Gold Price Today : ಅಬ್ಬಬ್ಬಾ ಇಷ್ಟೊಂದು ಇಳಿಕೆಯಾಯ್ತಾ ಚಿನ್ನದ ಬೆಲೆ!

ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡುಬಂದಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 800 ರೂ. ಕಡಿಮೆಯಾಗಿದೆ. ಕೆಜಿ  ಬೆಳ್ಳಿಗೆ 57,400 ರೂ. ನಿಗದಿಯಾಗಿದೆ. ಈ ಮೂಲಕ ಬೆಳ್ಳಿ ಇಳಿಕೆಯಾಗುತ್ತಿದೆ ಎನ್ನಬಹುದು. 

Written by - Bhavishya Shetty | Last Updated : Aug 7, 2022, 09:07 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ
  • 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 100 ರೂ ಇಳಿಕೆ
  • ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 800 ರೂ. ಕಡಿಮೆ
Gold Price Today : ಅಬ್ಬಬ್ಬಾ ಇಷ್ಟೊಂದು ಇಳಿಕೆಯಾಯ್ತಾ ಚಿನ್ನದ ಬೆಲೆ! title=
Gold price

ಬೆಂಗಳೂರು : Gold Price Today: ವರಮಹಾಲಕ್ಷ್ಮೀ ಹಬ್ಬದಂದು ಬಂಗಾರದ ಬೆಲೆಯಲ್ಲಿ 380  ರೂಪಾಯಿಗಳಷ್ಟು ಏರಿಕೆಯಾಗಿತ್ತು. ಇದನ್ನು ಕಂಡ ಜನರು ಹಬ್ಬದ ದಿನವೇ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಂದು ಕೊಂಚ ನೆಮ್ಮದಿ ಸಿಕ್ಕಿದ್ದು, 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆಯಾದರೆ, 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ 110 ರೂ. ಕಡಿಮೆಯಾಗಿದೆ. ಈ ಬೆಲೆ ಇಳಿಕೆ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. 

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ ನೋಡಿ.

ಇದನ್ನೂ ಓದಿ: CWG 2022: ಕುಸ್ತಿಯಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಪೂಜಾ ಗೆಹಲೋತ್, ಭಾರತಕ್ಕೆ 31ನೇ ಪದಕ

ಇನ್ನು ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡುಬಂದಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 800 ರೂ. ಕಡಿಮೆಯಾಗಿದೆ. ಕೆಜಿ  ಬೆಳ್ಳಿಗೆ 57,400 ರೂ. ನಿಗದಿಯಾಗಿದೆ. ಈ ಮೂಲಕ ಬೆಳ್ಳಿ ಇಳಿಕೆಯಾಗುತ್ತಿದೆ ಎನ್ನಬಹುದು. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
ಚೆನ್ನೈ 48,450 52,850
ಮುಂಬಯಿ 47,550 51,870
ದೆಹಲಿ 47,700 52,036
ಕೋಲ್ಕತ್ತಾ 47,550  51,870
ಬೆಂಗಳೂರು 47,600 51,930
ಹೈದರಾಬಾದ್ 47,550 51,870
ಕೇರಳ 47,550 51,870

ಬೆಳ್ಳಿ ಬೆಲೆ ಯಾವ ರೀತಿ ಎಂಬುದನ್ನು ತಿಳಿಯೋಣ: 

ನಗರ ಇಂದಿನ ಬೆಳ್ಳಿ ದರ 
ಚೆನ್ನೈ 63,000
ಮುಂಬಯಿ 57,400
ದೆಹಲಿ 57400
ಕೋಲ್ಕತ್ತಾ 57400
ಬೆಂಗಳೂರು 63000
ಹೈದರಾಬಾದ್ 63000
ಕೇರಳ   63000

ಇದನ್ನೂ ಓದಿ: CWG 2022: ಸತತ ಮೂರನೇ ಬಾರಿಗೆ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ವಿನೆಸ್ ಫೋಗಾಟ್

ಚಿನ್ನ-ಬೆಳ್ಳಿಯ ದರವನ್ನು ಹೀಗೆ ಪರಿಶೀಲಿಸಬಹುದು: 
ಪ್ರತೀ ದಿನ ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. ಹೀಗೆ ಮಾಡಿದ ತಕ್ಷಣ ಇತ್ತೀಚಿನ ದರಗಳ ಅಪ್‌ಡೇಟ್‌ನ್ನು ಮೆಸೇಜ್‌ ರೂಪದಲ್ಲಿ ನೀವು ಪಡೆಯುತ್ತೀರಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News