಿ ಬ್ಯಾಂಕ್‌ಗಳ ಹೆಸರುಗಳು ಸೇರಿವೆ. ಇದರಲ್ಲಿ ಸರ್ಕಾರಿ ವಲಯದ ಬ್ಯಾಂಕ್ ಎಂದರೆ ಅದು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಇದಲ್ಲದೆ, ಎರಡು ಖಾಸಗಿ ವಲಯದ ಬ್ಯಾಂಕ್‌ಗಳು ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 


ಅವುಗಳೆಂದರೆ HDFC ಬ್ಯಾಂಕ್ ಮತ್ತು ICICI ಬ್ಯಾಂಕ್.  ಇದರರ್ಥ ನಿಮ್ಮ ಖಾತೆಯು ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್‌ನಲ್ಲಿದ್ದರೆ ನಿಮ್ಮ ಹಣ ಸುರಕ್ಷಿತವಾಗಿದೆ ಎಂದು. 


ಇದನ್ನೂ ಓದಿ : LPG Price: ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ ಪಡೆಯುವ ಅವಕಾಶ: ಎಲ್ಲಿ? ಹೇಗೆ ಗೊತ್ತಾ?


ಯಾವ ಬ್ಯಾಂಕುಗಳು ಈ ಪಟ್ಟಿಯಲ್ಲಿ ಬರಬಹುದು  : 
ಸಾಮಾನ್ಯ ಬಂಡವಾಳ ಸಂರಕ್ಷಣೆ ಬಫರ್ ( usual capital conservation buffer) ಜೊತೆಗೆ ಹೆಚ್ಚುವರಿ ಸಾಮಾನ್ಯ ಇಕ್ವಿಟಿ ಶ್ರೇಣಿ 1 (additional Common Equity Tier 1 (CET1)   ಅನ್ನು ನಿರ್ವಹಿಸುವ ಅಗತ್ಯವಿರುವ ಬ್ಯಾಂಕುಗಳು ಮಾತ್ರ ಈ ಪಟ್ಟಿಯಲ್ಲಿ ಬರುತ್ತವೆ.


ಆರ್‌ಬಿಐ ಈ ಬ್ಯಾಂಕುಗಳ ಮೇಲೆ ನಿಗಾ ಇರಿಸುತ್ತದೆ : 
ಆರ್‌ಬಿಐ ಈ ಪಟ್ಟಿಯಲ್ಲಿ ಬರುವ ಬ್ಯಾಂಕುಗಳ ಮೇಲೆ ನಿಗಾ ಇಟ್ಟಿರುತ್ತದೆ.  . ರಿಸರ್ವ್ ಬ್ಯಾಂಕ್ ಈ ಬ್ಯಾಂಕ್‌ಗಳ ದಿನನಿತ್ಯದ ಕಾರ್ಯನಿರ್ವಹಣೆಯ ಮೇಲೆ ಕಣ್ಣಿಡುವುದಲ್ಲದೆ, ಯಾವುದೇ ದೊಡ್ಡ ಸಾಲ ಅಥವಾ ಖಾತೆಯ ಬಗ್ಗೆ  ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಇಷ್ಟೇ ಅಲ್ಲ, ಯಾವುದೇ ದೊಡ್ಡ ಯೋಜನೆಗೆ ಬ್ಯಾಂಕ್ ಸಾಲ ನೀಡುವ ಮಾತುಕತೆ ನಡೆಸಿದರೆ ಅದನ್ನು ಸಹ ಮೌಲ್ಯಮಾಪನ ಮಾಡಲಾಗುತ್ತದೆ. ಇದು ಬ್ಯಾಂಕಿನ ಒಟ್ಟಾರೆ ವ್ಯವಹಾರದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಲಿದೆಯೇ ಎಂಬುದನ್ನು  ಪರಿಶೀಲಿಸಿ ನೋಡುತ್ತದೆ. 


ಇದನ್ನೂ ಓದಿ 500 ರೂ ನೋಟಿನ ಬಗ್ಗೆ ಬಿಗ್ ಅಪ್ಡೇಟ್ ! ನಿಮ್ಮ ಬಳಿ ಇರುವ ನೋಟು ನಕಲಿಯಾಗಿರಬಹುದು ಎಚ್ಚರ !


ಈ ಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ : 
ರಿಸರ್ವ್ ಬ್ಯಾಂಕ್ 2015 ರಿಂದ ಅಂತಹ ಬ್ಯಾಂಕುಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಇಂತಹ ಬ್ಯಾಂಕುಗಳು ದೇಶದ ಆರ್ಥಿಕತೆಗೆ ಅಗತ್ಯ ಎನ್ನುವುದು  ರಿಸರ್ವ್ ಬ್ಯಾಂಕ್ ನಂಬಿಕೆ. ಆರ್‌ಬಿಐ ಈ ಬ್ಯಾಂಕ್‌ಗಳಿಗೆ ರೇಟಿಂಗ್ ಕೂಡ ನೀಡುತ್ತದೆ. ಈ ರೇಟಿಂಗ್ ನಂತರವೇ ಈ ಪ್ರಮುಖ ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಇಲ್ಲಿಯವರೆಗೆ ಈ ಪಟ್ಟಿಯಲ್ಲಿ ಕೇವಲ 3 ಬ್ಯಾಂಕ್‌ಗಳ ಹೆಸರುಗಳನ್ನು ಸೇರಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ