Relief To Tax Payers: ಫಾರ್ಮ್ 15CA/15CB ಹಸ್ತಚಾಲಿತ ಭರ್ತಿ ಗಡವು ವಿಸ್ತರಣೆ
Relief To Tax Payers - ಆದಾಯ ತೆರಿಗೆಯ ಹೊಸ ಪೋರ್ಟಲ್‌ನಲ್ಲಿ (Income Tax eFiling New Portal) ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿ (e-Filing) ಎದುರಾಗುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಫಾರ್ಮ್ 15 ಸಿಎ / 15 ಸಿಬಿಯನ್ನು (Form 15CA/15CB Deadline) ಹಸ್ತಚಾಲಿತವಾಗಿ ಭರ್ತಿ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
Relief To Tax Payers - ಆದಾಯ ತೆರಿಗೆಯ ಹೊಸ ಪೋರ್ಟಲ್‌ನಲ್ಲಿ (Income Tax eFiling New Portal) ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿ (e-Filing) ಎದುರಾಗುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಫಾರ್ಮ್ 15 ಸಿಎ / 15 ಸಿಬಿಯನ್ನು (Form 15CA/15CB Deadline) ಹಸ್ತಚಾಲಿತವಾಗಿ ಭರ್ತಿ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಹೀಗಾಗಿ ಇದನ್ನು 20 ಆಗಸ್ಟ್ 2021 ರವರೆಗೆ ಭರ್ತಿ ಮಾಡಬಹುದಾಗಿದೆ. ಇದಕ್ಕೂ ಮೊದಲು ಈ ಗಡುವು 15 ಜುಲೈ 2021 ಆಗಿತ್ತು. ಆದಾಯ ತೆರಿಗೆ ಇಲಾಖೆಯ (Income Tax Department) ಹೊಸ ಪೋರ್ಟಲ್ ಅನ್ನು ಜೂನ್ 7 ರಂದು ಆರಂಭಿಸಿತ್ತು ಮತ್ತು ಮೊದಲ ದಿನ ತೆರಿಗೆದಾರರು, ತೆರಿಗೆ ವೃತ್ತಿಪರರು ಮತ್ತು ಇತರರು ಅದರ ಕಾರ್ಯಚಟುವಟಿಕೆಯಲ್ಲಿನ ಅಡಚಣೆಗಳ ಕುರಿತು ವರದಿ ಮಾಡಿದ್ದರು.
ಇದನ್ನೂ ಓದಿ-Gold-Silver Rate : ಚಿನ್ನದ ಬೆಲೆಯಲ್ಲಿ ಬದಲಾವಣೆ : ಪರಿಷ್ಕೃತ ಮತ್ತು ನಿಮ್ಮ ನಗರದ ಬೆಲೆ ಇಲ್ಲಿ ಪರಿಶೀಲಿಸಿ
ಆದಾಯ ತೆರಿಗೆ ಕಾಯ್ದೆ 1961 ರ (Income Tax Act 1961) ಪ್ರಕಾರ, ಫಾರ್ಮ್ 15 ಸಿಎ / 15 ಸಿಬಿ ಅನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ವಿದ್ಯುನ್ಮಾನವಾಗಿ ಸಲ್ಲಿಸಬೇಕಾಗುತ್ತದೆ. ಫಾರ್ಮ್ 15 ಸಿಎ ಎಂಬುದು ಅನಿವಾಸಿಗಳಿಗೆ ಪಾವತಿಸಲಾದ ಹಣದ ಸೋರ್ಸ್ ಮೇಲೆ ತೆರಿಗೆ ಕಡಿತಗೊಳಿಸಲಾಗಿದೆ ಎಂದು ರಮಿಟರ್ ಮಾಡಿದ ಘೋಷಣೆಯಾಗಿದೆ. ಆದರೆ ಫಾರ್ಮ್ 15 ಸಿಬಿ ಸಿಎವತಿಯಿಂದ ಸಲ್ಲಿಸಬೇಕಾದ ಪ್ರಮಾಣಪತ್ರವಾಗಿದ್ದು, ಸಾಗರೋತ್ತರ ಪಾವತಿಯ ಸಮಯದಲ್ಲಿ ಸಂಬಂಧಿತ ತೆರಿಗೆ ಪಾವತಿಯ ವೇಳೆ ಒಪ್ಪಂದ ಮತ್ತು ಐಟಿ ಕಾಯ್ದೆಯ ನಿಬಂಧನೆಗಳನ್ನು ಪಾಲಿಸಲಾಗಿದೆ ಎಂಬುದರ ದೃಡೀಕಾರಣವಾಗಿದೆ. ಅಧಿಕೃತ ವಿತರಕರು (ಬ್ಯಾಂಕುಗಳು) ಈ ಫಾರ್ಮ್‌ಗಳನ್ನು ಸಲ್ಲಿಸಿದ ನಂತರವೇ ವಿದೇಶದಲ್ಲಿ ಹಣವನ್ನು ರವಾನಿಸಬಹುದು.
ಇದನ್ನೂ ಓದಿ-IRCTC: ಆನ್‌ಲೈನ್ ಟಿಕೆಟ್ ಬುಕ್ ಆಗಿಲ್ಲ, ಆದರೆ ಖಾತೆಯಿಂದ ಹಣ ಕಡಿತಗೊಂಡಿದೆಯೇ? ಈ ರೀತಿ ರೀಫಂಡ್ ಪಡೆಯಬಹುದು
ಈ ಕುರಿತು ಹೇಳಿಕೆ ಹೊರಡಿಸಿರುವ CBDT ತೆರಿಗೆ ಪಾವತಿದಾರರು ಇದೀಗ ಫಾರ್ಮ್ 15CA/15CB ಅನ್ನು ಆಗಸ್ಟ್ 15, 2021ರವರೆಗೆ ಹಸ್ತಚಾಲಿತವಾಗಿ ಡೀಲರ್ ಬಳಿ ಸಂದಾಯ ಮಾಡಬಹುದು ಎಂದು ಹೇಳಿದೆ. ಇದಲ್ಲದೆ ಆಗಸ್ಟ್ 15 ತೆರಿಗೆ ಪಾವತಿದಾರರಿಂದ ಈ ಫಾರ್ಮ್ ಗಳನ್ನು ಸ್ವೀಕರಿಸಲು ಅಧಿಕೃತ ಡೀಲರ್ಗಳಿಗೂ ಕೂಡ ಸೂಚಿಸಿದೆ. ಈ ಫಾರ್ಮ್ ಗಳನ್ನೂ ನಂತರದ ದಿನಾಂಕಗಳಿಗೆ ಅಪ್ಲೋಡ್ ಮಾಡಲು ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸೌಲಭ್ಯ ಒದಗಿಸಲಾಗುವುದು ಮತ್ತು ಇದರಿಂದ ಡಾಕ್ಯುಮೆಂಟೆಶನ್ ಐಡೆಂಟಿಫಿಕೆಶನ್ ನಂಬರ್ ಜನರೇಟ್ ಮಾಡಲಾಗುವುದು.
ಇದನ್ನೂ ಓದಿ- Petrol-Diesel price : ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 108 ರೂ. ನಿಮ್ಮ ನಗರದ ಇಂಧನ ದರ ಪರಿಶೀಲಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ