ನವದೆಹಲಿ: ಲಕ್ಷ್ಮಿ ವಿಲಾಸ್ ಬ್ಯಾಂಕ್ ಶಾಖೆಗಳು ಇಂದಿನಿಂದ ಡಿಬಿಎಸ್ ಬ್ಯಾಂಕ್ ಇಂಡಿಯಾ ಎಂಬ ಹೊಸ ಹೆಸರಿನೊಂದಿಗೆ ಕಾರ್ಯನಿರ್ವಹಿಸಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಲಕ್ಷ್ಮಿ ವಿಲಾಸ್ ಬ್ಯಾಂಕ್ ಹೆಸರನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಎಂದು ಬದಲಾಯಿಸಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು ಇಂದಿನಿಂದ ಡಿಬಿಎಸ್ ಬ್ಯಾಂಕ್ ಇಂಡಿಯಾದ ಗ್ರಾಹಕರಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್ನ ಠೇವಣಿದಾರರು ಸೇರಿದಂತೆ ಗ್ರಾಹಕರು 2020ರ ನವೆಂಬರ್ 27 ರಿಂದ ಜಾರಿಗೆ ಬರುವಂತೆ ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ನ ಗ್ರಾಹಕರಾಗಿ ತಮ್ಮ ಖಾತೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಆರ್‌ಬಿಐ (RBI) ತಿಳಿಸಿದೆ.


ಡಿಬಿಎಸ್ ಬ್ಯಾಂಕ್ ಇಂಡಿಯಾ (DBS Bank India) ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರಿಗೆ ಎಂದಿನಂತೆ ಸೇವೆಯನ್ನು ಒದಗಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. 


ಡಿಬಿಎಸ್ ಬ್ಯಾಂಕ್ ಸಿಂಗಾಪುರದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಡಿಬಿಎಸ್ ಇಂಡಿಯಾದೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ (Lakshmi Vilas Bank) ವಿಲೀನಗೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ಆರ್‌ಬಿಐ ಈ ಕ್ರಮ ಕೈಗೊಂಡಿದೆ.


ಎಲ್‌ವಿಬಿಯಲ್ಲಿನ ಒತ್ತಡದ ತ್ವರಿತ ಸಂಯೋಜನೆ ಮತ್ತು ಪರಿಹಾರವು ಸ್ವಚ್ಛವಾದ ಬ್ಯಾಂಕಿಂಗ್ ವ್ಯವಸ್ಥೆಗೆ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ. ಆದರೆ ಠೇವಣಿದಾರರು, ಸಾರ್ವಜನಿಕ ಮತ್ತು ಹಣಕಾಸು ವ್ಯವಸ್ಥೆಯ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕ್ಯಾಬಿನೆಟ್ ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.


ಈ ಬ್ಯಾಂಕಿನಿಂದ ತಿಂಗಳಿಗೆ ₹ 25,000 ಮಾತ್ರ ವಿತ್ ಡ್ರಾ ಮಾಡಲು ಆರ್‌ಬಿಐ ಆದೇಶ


ಲಕ್ಷ್ಮಿ ವಿಲಾಸ್ ಬ್ಯಾಂಕನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ ಜೊತೆಗೆ ವಿಲೀನಗೊಳಿಸಿದೆ. ವಿಲೀನದೊಂದಿಗೆ, ಠೇವಣಿದಾರರು ತಮ್ಮ ಠೇವಣಿ ಹಿಂಪಡೆಯುವ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸಚಿವರು ಹೇಳಿದರು.  ಈಗ ಬ್ಯಾಂಕಿಗೆ ಅನ್ವಯವಾಗುವ ನಿಷೇಧದ ಅವಧಿ ಡಿಸೆಂಬರ್ 16 ರಿಂದ ನವೆಂಬರ್ 27 ಕ್ಕೆ ಇಳಿದಿದೆ. ಈಗ ಬ್ಯಾಂಕ್ ಗ್ರಾಹಕರು ತಮ್ಮ ಹಣವನ್ನು ಹಿಂಪಡೆಯಲು ಯಾವುದೇ ನಿರ್ಬಂಧವಿಲ್ಲ. 4,000 ಉದ್ಯೋಗಿಗಳ ಸೇವೆ ಕೂಡ ಸುರಕ್ಷಿತವಾಗಿರುತ್ತದೆ ಎಂದು ಅವರು ಹೇಳಿದರು.


Lakshmi Vilas Bank ವಿಲೀನದ ಬಗ್ಗೆ RBI ಏನು ಹೇಳಿದೆ?


ರಿಸರ್ವ್ ಬ್ಯಾಂಕ್ ಎಲ್‌ವಿಬಿಯ ಮಂಡಳಿಯನ್ನು ರದ್ದುಗೊಳಿಸಿ ಕೆನರಾ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷರಾದ ಟಿ ಎನ್ ಮನೋಹರನ್ ಅವರನ್ನು 30 ದಿನಗಳ ಕಾಲ ಬ್ಯಾಂಕಿನ ನಿರ್ವಾಹಕರಾಗಿ ನೇಮಿಸಿತ್ತು.