Royal Enfield Sherpa 650: ರಾಯಲ್ ಎನ್‌ಫೀಲ್ಡ್ ತನ್ನ ಹಲವು ಹೊಚ್ಚ ಹೊಸ 350cc ಮತ್ತು 650cc ಮೋಟಾರ್‌ಸೈಕಲ್‌ಗಳ ಬಿಡುಗಡೆಯನ್ನು ಖಚಿತಪಡಿಸಿದೆ, ಅವುಗಳಲ್ಲಿ ಕೆಲವು ಪರೀಕ್ಷೆಯ ಹಂತಕ್ಕೂ ಕೂಡ ತಲುಪಿವೆ. ಈ ಮಾದರಿಗಳು ದೇಶೀಯ ಮತ್ತು ಜಾಗತಿಕ ಎರಡೂ ಮಾರುಕಟ್ಟೆಗಳಿಗಾಗಿ ಇರಲಿವೆ. ಮುಂಬರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಒಂದಾದ 650cc ಸ್ಕ್ರ್ಯಾಂಬ್ಲರ್ ಅನ್ನು 2022 ರ ಕೊನೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೊಸ ರಾಯಲ್ ಎನ್‌ಫೀಲ್ಡ್ 650 ಸಿಸಿ ಸ್ಕ್ರ್ಯಾಂಬ್ಲರ್‌ನ ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯನ್ನು 'ರಾಯಲ್ ಎನ್‌ಫೀಲ್ಡ್ ಶೆರ್ಪಾ 650' ಎಂದು ಹೆಸರಿಸಬಹುದೆಂದು ಇದೀಗ ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಇದು RE ಬುಲೆಟ್‌ನ ಟಾಪ್ ಸೆಗ್ಮೆಂಟ್ ಬೈಕ್ ಆಗಿರಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Free Dish TV: ಉಚಿತ ರೇಶನ್-ಮನೆ ಆಯ್ತು ಇದೀಗ ಜನರಿಗೆ ಉಚಿತ ಡಿಷ್ ಟಿವಿ ವಿತರಣೆಗೆ ಮುಂದಾದ ಮೋದಿ ಸರ್ಕಾರ


ರಾಯಲ್ ಎನ್‌ಫೀಲ್ಡ್ ಶೆರ್ಪಾ 650 ಎಂಜಿನ್ ಮತ್ತು ಶಕ್ತಿ
ಈ ಬೈಕ್‌ನಲ್ಲಿ 648cc, ಸಮಾನಾಂತರ-ಟ್ವಿನ್ ಎಂಜಿನ್ ಇರುವ ಸಾಧ್ಯತೆ ಇದೆ, ಇದು 47bhp ಪವರ್ ಮತ್ತು 52Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ಕ್ರೂಸರ್ ಮೋಟಾರ್‌ಸೈಕಲ್‌ನ ಅಗತ್ಯಗಳಿಗೆ ತಕ್ಕಂತೆ ಎಂಜಿನ್ ಅನ್ನು ಟ್ಯೂನ್ ಮಾಡಬಹುದು. ಇದು ಸ್ಲಿಪ್ಪರ್ ಕ್ಲಚ್ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುವ ಸಾಧ್ಯತೆ ಇದೆ. ಇದರ ಸ್ಪಾಟೆಡ್ ಪ್ರೊಟೈಪ್ ನ ಮುಂಭಾಗದಲ್ಲಿ ತಲೆಕೆಳಗಾದ ಫೋರ್ಕ್ ಸಸ್ಪೆನ್ಶನ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ ಎನ್ನಲಾಗುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಕಾಣಿಸಿಕೊಂಡಿದೆ. ಬೈಕು ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಸ್ಟ್ಯಾಂಡರ್ಡ್ ಫಿಟ್ಮೆಂಟ್ ರೂಪದಲ್ಲಿ ಪಡೆಯಲಿದೆ.


ಇದನ್ನೂ ಓದಿ-Interesting Facts: ಟಿಟಿಇ ಇಲ್ಲ-ಟಿಕೆಟ್ಟೂ ಇಲ್ಲ, ಈ ರೈಲಿನಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು


ರಾಯಲ್ ಎನ್‌ಫೀಲ್ಡ್ ಶೆರ್ಪಾ 650 ವೈಶಿಷ್ಟ್ಯಗಳೇನು?
ಹೊಸ RE 650 cc ಬೈಕಿನ ಮುಂಭಾಗವು ಸಣ್ಣ ಫ್ಲೈಸ್ಕ್ರೀನ್ ಅನ್ನು ಹೊಂದಿದೆ, ಇದು ವಿಂಡ್ ಪ್ರೋಟೆಕ್ಶನ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಇದು ಆಕ್ಸೆಸರಿಸ್ ಪ್ಯಾಕ್‌ನ ಒಂದು ಭಾಗವಾಗಿರಬಹುದು. ಮುಂಬರುವ ರಾಯಲ್ ಎನ್‌ಫೀಲ್ಡ್ ಶೆರ್ಪಾ 650 ಬ್ರಾಂಡ್‌ನಿಂದ 2-ಇನ್-1 ಎಕ್ಸಾಸ್ಟ್ ಸಿಸ್ಟಮ್‌ನೊಂದಿಗೆ ಬರುವ ಮೊದಲ ಬೈಕ್ ಆಗಿದೆ. ಇದು ರೆಟ್ರೊ-ಶೈಲಿಯ ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಟಿಯರ್‌ಡ್ರಾಪ್-ಆಕಾರದ ಇಂಧನ ಟ್ಯಾಂಕ್ ಮತ್ತು ಫ್ಲಾಟ್ ಸೀಟ್ ಅನ್ನು ಹೊಂದಿರುವ ಸಾಧ್ಯತೆ ಇದೆ. ಇದರಲ್ಲಿ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟ್ರಿಪ್ಪರ್ ನೇವಿಗೇಷನ್ ಸಿಸ್ಟಮ್ ಅನ್ನು ಸಹ ಹೊಂದಿರಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.