/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

National Pension System: ನಿವೃತ್ತಿಯ ನಂತರ  ಹೆಚ್ಚುವರಿ ನಿಧಿ ಮತ್ತು ಅದರ ಜೊತೆಗೆ ನಿಯಮಿತ ಆದಾಯಕಾಗಿ  ಜನರು ಅನೇಕ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ.  ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯೋಜನೆ ಇಂತಹುದೇ ಯೋಜನೆಗಳಲ್ಲಿ ಒಂದು, ಇದು ಹೂಡಿಕೆದಾರರಿಗೆ ದೊಡ್ಡ ಮೊತ್ತದ ನಿಧಿಯನ್ನು ನೀಡುವುದರ ಜೊತೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಸಹ ಕೊಡುತ್ತದೆ. ಈ ಯೋಜನೆಯಲ್ಲಿ ನೀವು ಎಷ್ಟು ಹೂಡಿಕೆ ಮಾಡುವಿರೋ, ನಿಮಗೆ ನಿವೃತ್ತಿಯ ಬಳಿಕ ಅಷ್ಟು ಹೆಚ್ಚು ಹಣ ಸಿಗುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಭಾರತೀಯರು ಅಷ್ಟೇ ಅಲ್ಲ ಎನ್ ಆರ್ ಐಗಳೂ ಕೂಡ ಹೂಡಿಕೆ ಮಾಡಬಹುದು. 18 ರಿಂದ 70 ವರ್ಷ ವಯಸ್ಸಿನವರು ಇದರಲ್ಲಿ ಹೂಡಿಕೆ ಮಾಡಬಹುದು. ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ, ಟೈರ್ 1 ಮತ್ತು ಟೈರ್ 2 ಎಂಬ ಎರಡು ಖಾತೆಗಳನ್ನು ತೆರೆಯಲಾಗುತ್ತದೆ. ಟೈರ್ 1 ಇಲ್ಲದೆ ಯಾರೂ ಟೈರ್ 2 ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.

ಎನ್‌ಪಿಎಸ್‌ನಿಂದ ಕೋಟಿ ಆದಾಯ ಪಡೆಯುವುದು ಹೇಗೆ
ಹೂಡಿಕೆದಾರರು 28 ನೇ ವಯಸ್ಸಿನಲ್ಲಿ NPS ನಲ್ಲಿ ತಿಂಗಳಿಗೆ 10,000 ರೂಪಾಯಿಗಳನ್ನು ಹೂಡಿಕೆ ಮಾಡಲು ಆಂಭಿಸಿದರೆ ಮತ್ತು 60 ವರ್ಷ ವಯಸ್ಸಿನವರೆಗೆ ಅದನ್ನು ಮುಂದುವರೆಸಿದರೆ, ಅವರು 1.5 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯಬಹುದು ಮತ್ತು ತಿಂಗಳಿಗೆ 75,000 ರೂಪಾಯಿಗಳ ಪಿಂಚಣಿಯನ್ನು ಸಹ ಪಡೆಯುತ್ತಾರೆ.

ಒಟ್ಟು 1.6 ಕೋಟಿ ರೂಪಾಯಿಗಳು ಲಭಿಸುತ್ತವೆ
ಲೆಕ್ಕಾಚಾರದ ಪ್ರಕಾರ 28 ವರ್ಷದಿಂದ 60 ವರ್ಷಗಳವರೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಒಟ್ಟು ಮೊತ್ತ 38 ಲಕ್ಷ 40 ಸಾವಿರ ರೂ. ಆಗುತ್ತದೆ. ಇದರ ಮೇಲೆ ಅಂದಾಜು ಶೇಕಡಾ 10 ರಷ್ಟು ಆದಾಯವನ್ನು ಪರಿಗಣಿಸಿದರೆ, ಒಟ್ಟು ಕಾರ್ಪಸ್ 2.80 ಕೋಟಿ ರೂ. ಆಗುತ್ತದೆ. ಇಲ್ಲಿ ಅನ್ಯೂಟಿ ಖರೀದಿ ನಿಮ್ಮ ಒಟ್ಟು ಕಾರ್ಪಸ್‌ನ ಶೇ.40ರಷ್ಟು ಇರುತ್ತದೆ ಮತ್ತು ಅಂದಾಜು ಅನ್ಯೂಟಿ ದರವನ್ನು ವಾರ್ಷಿಕವಾಗಿ ಶೇ.8 ರಷ್ಟು ಇರಿಸಿದರೆ, ನಂತರ 60 ವರ್ಷ ವಯಸ್ಸಿನ ನಂತರ, ನೀವು ತಿಂಗಳಿಗೆ 75,000 ಪಿಂಚಣಿ ಪಡೆದು, ಒಟ್ಟು 1.6 ಕೋಟಿ ರೂ.ಒಟ್ಟು ಮೊತ್ತವನ್ನು ಸಹ ಪಡೆದುಕೊಳ್ಳಬಹುದು.

ಇದನ್ನೂ ಓದಿ-Arecanut Today Price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ದರ ಹೇಗಿದೆ ನೋಡಿ

ಇಕ್ವಿಟಿ ಎಕ್ಸ್ಪೋಜರ್ ಮತ್ತು ಸಿಂಗಲ್ ಇನ್ವೆಸ್ಟ್ಮೆಂಟ್ ಆಯ್ಕೆ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಸರ್ಕಾರದ ಬೆಂಬಲಿತ ಸಾಮಾಜಿಕ ಭದ್ರತಾ ಹೂಡಿಕೆ ಯೋಜನೆಯಾಗಿದೆ. ಇದು ಹೂಡಿಕೆದಾರರಿಗೆ ವೈಯಕ್ತಿಕ ಹೂಡಿಕೆಗಳಿಗೆ ಸಾಲ ಮತ್ತು ಇಕ್ವಿಟಿ ಎಕ್ಸ್ಪೋಜರ್ ಎರಡನ್ನೂ ನೀಡುತ್ತದೆ. NPS ಯೋಜನೆಯಲ್ಲಿ, ಖಾತೆದಾರರಿಗೆ ಈಕ್ವಿಟಿಯಲ್ಲಿ ಶೇ.75 ರಷ್ಟು ರಿಸ್ಕ್ ಅನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ-Gold Price Today: ರೆಪೋ ದರ ಏರಿಸಿದ RBI, ಚಿನ್ನ-ಬೆಳ್ಳಿ ದರದ ಮೇಲೂ ಪರಿಣಾಮ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆ ನೀಡುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
to get 1 crore after retirement and 70 thousand pension per month invest in this government scheme
News Source: 
Home Title: 

Retirement ಬಳಿಕ 1 ಕೋಟಿ, ತಿಂಗಳಿಗೆ 70 ಸಾವಿರ ಪೆನ್ಶನ್ ಒದಗಿಸುತ್ತದೆ ಸರ್ಕಾರದ ಈ ಯೋಜನೆ

Retirement ಬಳಿಕ 1 ಕೋಟಿ, ತಿಂಗಳಿಗೆ 70 ಸಾವಿರ ಪೆನ್ಶನ್ ಒದಗಿಸುತ್ತದೆ ಸರ್ಕಾರದ ಈ ಯೋಜನೆ
Caption: 
Investment Scheme
Yes
Is Blog?: 
No
Tags: 
Facebook Instant Article: 
Yes
Highlights: 

ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಇದರ ಅಡಿಯಲ್ಲಿ, ಟೈರ್ 1 ಮತ್ತು ಟೈರ್ 2 ಎಂಬ ಎರಡು ಖಾತೆಗಳನ್ನು ತೆರೆಯಲಾಗುತ್ತದೆ.

ಟೈರ್ 1 ಇಲ್ಲದೆ ಯಾರೂ ಟೈರ್ 2 ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.

Mobile Title: 
Retirement ಬಳಿಕ 1 ಕೋಟಿ, ತಿಂಗಳಿಗೆ 70 ಸಾವಿರ ಪೆನ್ಶನ್ ಒದಗಿಸುತ್ತದೆ ಸರ್ಕಾರದ ಈ ಯೋಜನೆ
Nitin Tabib
Publish Later: 
No
Publish At: 
Thursday, December 8, 2022 - 17:28
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No