Free Dish TV Scheme: ಕೇಂದ್ರ ಸರ್ಕಾರ ಜನರಿಗೆ ವಾಸಿಸಲು ಮನೆ ಮತ್ತು ಉಚಿತ ಪಡಿತರ ಯೋಜನೆಗಳನ್ನು ನಡೆಸುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ, ಇದೀಗ ಸರ್ಕಾರ ಜನರ ಮನರಂಜನೆಗಾಗಿ ಉಚಿತ ಡಿಷ್ ಟಿವಿ ಕೂಡ ಕೊಡಲು ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ಈ ಯೋಜನೆಯ ಮೇಲೆ ಸರ್ಕಾರ 2539 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ. ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋಗಳ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ.
ಕೇಂದ್ರ ಸರ್ಕಾರದ ಈ ಯೋಜನೆಯ ಅಡಿ ಜನರಿಗೆ ಉಚಿತ ಡಿಷ್ ಟಿವಿ ಒದಗಿಸಲಾಗುವುದು ಮತ್ತು ಜನರು ನೈಯಾ ಪೈಸೆ ಖರ್ಚಿಲ್ಲದೆ ಈ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿರುವ ತಮ್ಮ ನೆಚ್ಚಿನ ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು.
ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋಗಳ ಸ್ಥಿತಿಯನ್ನು ಸುಧಾರಿಸಲು ಈ ಹೆಜ್ಜೆಯನ್ನಿಟ್ಟಿದೆ. ಇದಕ್ಕಾಗಿ ಒಟ್ಟು 2539 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎನ್ನಲಾಗಿದೆ. ಈ ಯೋಜನೆಗೆ ಬ್ರಾಡ್ಕಾಸ್ಟಿಂಗ್ ಇನ್ಫ್ರಾಸ್ಟ್ರಕ್ಚರ್ ಅಂಡ್ ನೆಟ್ವರ್ಕ್ ಡೆವಲಪ್ಮೆಂಟ್ ಎಂಬ ಹೆಸರನ್ನಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ. 2025-26ರಲ್ಲಿ ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ನಂತರ ಅದನ್ನು ಪುನಃ ವಿಸ್ತರಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Interesting Facts: ಟಿಟಿಇ ಇಲ್ಲ-ಟಿಕೆಟ್ಟೂ ಇಲ್ಲ, ಈ ರೈಲಿನಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು
ಬಿಐಎಂಡಿ ಯೋಜನೆಯ ಅಡಿ ಎಡಪಂಥೀಯ ಉಗ್ರವಾದದಿಂದ ಪ್ರಭಾವಕ್ಕೆ ಒಳಗಾಗಿರುವ ಕ್ಷೇತ್ರಗಳಲ್ಲಿ, ಗಡಿ ಹಾಗೂ ಯುದ್ಧಪೀಡಿತ ಪ್ರದೇಶಗಳಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ಕಂಟೆಂಟ್ ಅನ್ನು ತನ್ಮೂಲಕ ತಲುಪಿಸುವ ಗುರಿಯನ್ನು ಹೊಂದಲಾಗಿದೆ. ದೂರದರ್ಶನ 28 ಪ್ರಾದೇಶಿಕ ಚಾನೆಲ್ ಗಳು ಸೇರಿದಂತೆ ಒಟ್ಟು 36 ಟಿವಿ ಚಾನೆಲ್ ಗಳನ್ನು ನಿರ್ವಹಿಸುತ್ತದೆ ಹಾಗೂ ಆಲ್ ಇಂಡಿಯಾ ರೇಡಿಯೋ 500 ಕ್ಕೂ ಅಧಿಕ ಪ್ರಸಾರ ಕೇಂದ್ರಗಳನ್ನು ಹೊಂದಿದೆ. ಈ ಯೋಜನೆಗಾಗಿ ದೇಶದಲ್ಲಿ ಎಐಆರ್, ಎಫ್ಎಂ ಟ್ರಾನ್ಸ್ಮೀಟರ್ ಗಳ ಕವರೇಜ್ ಅನ್ನು ಭೌಗೋಳಿಕ ಕ್ಷೇತ್ರಕ್ಕೆ ಅನುಗುಣವಾಗಿ ಶೇ.59 ರಿಂದ ಶೇ.66 ರಷ್ಟು ಹೆಚ್ಚಿಸಲಿದೆ ಹಾಗೂ ಒಟ್ಟು ಜನಸಂಖ್ಯೆಯ ಶೇ 68 ರಿಂದ ಶೇ.80 ರಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ-Millionaire Formula: ಕೋಟ್ಯಾಧೀಶರಾಗಬೇಕೆ? ಹೊಸ ವರ್ಷದ ಮೊದಲ ತಿಂಗಳಿನಿಂದಲೇ ಈ ಪ್ಲಾನ್ ಮಾಡಿ
ಈ ಯೋಜನೆಯ ಅಡಿ ದೂರದ ಪ್ರದೇಶಗಳಲ್ಲಿ ವಾಸಿಸುವ, ಎಡಪಂಥೀಯ ಉಗ್ರವಾದದಿಂದ ಪ್ರಭಾವಕ್ಕೆ ಒಳಗಾದ ಹಾಗೂ ಗಡಿಭಾಗದಲ್ಲಿ ವಾಸಿಸುವ ಸುಮಾರು 8 ಲಕ್ಷಕ್ಕೂ ಅಧಿಕ ಮನೆಗಳಿಗೆ ಡಿಡಿ ಫ್ರೀ ಡಿಷ್ ಎಸ್ಟಿಬಿ ಅನ್ನು ಉಚಿತವಾಗಿ ವಿತರಿಸುವ ಪರಿಕಲ್ಪನೆಯನ್ನು ಹೊಂದಲಾಗಿದೆ. ಇದರಿಂದ ಅಪ್ರತ್ಯಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯನ್ನು ಸಹ ಹೊಂದಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.