Royal Enfield Hunter 350 Price in india: ರಾಯಲ್ ಎನ್‌ಫೀಲ್ಡ್ ತನ್ನ ಹೊಚ್ಚ ಹೊಸ ಬೈಕ್ ಹಂಟರ್ 350 ಅನ್ನು ಇಂದು ಬಿಡುಗಡೆ ಮಾಡಿದೆ. ಇದರ ಬೆಲೆ ರೂ 1.49 ಲಕ್ಷದಿಂದ ಪ್ರಾರಂಭವಾಗುತ್ತದೆ. ತನ್ಮೂಲಕ ಇದು ಕಂಪನಿಯ ಎರಡನೇ ಅತ್ಯಂತ ಕಡಿಮೆ ಬೆಲೆಯ ಬೈಕ್ ಎನಿಸಿಕೊಂಡಿದೆ. ಬುಲೆಟ್ 350 ಇನ್ನೂ ಅಗ್ಗದ ಮಾದರಿಯಾಗಿದ್ದು, ಅದರ ಬೆಲೆ ರೂ.1.47 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಹೊಸ ಬೈಕು ಹೊಸ ಕ್ಲಾಸಿಕ್ 350 ಮತ್ತು ಮೆಟಿಯರ್ 350 ಗಳಂತೆಯೇ ಎಂಜಿನ್ ಮತ್ತು ವೇದಿಕೆಯನ್ನು ಹೊಂದಿದೆ. ನೋಡಲು ಈ ಬೈಕ್ ನಿಯೋ-ರೆಟ್ರೋ ಟೂರರ್ ಮತ್ತು ಸ್ಕ್ರ್ಯಾಂಬ್ಲರ್ ಬೈಕ್‌ನಂತೆಯೇ ಇದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಒಟ್ಟು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ - ರಾಯಲ್ ಎನ್‌ಫೀಲ್ಡ್ ಹಂಟರ್ 350 ರೆಟ್ರೋ ಮತ್ತು ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೆಟ್ರೋ. ರಾಯಲ್ ಎನ್‌ಫೀಲ್ಡ್ ಹಂಟರ್ 350 ರೆಟ್ರೋ ಮೂಲ ರೂಪಾಂತರವಾಗಿದೆ ಮತ್ತು ಮೆಟ್ರೋ ರೂಪಾಂತರದಲ್ಲಿ ನೀಡಲಾದ ಕೆಲವು ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿಲ್ಲ.


ಬೆಲೆ ಮತ್ತು ಬುಕಿಂಗ್
ಇಂದಿನಿಂದಲೇ ಈ ಬೈಕ್ ಬುಕ್ಕಿಂಗ್ ಆರಂಭವಾಗಿದೆ. ಟೆಸ್ಟ್ ಡ್ರೈವಿಂಗ್ ಆಗಸ್ಟ್ 10 ರಿಂದ ಪ್ರಾರಂಭವಾಗಲಿದೆ.
ರೆಟ್ರೋ ಹಂಟರ್ ಫ್ಯಾಕ್ಟರಿ ಸಿರೀಸ್- ರೂ 1,49,900 (ಎಕ್ಸ್ ಶೋ ರೂಂ, ಚೆನ್ನೈ)
ಮೆಟ್ರೋ ಹಂಟರ್ ಡ್ಯಾಂಪರ್ ಸಿರೀಸ್ - ರೂ 1,63,900 (ಎಕ್ಸ್ ಶೋ ರೂಂ, ಚೆನ್ನೈ)
ಮೆಟ್ರೋ ಹಂಟರ್ ರೆಬೆಲ್ ಸಿರೀಸ್ - ರೂ 1,68,900 (ಎಕ್ಸ್ ಶೋ ರೂಂ, ಚೆನ್ನೈ)


ಈ ಸ್ಪರ್ಧಾತ್ಮಕ ಬೆಲೆಯಲ್ಲಿ ಹಂಟರ್ 350, ಇತ್ತೀಚೆಗೆ ಬಿಡುಗಡೆಯಾದ TVS ರೋನಿನ್ ಮತ್ತು ಹೋಂಡಾ CB350 RS ಮತ್ತು ಜಾವಾ 42 ನಂತಹ ಬೈಕ್ ಗಳ ಜೊತೆಗೆ ಪೈಪೋಟಿಗಿಳಿಯಲಿದೆ. ಸಾಮಾನ್ಯವಾಗಿ ಈ ಎಲ್ಲಾ ಬೈಕ್‌ಗಳು ರೋಡ್‌ಸ್ಟರ್ ಲುಕ್‌ನಲ್ಲಿಯೂ ಬರುತ್ತವೆ. ರಾಯಲ್ ಎನ್‌ಫೀಲ್ಡ್ ಬೈಕ್ ರೌಂಡ್ ಹೆಡ್‌ಲ್ಯಾಂಪ್‌, ಇಂಡಿಕೇಟರ್‌ ಮತ್ತು ಉದ್ದವಾದ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ, ಇದು ನೋಡಲು ಬೈಕ್ ಗೆ ವಿಂಟೇಜ್ ಲುಕ್ ನೀಡುತ್ತದೆ. ಈ ಬೈಕ್ 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಎರಡೂ ಟೈರ್‌ಗಳು ಟ್ಯೂಬ್‌ಲೆಸ್ ಆಗಿದ್ದು, ಎರಡೂ ಗಾಲಿಗಳಿಗೆ ಡಿಸ್ಕ್ ಬ್ರೇಕ್‌ ಸಿಸ್ಟಂ ಅಳವಡಿಸಲಾಗಿದೆ.


ರಾಯಲ್ ಎನ್‌ಫೀಲ್ಡ್‌ನ ಹೊಸ ಬೈಕ್‌ಗೆ 349 ಸಿಸಿ ಜೆ-ಸಿರೀಸ್ ಎಂಜಿನ್ ಅಳವಡಿಸಲಾಗಿದೆ, ಈ ಇಂಜಿನ್ ಕ್ಲಾಸಿಕ್ 350 ಮತ್ತು ಮೆಟಿಯರ್ 350 ನಲ್ಲಿಯೂ ಲಭ್ಯವಿದೆ. ಬೈಕ್‌ನ ಸ್ವಭಾವಕ್ಕೆ ತಕ್ಕಂತ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 6,100 rpm ನಲ್ಲಿ 20.2 bhp ಮತ್ತು 4,000 rpm ನಲ್ಲಿ 27 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್‌ನ ಗರಿಷ್ಠ ವೇಗ ಗಂಟೆಗೆ 114 ಕಿಮೀ ಆಗಿದ್ದರೆ, ಮೈಲೇಜ್ ಲೀಟರ್ ಗೆ 36.2 ಕಿಮೀ ಆಗಿರುತ್ತದೆ.


ಇದನ್ನೂ ಓದಿ-Brezza vs Venue: 8 ಲಕ್ಷದೊಳಗಿನ ಸಣ್ಣ SUV ಗಳಿಗೆ ದೊಡ್ಡ ಸ್ಪರ್ಧೆ, ಯಾವುದನ್ನು ಖರೀದಿಸಬೇಕು?


ವೈಶಿಷ್ಟ್ಯಗಳು
ಈ ಮೋಟಾರ್‌ಸೈಕಲ್ ಸ್ವಲ್ಪ ಭಾಗದಲ್ಲಿಯೇ ಡಿಜಿಟಲ್ ಆಗಿರುವ ವೃತ್ತಾಕಾರದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಸಹ ಒಳಗೊಂಡಿದೆ. ಬ್ಲೂಟೂತ್ ಸಂಪರ್ಕದ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಇದು ನಿಮಗೆ ನೀಡುತ್ತದೆ. ಮೋಟಾರ್‌ಸೈಕಲ್‌ನ ಟಾಪ್ ಎಂಡ್ ರೂಪಾಂತರವು ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಸಹ ಹೊಂದಿದೆ, ಆದರೆ ಹೆಡ್‌ಲ್ಯಾಂಪ್‌ಗಳು ಹ್ಯಾಲೋಜಿನ್ ಲ್ಯಾಂಪ್ ಆಗಿಯೇ ಉಳಿದಿವೆ.


ಇದನ್ನೂ ಓದಿ-Ration Card Update : ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ!


ಕಂಪನಿಯ ಅತ್ಯಂತ ಹಗುರ ಮಾದರಿ ಇದಾಗಿದೆ
ರಾಯಲ್ ಎನ್ಫೀಲ್ಡ್ ಬಿಡುಗಡೆ ಮಾಡಿರುವ ಇದುವರೆಗಿನ ಅತ್ಯಂತ ಹಗುರವಾದ ರಾಯಲ್ ಎನ್‌ಫೀಲ್ಡ್ ಬೈಕ್ ಇದಾಗಿದೆ. ಇದು ಕ್ಲಾಸಿಕ್ 350 ಗಿಂತ 14 ಕೆಜಿ ಹಗುರವಾಗಿದೆ. ಇದರ ತೂಕ 181 ಕೆ.ಜಿ. ಹಗುರವಾಗಿರುವುದರ ಹೊರತಾಗಿ, ಹಂಟರ್ 350 ಕಂಪನಿಯ ಇತರ 350 ಬೈಕ್‌ಗಳಿಗಿಂತ ಆಯಾಮಗಳಲ್ಲಿ ಮತ್ತು ಗಾತ್ರದಲ್ಲಿ ಚಿಕ್ಕದಾಗಿದೆ. ಇದರ ವೀಲ್‌ಬೇಸ್ ಕ್ಲಾಸಿಕ್‌ಗಿಂತ 20 ಎಂಎಂ ಮತ್ತು  ಮೇಟಿಯರ್ ಗಿಂತ 30 ಎಂಎಂ ಚಿಕ್ಕದಾಗಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.