RBI Re-KYC Rules: ಕೆವೈಸಿ ನಿಯಮಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಹತ್ವದ ಮಾಹಿತಿ ನೀಡಿದ್ದಾರೆ. ನೀವು ಒಮ್ಮೆ KYC ಮಾಡಿದ್ದರೆ, ಎರಡನೇ ಬಾರಿ ಅದನ್ನು ಮಾಡಲು ನೀವು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಾಹಿತಿಯನ್ನು ನೀಡಿರುವ ಅವರು. ನಿಮ್ಮ ವಿಳಾಸ ಬದಲಾಗಿದ್ದರೆ, ನಿಮ್ಮ ಹೊಸ ವಿಳಾಸವನ್ನು ಇಮೇಲ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್‌ಗೆ ಕಳುಹಿಸಿ ಅಪ್ಡೇಟ್ ಮಾಡಿಸಿಕೊಳ್ಳಬಹುದು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ನೀವು ಯಾವುದೇ ಒಂದು ಬ್ಯಾಂಕ್‌ನಲ್ಲಿ KYC ಹೊಂದಿದ್ದರೆ, ಮತ್ತೆ KYC ಮಾಡುವ ಅಗತ್ಯವಿಲ್ಲ ಎಂದು RBI ಸ್ಪಷ್ಟವಾಗಿ ಹೇಳಿದೆ, ನೀವು ನಿಮ್ಮ CKYCR ಐಡೆಂಟಿಫೈಯರ್ ಸಂಖ್ಯೆಯನ್ನು ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಒಂದು ವೇಳೆ ಹಾಗೆ ಮಾಡಲು ನಿರಾಕರಿಸಿದರೆ, ನೀವು ನಿಮ್ಮ ಬ್ಯಾಂಕಿಗೆ ಸಂಬಂಧಿಸಿದಂತೆ ದೂರು ನೀಡಬಹುದು ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Retirement ಬಳಿಕ 1 ಕೋಟಿ, ತಿಂಗಳಿಗೆ 70 ಸಾವಿರ ಪೆನ್ಶನ್ ಒದಗಿಸುತ್ತದೆ ಸರ್ಕಾರದ ಈ ಯೋಜನೆ


ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದೇನು
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರು ಮರು-ಕೆವೈಸಿ ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀವು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಸುಲಭವಾಗಿ ಮರು-ಕೈವೈಸಿ ಮಾಡಬಹುದು. ಒಂದು ವೇಳೆ ನಿಮ್ಮ KYC ವಿವರಗಳಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ, ಇಮೇಲ್ ಕಳುಹಿಸುವ ಮೂಲಕ ಅಥವಾ ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಬ್ಯಾಂಕ್‌ಗೆ ಸಂದೇಶವನ್ನು ಕಳುಹಿಸುವ ಮೂಲಕ ನೀವು reKYC ಅನ್ನು ಪಡೆಯಬಹುದು.


ಇದನ್ನೂ ಓದಿ-Investment Tips: ವರ್ಷಾಂತ್ಯದೊಳಗೆ ಈ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಿ, 2023ರಲ್ಲಿ ಜಬರ್ದಸ್ತ್ ಲಾಭ ಪಡೆಯಿರಿ


ವಿಳಾಸ ಬದಲಾವಣೆಯ ಕುರಿತು kyc ಮಾಡುವುದು ಹೇಗೆ?
>> ಇದಕ್ಕಾಗಿ, ನೀವು ಮನೆಯಲ್ಲಿ ಕುಳಿತು ಬ್ಯಾಂಕ್‌ನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸಬಹುದು.
>> ಕೇವಲ 60 ದಿನಗಳಲ್ಲಿ ಪತ್ರವನ್ನು ಕಳುಹಿಸುವ ಮೂಲಕ ಬ್ಯಾಂಕ್ ಅದನ್ನು ಪರಿಶೀಲಿಸುತ್ತದೆ
>> CKYCR ಅಡಿಯಲ್ಲಿ, ಗ್ರಾಹಕರಿಗೆ CKYCR ಐಡೆಂಟಿಫಿಕೆಶನ್ ಸಂಖ್ಯೆಯನ್ನು ನೀಡಲಾಗುತ್ತದೆ, ಅದನ್ನು ನೀವು ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬಹುದು, ಬಳಿಕ ನೀವು ಇತರ ಬ್ಯಾಂಕ್ ನಲ್ಲಿ KYC ಮಾಡಬೇಕಾಗಿಲ್ಲ.
>> KYC ಮಾಡಲು ಬ್ಯಾಂಕ್‌ಗೆ ಬರಲು ನಿಮ್ಮ ಬ್ಯಾಂಕ್ ನಿಮ್ಮನ್ನು ಕೇಳಿದರೆ, ಈ ಕುರಿತು ನೀವು ಬ್ಯಾಂಕ್ ನ ಬ್ಯಾಂಕಿಂಗ್ ಒಂಬುಡ್ಸ್‌ಮನ್ ವ್ಯವಸ್ಥೆ ಮತ್ತು ಕಾನೂನುಬದ್ಧವಲ್ಲದ ತ್ವರಿತ ಪರಿಹಾರದ ಅಡಿಯಲ್ಲಿ ದೂರು ನೀಡಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.