ದಿನಗೂಲಿ ಕಾರ್ಮಿಕರನ್ನು ಖಾಯಂ ಗೊಳಿಸಲು ನಿರ್ಧಾರ : ಡಿಎ ಹೆಚ್ಚಳದೊಂದಿಗೆ ಸಿಗಲಿದೆ ಬೋನಸ್ : ಸರ್ಕಾರದ ಮೂರು ಮಹತ್ವದ ಘೋಷಣೆ

7th pay commission :ರಾಜ್ಯ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದೆ. ಅರಣ್ಯ ನಿಗಮದ ನೌಕರರು ಇದರ ಲಾಭ ಪಡೆಯಲಿದ್ದಾರೆ. 

Written by - Ranjitha R K | Last Updated : Sep 14, 2023, 09:06 AM IST
  • ಸರ್ಕಾರದ ಮೂರು ಮಹತ್ವದ ಘೋಷಣೆ
  • ದಿನಗೂಲಿ ಕಾರ್ಮಿಕರಿಗೆ ಸಿಗಲಿದೆ ಲಾಭ
  • ತುಟ್ಟಿಭತ್ಯೆ ಜತೆಗೆ ಕೈ ಸೇರುವುದು ಬೋನಸ್
ದಿನಗೂಲಿ ಕಾರ್ಮಿಕರನ್ನು ಖಾಯಂ ಗೊಳಿಸಲು ನಿರ್ಧಾರ : ಡಿಎ ಹೆಚ್ಚಳದೊಂದಿಗೆ ಸಿಗಲಿದೆ ಬೋನಸ್  : ಸರ್ಕಾರದ ಮೂರು ಮಹತ್ವದ ಘೋಷಣೆ  title=

7th pay commission : ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ  ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಮೂಲಗಳ ಪ್ರಕಾರ, ಮೋದಿ ಸರ್ಕಾರವು ಉದ್ಯೋಗಿಗಳ ತುಟ್ಟಿಭತ್ಯೆ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಈ ನಡುವೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದೆ. ಅರಣ್ಯ ನಿಗಮದ ನೌಕರರು ಇದರ ಲಾಭ ಪಡೆಯಲಿದ್ದಾರೆ. 

ಸರ್ಕಾರ ಮಹತ್ವದ ಘೋಷಣೆ :  
ಹಿಮಾಚಲ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.  ಹಿಮಾಚಲ ಪ್ರದೇಶ ಸರ್ಕಾರವು ಅರಣ್ಯ ನಿಗಮದ ನೌಕರರಿಗೆ ತುಟ್ಟಿಭತ್ಯೆ ನೀಡಲು ಮುಂದಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಕೂಡಾ ಮಾಡಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಜನವರಿ 1, 2022 ರಿಂದ ಅರಣ್ಯ ನಿಗಮದ ನೌಕರರಿಗೆ ಮೂರು ಪ್ರತಿಶತ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದಾರೆ.  ಈ ಹೆಚ್ಚಳದೊಂದಿಗೆ ಈಗ ನೌಕರರ ವೇತನದಲ್ಲಿ ಏರಿಕೆಯಾಗಲಿದೆ.  

ಇದನ್ನೂ ಓದಿ : ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ: ಸಾರ್ವಕಾಲಿಕ ದರ ಇಳಿಕೆಯಿಂದ 10 ಗ್ರಾಂ ಬಂಗಾರದ ರೇಟ್ ಎಷ್ಟಾಗಿದೆ ಗೊತ್ತಾ?

ದಿನಗೂಲಿ ಕಾರ್ಮಿಕರಿಗೆ ಲಾಭ : 
ಇದಲ್ಲದೇ ದಿನಗೂಲಿ ಕಾರ್ಮಿಕರಿಗೂ ಮಹತ್ವದ ಘೋಷಣೆ ಮಾಡಲಾಗಿದೆ. ದಿನಗೂಲಿ ಕಾರ್ಮಿಕರಾಗಿ ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಿಗಮದ ಅರ್ಹ ಉದ್ಯೋಗಿಗಳ ಸೇವೆಗಳನ್ನು ಕಾಯಂಗೊಳಿಸುವುದಕ್ಕೂ  ಅನುಮೋದನೆ ನೀಡಲಾಗಿದೆ. ಹಿಮಾಚಲ ಪ್ರದೇಶ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರ ಮಂಡಳಿಯ 213 ನೇ ಸಭೆಯ ಅಧ್ಯಕ್ಷತೆ ವಹಿಸಿದ, ಮುಖ್ಯಮಂತ್ರಿ ಸುಖು ಈ ಘೋಷಣೆ ಮಾಡಿದ್ದಾರೆ. 

ತುಟ್ಟಿಭತ್ಯೆ ಜತೆಗೆ ಬೋನಸ್ : 
ತುಟ್ಟಿಭತ್ಯೆ ಜತೆಗೆ ಬೋನಸ್ ನೀಡಲು ನಿರ್ಧರಿಸಲಾಗಿದೆ. 2022-23ನೇ ಸಾಲಿಗೆ ನಿಗಮದ ನೌಕರರಿಗೆ ಬೋನಸ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.  ಸುಮಾರು 253 ನೌಕರರಿಗೆ ಇದರಿಂದ ಅನುಕೂಲವಾಗಲಿದೆ.  ಅರಣ್ಯ ನಿಗಮವನ್ನು ಬಲಪಡಿಸಿ ಸ್ವಾವಲಂಬಿ ಮತ್ತು ಲಾಭದಾಯಕ ಸಂಸ್ಥೆಯಾಗಿ ರೂಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅರಣ್ಯ ನಿಗಮದಲ್ಲಿ ನೌಕರರ ಕೊರತೆ ನೀಗಿಸಲು 100 ವನ ಮಿತ್ರರನ್ನು ನೇಮಿಸಲಾಗುವುದು  ಎಂದ ಹೇಳಿದ್ದಾರೆ. 

ಇದನ್ನೂ ಓದಿ : Home Loan ಪಡೆಯುವವರಿಗೆ ಬಿಗ್ ಅಪ್‌ಡೇಟ್, ಬ್ಯಾಂಕ್‌ನ ಈ ತಪ್ಪಿಗೆ ಗ್ರಾಹಕರಿಗೆ ಪ್ರತಿದಿನ ಸಿಗುತ್ತೆ 5000 ರೂ.

ವೇತನದಲ್ಲಿ ಹೆಚ್ಚಳ : 
ಹಿಮಾಚಲ ಪ್ರದೇಶ ಸರ್ಕಾರದ ಈ ಘೋಷಣೆಯಿಂದ ನೂರಾರು ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಈ ನೌಕರರ ವೇತನವೂ ಹೆಚ್ಚಾಗಲಿದೆ. ಈ ಮೂಲಕ ಆಧಿಕ ಮೊತ್ತ ನೌಕರರ ಜೇಬು ಸೇರಲಿದೆ. 

ಮತ್ತೊಂದೆಡೆ ಕೇಂದ್ರ ಸರ್ಕಾರಿ ನೌಕರರು ಕೂಡಾ ಡಿ ಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ನೌಕರರ ತುತ್ತಿಭತ್ಯೆ ಜುಲೈನಿಂದ  ಹೆಚ್ಚಳವಾಗಲಿದೆ. ಕೆಲವರು ಈ ಹೆಚ್ಚಳ  3 ಪ್ರತಿಶತ ಎಂದು ಹೇಳಿದರೆ ಮತ್ತೊಂದು ಲೆಕ್ಕಾಚಾರ  4 ಪ್ರತಿಶತ ಎಂದು ಹೇಳುತ್ತದೆ. ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡಿದರೂ ನೌಕರರ ವೇತನದಲ್ಲಿ ಉತ್ತಮ ಏರಿಕೆಯೇ ಆಗಲಿದೆ. ಉದಾಹರಣೆಗೆ, ಉದ್ಯೋಗಿಯ ವೇತನವು ತಿಂಗಳಿಗೆ ರೂ 50,000 ಆಗಿದ್ದರೆ ಮತ್ತು ಅವರ ಮೂಲ ವೇತನ ರೂ 15,000 ಆಗಿದ್ದರೆ, ಅವರು ಈಗ 42 ಪ್ರತಿಶತ ಸಬ್ಸಿಡಿಯಾಗಿ ರೂ 6,300 ಪಡೆಯುತ್ತಾರೆ. ಆದರೆ, ಡಿಎ ಹೆಚ್ಚಳವನ್ನು ಶೇ 3 ರಷ್ಟು ಹೆಚ್ಚಿಸಿದರೆ, ಅವರು ತಿಂಗಳಿಗೆ 6,750 ರೂ.ಗಳನ್ನು ಸಬ್ಸಿಡಿಯಾಗಿ ಪಡೆಯುತ್ತಾರೆ. ಇದು ತಿಂಗಳಿಗೆ 450 ರೂ. ಹಾಗಾಗಿ ನೌಕರನಿಗೆ ತಿಂಗಳಿಗೆ ರೂ.15,000 ಮೂಲ ವೇತನದೊಂದಿಗೆ ರೂ.50,000 ಸಂಬಳ ಬಂದರೆ, ಅವನ ಸಂಬಳ ತಿಂಗಳಿಗೆ ರೂ.450 ಹೆಚ್ಚಾಗುತ್ತದೆ.

ಇದನ್ನೂ ಓದಿ : ಈ ದಿನಾಂಕದಂದು ಹೊರ ಬೀಳಲಿದೆ ಡಿಎ ಹೆಚ್ಚಳದ ಅಧಿಸೂಚನೆ ! ಸರ್ಕಾರಿ ನೌಕರರ ವೇತನ ಹೆಚ್ಚಳದ ಲೆಕ್ಕಾಚಾರ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News