ನವದೆಹಲಿ: ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವಾಗ, ಕೆಲವೊಮ್ಮೆ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ, ಆದರೆ ಟಿಕೆಟ್ ಕಾಯ್ದಿರಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಏನು ಮಾಡಬೇಕು. ನೀವು ಮರುಪಾವತಿ ಪಡೆಯಬಹುದೇ? ಹಾಗಿದ್ದರೆ ಅದು ಹೇಗೆ ಮತ್ತು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಎಂಬ ಬಗ್ಗೆ ಮಾಹಿತಿ ತಿಳಿದಿರುವುದು ಮುಖ್ಯ.
ಐಆರ್‌ಸಿಟಿಸಿಯಲ್ಲಿ ಅನೇಕ ಪಾವತಿ ಆಯ್ಕೆಗಳಿವೆ:-
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಯಾಣಿಕರಿಗಾಗಿ ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ರದ್ದತಿ ವೇದಿಕೆಯಾಗಿದೆ. ಅಲ್ಲಿ ನೀವು ಟಿಕೆಟ್ ಕಾಯ್ದಿರಿಸಲು ಮತ್ತು ಪಾವತಿಸಲು ವಿವಿಧ ಆಯ್ಕೆಗಳನ್ನು ಪಡೆಯುತ್ತೀರಿ. ಬಳಕೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಆಯ್ಕೆಗಳನ್ನು ಬಳಸಬಹುದು. ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇ-ವ್ಯಾಲೆಟ್, ಡಿಜಿಟಲ್ ವ್ಯಾಲೆಟ್ ಅನ್ನು ಟಿಕೆಟ್ ಬುಕಿಂಗ್ ಮತ್ತು ಪಾವತಿಗೆ ಬಳಸಬಹುದು.
ಕೆಲವೊಮ್ಮೆ ಪಾವತಿ ವಿಫಲಗೊಳ್ಳುತ್ತದೆ:
ಐಆರ್‌ಸಿಟಿಸಿ ಇ-ಟಿಕೆಟಿಂಗ್ (IRCTC e-ticketing) ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡುವಾಗ ಅನೇಕ ಬಾರಿ ಬಳಕೆದಾರರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಪ್ರತಿ ಸೆಕೆಂಡಿಗೆ ಸಾವಿರಾರು ಜನರು ವೆಬ್‌ಸೈಟ್‌ನಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಈ ಕಾರಣದಿಂದಾಗಿ ವೆಬ್‌ಸೈಟ್‌ನಲ್ಲಿ ಲೋಡ್ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಬುಕಿಂಗ್ ನಂತರ ಹಲವು ಬಾರಿ ಖಾತೆಯಿಂದ ಹಣ ಕಡಿತಗೊಂಡಿರುತ್ತದೆ, ಆದರೆ ಟಿಕೆಟ್ ಬುಕ್ ಆಗಿರುವುದಿಲ್ಲ.
ಇದನ್ನೂ ಓದಿ- Rajdhani Express: ರಾಜಧಾನಿ ಎಕ್ಸ್‌ಪ್ರೆಸ್ ಹೊಸ 'ಅವತಾರ್', 'ಸ್ಮಾರ್ಟ್' ಬೋಗಿಗಳೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಒತ್ತು
ಇದು ತುಂಬಾ ಸಂಕೀರ್ಣವಾದ ವ್ಯವಸ್ಥೆ: ಐಆರ್‌ಸಿಟಿಸಿ
ಐಆರ್‌ಸಿಟಿಸಿಯಲ್ಲಿ (IRCTC) ಆನ್‌ಲೈನ್ ಪಾವತಿಯು ಗ್ರಾಹಕರ ಇಂಟರ್ನೆಟ್ ಬ್ಯಾಂಡ್‌ವಿಡ್ತ್, ಬ್ಯಾಂಕುಗಳ ಐಟಿ ವ್ಯವಸ್ಥೆಗಳು ಮತ್ತು ಪಾವತಿ ಗೇಟ್‌ವೇಗಳ ನಡುವಿನ ತಾಂತ್ರಿಕ ಮತ್ತು ದೂರಸಂಪರ್ಕ ನೆಟ್‌ವರ್ಕಿಂಗ್ ಏಕೀಕರಣದ ಸಂಕೀರ್ಣ ಜಾಲವನ್ನು ಒಳಗೊಂಡಿರುತ್ತದೆ ಮತ್ತು ಹಲವಾರು ಅಂಶಗಳ ನಡುವೆ ಇಂಟರ್ನೆಟ್ ಸಂಪರ್ಕವನ್ನು ಅವಲಂಬಿಸಿದೆ. ಈ ಸಂಕೀರ್ಣ ನೆಟ್‌ವರ್ಕ್‌ನಲ್ಲಿನ ಯಾವುದೇ ವೈಫಲ್ಯ ಅಥವಾ ವಿಳಂಬವು ವ್ಯವಹಾರ ಪೂರ್ಣಗೊಳ್ಳುವ ಮೊದಲು ಪಾವತಿ ವೈಫಲ್ಯಕ್ಕೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಖಾತೆಯಿಂದ ಹಣ ಕಡಿತಗೊಳ್ಳುತ್ತದೆ ಆದರೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗಿರುವುದಿಲ್ಲ. ಈ ಸಂದರ್ಭಗಳಲ್ಲಿ ಏನು ಮಾಡುವುದು ಎಂಬ ಬಗ್ಗೆ ಮಾಹಿತಿ ಇದ್ದರೆ ನಿಮಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಾಗಬಹುದು.
1. ಪಾವತಿ ಆಗಿದೆ ಆದರೆ ಟಿಕೆಟ್ ಬುಕ್ ಆಗಿಲ್ಲ:
ಬುಕಿಂಗ್ ಸಮಯದಲ್ಲಿ ಪ್ರಯಾಣಿಕರು ಬೆರ್ತ್ ಆಯ್ಕೆ ಮಾಡುವ ಸಂದರ್ಭದಲ್ಲಿ ಬೆರ್ತ್ ಲಭ್ಯವಿಲ್ಲದ ಕಾರಣ ಟಿಕೆಟ್ ಬುಕ್ ಆಗುವುದಿಲ್ಲ. ನೆಟ್‌ವರ್ಕ್ ವೈಫಲ್ಯವೂ ಇದಕ್ಕೆ ಒಂದು ಕಾರಣವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಗ್ರಾಹಕರ ಹಣವನ್ನು ಮರುದಿನವೇ ಆಯಾ ಬ್ಯಾಂಕ್‌ಗೆ ಹಿಂತಿರುಗಿಸಲಾಗುತ್ತದೆ. ನಂತರ ಬ್ಯಾಂಕ್ ಆ ಹಣವನ್ನು ಬುಕಿಂಗ್ ಮಾಡಿದ ಗ್ರಾಹಕರ ಖಾತೆಗೆ ವರ್ಗಾಯಿಸುತ್ತದೆ. ಈ ಪ್ರಕ್ರಿಯೆ 2-3 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ- IRCTC: ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ ತಕ್ಷಣವೇ ಬರುತ್ತೆ ಅಲರ್ಟ್, ಸಿಗುತ್ತೆ ಕನ್ಫರ್ಮ್ ಟಿಕೆಟ್
2. ಟಿಕೆಟ್ ಬುಕ್ ಮಾಡುವ ವೇಳೆ ಪೇಮೆಂಟ್ ವಿಫಲವಾದಾಗ:-
ಐಆರ್‌ಸಿಟಿಸಿ ಮೊತ್ತವನ್ನು ಪಡೆಯುವ ಮೊದಲು ಬ್ಯಾಂಕ್ ಅಥವಾ ಪಾವತಿ ಗೇಟ್‌ವೇಯ ವ್ಯವಸ್ಥೆ ಅಥವಾ ನೆಟ್‌ವರ್ಕ್ ವಿಫಲವಾದಾಗ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ಈ ಮೊತ್ತವು ನಿಮ್ಮ ಖಾತೆಯಿಂದ ಕಡಿತಗೊಂಡಿರುತ್ತದೆ. ಆದರೆ ಐಆರ್‌ಸಿಟಿಸಿ ಖಾತೆಯನ್ನು ತಲುಪುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಪರಿಶೀಲನೆಯ ನಂತರ ಹಣವನ್ನು ಹಿಂದಿರುಗಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ