ಬೆಂಗಳೂರು : ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ವರ್ಷ ಮೊದಲು ಸ್ಕ್ರಾಮ್ 411 ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ (Royal Enfield). ರಾಯಲ್ ಎನ್‌ಫೀಲ್ಡ್ ಮಾರ್ಚ್ 7 ರಂದು ಭಾರತದಲ್ಲಿ ಹೊಚ್ಚ ಹೊಸ  ಅಡ್ವೆಂಚರ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದೆ (Royal Enfieldnew bike).  ಇದು  ಕಡಿಮೇ ಬೆಲೆಯ ಮತ್ತು ಹಿಮಾಲಯನ್‌ನ  ಕಡಿಮೆ ಶಕ್ತಿಶಾಲಿ ರೂಪಾಂತರವಾಗಿದೆ. ಭಾರತೀಯ ಗ್ರಾಹಕರು ಈ ಮೋಟಾರ್‌ ಸೈಕಲ್‌ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ.  ರಾಯಲ್ ಎನ್‌ಫೀಲ್ಡ್ ಸ್ಕ್ರಂ 411 ಅನ್ನು ಕೇವಲ ಆಫ್-ರೋಡಿಂಗ್‌ಗಿಂತ ಹೆಚ್ಚಾಗಿ ನಗರ ರಸ್ತೆಗಳಲ್ಲಿ ಓಡಿಸಲು ವಿನ್ಯಾಸಗೊಳಿಸಿದೆ (Royal Enfield Crum 411).


COMMERCIAL BREAK
SCROLL TO CONTINUE READING

ಕೆಂಪು ಮತ್ತು ಕಪ್ಪು ಬಣ್ಣಗಳ ಕಾಂಬಿನೇಶನ್ ನಲ್ಲಿ ಕಂಡುಬರುತ್ತದೆ : 
ಇತ್ತೀಚೆಗೆ, ಈ ಹೊಸ  ಅಡ್ವೆಂಚರ್  ಮೋಟಾರ್‌ಸೈಕಲ್ ಅನ್ನು ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗುವುದು (Royal Enfield new bike). ಕೆಂಪು ಮತ್ತು ಕಪ್ಪು ಬಣ್ಣಗಳ ಕಾಂಬಿನೇಶನ್ ನಲ್ಲಿ ಇದನ್ನು ಲಾಂಚ್ ಮಾಡಲಾಗುವುದು. ಸ್ಕ್ರಮ್ 411ಡ್ಯುಯಲ್ ಟೋನ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಬೈಕ್‌ನ ಮುಂಭಾಗದಲ್ಲಿ 19 ಇಂಚಿನ ಚಕ್ರ ಮತ್ತು ಹಿಂಭಾಗದಲ್ಲಿ 17 ಇಂಚಿನ ಚಕ್ರವಿದೆ.  (Scrum 41  colour). ಈ ಬೈಕ್‌ನ ಬೆಲೆಯನ್ನು ಬಹಳ ಆಕರ್ಷಕವಾಗಿ ಇರಿಸಲಾಗುವುದು. ಇದು ಹೆಚ್ಚಿನ ಗ್ರಾಹಕರ ಬಜೆಟ್ ನಲ್ಲಿ ಬರಲಿದೆ ಎನ್ನಲಾಗಿದೆ.


ಇದನ್ನೂ ಓದಿ: PPF Account New Rule: ಪಿಪಿಎಫ್ ಖಾತೆ ನಿಯಮಗಳನ್ನು ಬದಲಾಯಿಸಿದ ಸರ್ಕಾರ


ಹೊಸ ಸ್ಕ್ರಮ್ 411 ಹಿಮಾಲಯನ್ ಗಿಂತ ಅಗ್ಗ :
ಹೊಸ ಸ್ಕ್ರಮ್ 411 ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ಗಿಂತ (Royal Enfield Himalayan) ಅಗ್ಗವಾಗಿರಲಿದೆ.  ಹಿಮಾಲಯನ್ ಮುಂಭಾಗವು ಉದ್ದವಾದ ವಿಂಡ್‌ಸ್ಕ್ರೀನ್, ವಿಭಜಿತ ಆಸನ, ಲಗೇಜ್ ರಾಕ್ ದೊಡ್ಡ ಮುಂಭಾಗದ ಚಕ್ರ ಮತ್ತು ಅಡ್ವೆಂಚರ್ ಬೈಕ್‌ನ ಇತರ ಭಾಗಗಳನ್ನು ಪಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ಕ್ರಮ್ 411 ಗೆ ಚಿಕ್ಕ ಚಕ್ರಗಳು, ಸಿಂಗಲ್ ಸೀಟ್, ಕಡಿಮೆ ಸಸ್ಪೆನ್ಶನ್ ಪ್ರಯಾಣ ಮತ್ತು ಹಿಂಭಾಗದಲ್ಲಿ ಗ್ರ್ಯಾಬ್ ರೈಲ್ ನೀಡಲಾಗಿದೆ. ಹೊಸ ಮೋಟಾರ್‌ಸೈಕಲ್ LS410, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, 4-ಸ್ಟ್ರೋಕ್, SOHC ಎಂಜಿನ್ ಅನ್ನು ಪಡೆಯುವ ನಿರೀಕ್ಷೆಯಿದೆ.


ಇದನ್ನೂ ಓದಿ: PAN Card: PAN ಕಾರ್ಡ್ ಮಾಡಿಸಿಕೊಳ್ಳಲು ಈ ಸುಲಭ ಹಂತಗಳನ್ನು ಅನುಸರಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.