ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಸಾಲಪಡೆದಿರುವ ಸಾಲಗಾರರಿಗೆ, ಸುಸ್ತಿ ಸಾಲ ತೀರಿಸುವ ಮೂಲಕ ಋಣಮುಕ್ತರಾಗಲು ಬ್ಯಾಂಕ್ ನಿಂದ ಇದೀಗ ಸುವರ್ಣಾವಕಾಶ ಕಲ್ಪಿಸಿದೆ. ಇದಕ್ಕಾಗಿ 2020-21ನೇ ಸಾಲಿನ ಋಣ ಸಮಾಧಾನ ಯೋಜನೆ ರೂಪಿಸಿರುವ ಬ್ಯಾಂಕ್, ಏಕಕಾಲದಲ್ಲಿ ಸಾಲ ಇತ್ಯರ್ಥ ಪಡಿಸಲು ಅವಕಾಶ ನೀಡುವ ಮೂಲಕ ಗುಡ್ ನ್ಯೂಸ್ ನೀಡಿದೆ.


COMMERCIAL BREAK
SCROLL TO CONTINUE READING

ಈ ಕುರಿತಂತೆ ಪ್ರಕಟಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್(State Bank of India) ಹೊರಡಿಸಿದ್ದು, ಸುಸ್ತು ಸಾಲಗಾರರು ಋಣಮುಕ್ತರಾಗಲು ಸುವರ್ಣಾವಕಾಶ ನೀಡಲಾಗಿದೆ. ಋಣ ಸಮಾಧಾನ ಯೋಜನೆ 2020-21ರಂತೆ ರೂ.20 ಲಕ್ಷಗಳವರೆಗಿನ ಸುಸ್ತಿದಾರ ಸಾಲಗಾರರಿಗೆ ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ(ಓಟಿಎಸ್) ಜಾರಿಗೊಳಿಸಲಾಗಿದೆ.


JOB: AAI ನಲ್ಲಿ 368 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿ.15 ಕೊನೆ ದಿನ


ಹೀಗಾಗಿ ಕಟಬಾಕಿ ಇರುವ ಸಾಲದಲ್ಲಿ ಶೇ.15 ರಿಂದ 90ರವರೆಗೆ ರಿಯಾಯಿತಿ ಪಡೆಯಲು ಅವಕಾಶ ನೀಡಲಾಗಿದೆ. ಈ ಯೋಜನೆಯಲ್ಲಿ ಬಾಕಿ ಇತ್ಯರ್ಥ ಮಾಡಿದವರಿಗೆ ಮರುಸಾಲ ಅವಕಾಶ ಅದೇ ದಿನ ಪರಿಗಣಸಲಾಗುವುದು. ಸಾಲ ಸುಸ್ತಿಯಾದ(ಎನ್ ಪಿ ಎ) ದಿನದಿಂದ ಬಡ್ಡಿ ಮನ್ನಾ ಮಾಡಲಾಗುತ್ತದೆ. ಈ ಯೋಜನೆಯು ವ್ಯವಸಾಯ ಸಾಲ, ಸಣ್ಣ ಮತ್ತು ಮಧ್ಯಮ ಉದ್ಯೋಗ ಸಾಲ, ಶೈಕ್ಷಣಿಕ ಸಾಲ ಮತ್ತು ರೂ.5 ಲಕ್ಷದವರೆಗಿನ ಗೃಹ ಸಾಲಗಳಿಗೂ ಅನ್ವಯಿಸಲಿದೆ. ಇಂತಹ ಸುವರ್ಣಾವಕಾಶ ಯೋಜನೆಯು 31-01-2021ರಂದು ಕೊನೆಗೊಳ್ಳಲಿದ್ದು, ತ್ವರೆಮಾಡಿ, ನಿಮ್ಮ ಶಾಖಾಧಿಕಾರಿಗಳನ್ನು ಭೇಟಿ ಮಾಡಿ, ಋಣಮುಕ್ತರಾಗುವಂತೆ ತಿಳಿಸಿದೆ.


LPG Booking Through WhatsApp: ಇನ್ಮುಂದೆ ಈ ನಂಬರ್ ಗಳ ಮೂಲಕವೂ LPG ಸಿಲಿಂಡರ್ ಬುಕ್ ಮಾಡಬಹುದು