Indian economy : ಧರ್ಮ, ಅಧ್ಯಾತ್ಮ, ನಂಬಿಕೆ... ಇಂತಹ ವಿಷಯಗಳು ನಾಗರಿಕತೆಯ ಬೆಳವಣಿಗೆಯೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಜನರ ಜೀವನದ ಭಾಗವಾಗುತ್ತವೆ. ಕೆಲವರು ರಾಮನನ್ನು ಆರಾಧಿಸುತ್ತಾರೆ ಮತ್ತು ಕೆಲವರು ಅಲ್ಲಾನನ್ನು ನಂಬುತ್ತಾರೆ. ವಿವಿಧ ಧರ್ಮಗಳ ಜನರು ವಾಸಿಸುವ ಭಾರತದಂತಹ ದೇಶದಲ್ಲಿ, ಆಯಾ ಧರ್ಮದವರು ತಮ್ಮದೇ ಆದ ಯಾತ್ರಾ ಸ್ಥಳಗಳನ್ನು ಹೊಂದಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರತಿ ವರ್ಷ ದೇಶ ಮತ್ತು ಪ್ರಪಂಚದ ಹಲವೆಡೆಗಳಿಂದ ಲಕ್ಷಾಂತರ ಯಾತ್ರಿಕರು ಭಾರತದಲ್ಲಿನ ಪ್ರವಾಸಿ ತಾಣಗಳಿಗೆ ಬರುತ್ತಾರೆ. ವೈಷ್ಣೋದೇವಿ, ಅಜ್ಮೀರ್ ಷರೀಫ್, ಸಾರನಾಥ, ಮಹಾಬೋಧಿ ದೇವಸ್ಥಾನ, ತಿರುಪತಿ ಬಾಲಾಜಿ ಗೋಲ್ಡನ್ ಟೆಂಪಲ್, ಕಾಶಿ ವಿಶ್ವನಾಥ, ಇಂತಹ ಹಲವಾರು ಭಾರತದ ಯಾತ್ರಾಸ್ಥಳಗಳಲ್ಲಿ ವರ್ಷವಿಡೀ ಭಕ್ತ ಸಮೂಹವಿರುತ್ತದೆ. ಈ ಯಾತ್ರಾ ಸ್ಥಳಗಳು ಈಗ ಕೇವಲ ನಂಬಿಕೆಯ ವಿಷಯವಾಗಿರದೆ ಆರ್ಥಿಕತೆಯ ಭಾಗವಾಗಿ ಮಾರ್ಪಟ್ಟಿವೆ. ಲಕ್ಷದ್ವೀಪ vs ಮಾಲ್ಡೀವ್ಸ್ ಎಂಬ ಚರ್ಚೆಯ ನಡುವೆ ಇಂದು ನಾವು ದೇಶದ ಜಿಡಿಪಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರವಾಸೋದ್ಯಮದ ಬಗ್ಗೆ ಹೇಳಲಿದ್ದೇವೆ. 


ಇದನ್ನೂ ಓದಿ: ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬೇಕೆ? ಇಲ್ಲಿದೆ 5 ಸುಲಭ ಮಾರ್ಗಗಳು..!


ದೇಶಾದ್ಯಂತ ಇಂತಹ ಅನೇಕ ಧಾರ್ಮಿಕ ಸ್ಥಳಗಳಿವೆ. ಅವುಗಳ ಆದಾಯ ಕೋಟಿಗಳಲ್ಲಿದೆ. ಈ ಧಾರ್ಮಿಕ ಕೇಂದ್ರಗಳು ಈಗ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ದೊಡ್ಡ ಉದ್ಯಮಗಳಿಗೆ ಜನ್ಮ ನೀಡುತ್ತಿವೆ. ಧಾರ್ಮಿಕ ಸ್ಥಳಗಳನ್ನು ಆರ್ಥಿಕತೆಯೊಂದಿಗೆ ಜೋಡಿಸಲು, ಸರ್ಕಾರವು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ ಧಾರ್ಮಿಕ ಸ್ಥಳಗಳನ್ನು ಮಾರುಕಟ್ಟೆಗೆ ಸಂಪರ್ಕಿಸಲಾಗುತ್ತಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.


ಧಾರ್ಮಿಕ ಪ್ರವಾಸೋದ್ಯಮವು ಹೊಸ ಪರಿಕಲ್ಪನೆಯಲ್ಲ. ಅನೇಕ ವರ್ಷಗಳಿಂದ ಜನರು ತೀರ್ಥಯಾತ್ರೆಗಾಗಿ ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಆದರೆ ಈಗ ಅದು ಬೇರೆ ಬೇರೆ ರೂಪದಲ್ಲಿ ವಿಸ್ತರಿಸುತ್ತಿದೆ. ಭಾರತದ ಪುರಾತನ ಕೋಟೆಗಳು, ಅರಮನೆಗಳು, ಕಡಲತೀರಗಳನ್ನು ನೋಡಲು ಮಾತ್ರವಲ್ಲದೆ ದೇಶದ ಯಾತ್ರಾ ಸ್ಥಳಗಳನ್ನು ನೋಡಲು ಜನರು ದೇಶ ಮತ್ತು ಪ್ರಪಂಚದ ವಿವಿಧ ಕಡೆಗಳಿಂದ ಬರುತ್ತಾರೆ. ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾ ಅಥವಾ ಭೋಲೆನಾಥನ ನಗರವಾದ ಕಾಶಿ ವಿಶ್ವನಾಥ ದೇಗುಲಕ್ಕೆ ಪ್ರತಿ ವರ್ಷ ಲಕ್ಷಗಟ್ಟಲೆ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಈ ಧಾರ್ಮಿಕ ಸ್ಥಳಗಳು ಭಾರತದ ಜಿಡಿಪಿಯೊಂದಿಗೆ ಸಂಬಂಧ ಹೊಂದಿವೆ.


ದೇಶದ ಜಿಡಿಪಿಯಲ್ಲಿ ಧಾರ್ಮಿಕ ಸ್ಥಳಗಳ ಪಾಲು: 


ಒಂದೆಡೆ ಲಕ್ಷದ್ವೀಪ vs ಮಾಲ್ಡೀವ್ಸ್ ಎಂಬ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಧಾರ್ಮಿಕ ಪ್ರವಾಸೋದ್ಯಮದ ಇನ್ನೊಂದು ಅಂಶವನ್ನು ನೋಡುವುದು ಮುಖ್ಯವಾಗಿದೆ. ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ. ಭಾರತದ ಆರ್ಥಿಕತೆಯಲ್ಲಿ ದೇವಾಲಯದ ಪಾಲು ಹೆಚ್ಚುತ್ತಿದೆ. ಇದು 3 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಧಾರ್ಮಿಕ ಪ್ರವಾಸೋದ್ಯಮವು ಭಾರತದ ಜಿಡಿಪಿಯಲ್ಲಿ 2.32% ಪಾಲನ್ನು ಹೊಂದಿದೆ. ಭಾರತದಲ್ಲಿ ದೇವಸ್ಥಾನಗಳ ಆದಾಯ ಹೆಚ್ಚುತ್ತಿದೆ.


ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮ : 


ಧಾರ್ಮಿಕ ಪ್ರವಾಸೋದ್ಯಮವು ಭಾರತದ ಪ್ರವಾಸೋದ್ಯಮದ ಸುಮಾರು 60 ಪ್ರತಿಶತವನ್ನು ಹೊಂದಿದೆ. 2022 ರಲ್ಲಿ ಧಾರ್ಮಿಕ ಪ್ರವಾಸೋದ್ಯಮದಿಂದ 902 ಮಿಲಿಯನ್ ಡಾಲರ್ ಗಳಿಕೆ ಆಗಿದೆ. ಸ್ಟ್ಯಾಟಿಸ್ಟಾ ವರದಿಯ ಪ್ರಕಾರ, ಇದು ಜಾಗತಿಕ ಪ್ರಯಾಣದ ಶೇಕಡಾ 6 ರಿಂದ 11 ರಷ್ಟಿದೆ. 2022 ರಲ್ಲಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಲು 7 ಕೋಟಿ ಜನರು ವಾರಣಾಸಿ ತಲುಪಿದ್ದರು.


ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಧಾರ್ಮಿಕ ಪ್ರವಾಸೋದ್ಯಮವು 2022 ರಲ್ಲಿ 1,34,543 ಕೋಟಿ ರೂಪಾಯಿಗಳನ್ನು ಗಳಿಸಿದೆ, ಇದು 2021 ರಲ್ಲಿ 65,070 ಕೋಟಿ ರೂಪಾಯಿಗಳಷ್ಟಿತ್ತು. 


ಕಳೆದ ಐದು ವರ್ಷಗಳಲ್ಲಿ ದೇವಸ್ಥಾನಗಳ ಗಳಿಕೆ : 


2022 ರಲ್ಲಿ 1,34,543 ಕೋಟಿ ರೂಪಾಯಿ 
2021 ರಲ್ಲಿ 65,070 ಕೋಟಿ ರೂಪಾಯಿ 
2020 ರಲ್ಲಿ 50,136 ಕೋಟಿ ರೂಪಾಯಿ 
2019 ರಲ್ಲಿ 2,11,661 ಕೋಟಿ ರೂಪಾಯಿ 
2018 ರಲ್ಲಿ 1,94 881 ಕೋಟಿ ರೂಪಾಯಿ 


ದೇವಸ್ಥಾನ ಆರ್ಥಿಕತೆಗೆ ಹೇಗೆ ಸಂಪರ್ಕ ಹೊಂದಿದೆ?


ಕೇದಾರನಾಥ ಕ್ಷೇತ್ರದ ಉದಾಹರಣೆ ನೋಡುವುದಾದರೆ, ಪ್ರತಿ ವರ್ಷ ಇಲ್ಲಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳವಾಗಿದೆ. 2018 ರಲ್ಲಿ 7,32,241 ಯಾತ್ರಿಕರು ಕೇದಾರನಾಥಕ್ಕೆ ಆಗಮಿಸಿದ್ದರು. 2022 ರಲ್ಲಿ 14,25,078 ಯಾತ್ರಿಕರು ಕೇದಾರನಾಥಕ್ಕೆ ಭೇಟಿ ನೀಡಿದ್ದರು. 


ಇದನ್ನೂ ಓದಿ: ಶ್ರೀರಾಮ ಜನ್ಮ ಭೂಮಿಯಲ್ಲಿ ಕರ್ಣಾಟಕ ಬ್ಯಾಂಕ್ ನ 915 ನೇ ಶಾಖೆ ಪ್ರಾರಂಭ 


ಧಾರ್ಮಿಕ ಸ್ಥಳಗಳಿಗೆ ಪ್ರವಾಸಿಗರ ಆಗಮನದಲ್ಲಿ ಏರಿಕೆಯಾಗುವುದು ಉದ್ಯೋಗ, ವ್ಯಾಪಾರ ಮತ್ತು ಮೂಲಭೂತ ಅಗತ್ಯಗಳ ಹೆಚ್ಚಳಕ್ಕೆ ನಾಂದಿ ಹಾಡಿದಂತೆ. ದೇವಾಲಯವು ಉದ್ಯೋಗದ ಮೂಲವಾಗಿದೆ. ಪಂಡಿತರಿಂದ ಹಿಡಿದು ಸ್ಥಳೀಯರವರೆಗೆ ಎಲ್ಲರಿಗೂ ಕೆಲಸ ಸಿಗುತ್ತದೆ. ಯಾತ್ರಾಸ್ಥಳದ ಸುತ್ತಮುತ್ತ ವ್ಯಾಪಾರ ಹೆಚ್ಚುತ್ತದೆ. ದೇಶ ಮತ್ತು ವಿದೇಶಗಳ ಜನರ ಸಂಚಾರವು ಸಾರಿಗೆ, ಹೋಟೆಲ್ ಉದ್ಯಮ ಮತ್ತು ಆಹಾರ ಉದ್ಯಮದ ಅಭಿವೃದ್ಧಿಗೆ ಕಾರಣವಾಗುತ್ತದೆ. ಸರ್ಕಾರದ ಆದಾಯವೂ ಹೆಚ್ಚುತ್ತದೆ. ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಮತ್ತು ಎನ್‌ಆರ್‌ಐಗಳು ಬರುತ್ತಾರೆ. ಇದು ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸುತ್ತದೆ, ಇದು ದೇಶದ ಆರ್ಥಿಕತೆಯನ್ನು ವೃದ್ಧಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.