LPG Booking Through WhatsApp: ಇನ್ಮುಂದೆ ಈ ನಂಬರ್ ಗಳ ಮೂಲಕವೂ LPG ಸಿಲಿಂಡರ್ ಬುಕ್ ಮಾಡಬಹುದು

ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಳ್ಳೆಯ ಸುದ್ದಿ, ಈಗ ನೀವು ಮನೆಯಿಂದ ಗ್ಯಾಸ್ ಸಿಲಿಂಡರ್ (LPG GAS CYLINDER) ಅನ್ನು ಕಾಯ್ದಿರಿಸಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ ಹಾಗೂ ತೊಂದರೆಪಡುವ ಅವಶ್ಯಕತೆಯೂ ಕೂಡ ಇಲ್ಲ.

Last Updated : Dec 1, 2020, 05:40 PM IST
  • ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿಯನ್ನು ರೀಫಿಲ್ ಮಾಡಲು ಗ್ರಾಹಕರಿಗೆ ವಾಟ್ಸಾಪ್ ಮತ್ತು ಎಸ್‌ಎಂಎಸ್ ಸೌಲಭ್ಯವನ್ನು ಒದಗಿಸುತ್ತಿವೆ.
  • ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಳ್ಳೆಯ ಸುದ್ದಿ, ಈಗ ನೀವು ಮನೆಯಿಂದ ಗ್ಯಾಸ್ ಸಿಲಿಂಡರ್ (LPG GAS CYLINDER) ಅನ್ನು ಕಾಯ್ದಿರಿಸಬಹುದು.
  • ನೀವು ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ನೋಂದಣಿ ಮಾಡಿದ ಮೊಬೈಲ್ ಸಂಖ್ಯೆಯಿಂದ ಮಾತ್ರ ವಾಟ್ಸ್ ಆಪ್ ಸಂದೇಶ ರವಾನಿಸಬೇಕು.
LPG Booking Through WhatsApp: ಇನ್ಮುಂದೆ ಈ ನಂಬರ್ ಗಳ ಮೂಲಕವೂ LPG ಸಿಲಿಂಡರ್ ಬುಕ್ ಮಾಡಬಹುದು title=

ನವದೆಹಲಿ:  ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಳ್ಳೆಯ ಸುದ್ದಿ, ಈಗ ನೀವು ಮನೆಯಿಂದ ಗ್ಯಾಸ್ ಸಿಲಿಂಡರ್ (LPG GAS CYLINDER) ಅನ್ನು ಕಾಯ್ದಿರಿಸಬಹುದು. ಇದಕ್ಕಾಗಿ ನೀವು ಇಲ್ಲಿಯೂ ಹೋಗಬೇಕಾಗಿಲ್ಲ ಹಾಗೂ ತೊಂದರೆಪಡುವ ಅವಶ್ಯಕತೆಯೂ ಕೂಡ ಇಲ್ಲ. ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ (LPG) ಯನ್ನು ರೀಫಿಲ್ ಮಾಡಲು ಗ್ರಾಹಕರಿಗೆ ವಾಟ್ಸಾಪ್ ಮತ್ತು ಎಸ್‌ಎಂಎಸ್ ಸೌಲಭ್ಯವನ್ನು ಒದಗಿಸುತ್ತಿವೆ. ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಲ್ಲಿ ಒಂದಾದ ಭಾರತ್ ಗ್ಯಾಸ್ ,ಇಂಡೇನ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಸಿಲಿಂಡರ್ ಹೊಂದಿರುವ ಗ್ರಾಹಕರು ಮನೆಯಲ್ಲಿ ಕುಳಿತು ಸಿಲಿಂಡರ್‌ ಪಡೆಯಲು ಈ ಸೌಲಭ್ಯದ ಲಾಭವನ್ನು ಸುಲಭವಾಗಿ ಪಡೆಯಬಹುದು.

ಇದನ್ನು ಓದಿ- ನೀವು ನಿಮ್ಮ LPG ಸಬ್ಸಿಡಿ ಸ್ವೀಕರಿಸಿದ್ದೀರಾ? ಅದನ್ನು ಈ ರೀತಿ ಪರಿಶೀಲಿಸಿ

LPG ಗ್ಯಾಸ್ ಬುಕ್ಕಿಂಗ್ ಮಾಡಲು ಒಟ್ಟು 5 ವಿಧಾನಗಳಿವೆ
1.  ಗ್ಯಾಸ್ ಏಜೆನ್ಸಿ ಅಥವಾ ವಿತರಕರೊಂದಿಗೆ ಮಾತನಾಡುವ ಮೂಲಕ.
2.  ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ
3 . ವೆಬ್‌ಸೈಟ್ https://iocl.com/Products/Indanegas.aspx ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಬುಕಿಂಗ್
4. ಕಂಪನಿಯ ವಾಟ್ಸಾಪ್ ಸಂಖ್ಯೆಗೆ ಪಠ್ಯವನ್ನು ಕಳುಹಿಸುವ ಮೂಲಕ.

ಇದನ್ನು ಓದಿ- LPG Price: ಈ ಸಿಲಿಂಡರ್‌ಗಳ ಬೆಲೆ 55 ರೂಪಾಯಿಗಳವರೆಗೆ ಹೆಚ್ಚಳ

Bharat Gas ಗ್ರಾಹಕರು ಈ ರೀತಿ ಸಿಲಿಂಡರ್ ಬುಕ್ ಮಾಡಿ
- ಭಾರತ್ ಗ್ಯಾಸ್ ಗ್ರಾಹಕರು ಸಿಲಿಂಡರ್ ಕಾಯ್ದಿರಿಸಲು, ನೀವು ನಿಮ್ಮ ಮೊಬೈಲ್‌ನಲ್ಲಿ 1800224344 (Bharat Gas Whatsapp Booking numbe) ಸಂಖ್ಯೆಯನ್ನು ಸೇವ್ ಮಾಡಬೇಕು.
- ಸಂಖ್ಯೆಯನ್ನು ಸೇವ್ ಮಾಡಿದ ನಂತರ ನೀವು ವಾಟ್ಸಾಪ್ಗೆ ಹೋಗಬೇಕು. ಇದರ ನಂತರ, ಸೇವ್ ಮಾಡಿದ ಭಾರತ್ ಗ್ಯಾಸ್ ಅಂದರೆ ಭಾರತ್ ಪೆಟ್ರೋಲಿಯಂ ಸ್ಮಾರ್ಟ್ ಲೈನ್ ಸಂಖ್ಯೆಯನ್ನು ತೆರೆಯಿರಿ.
- ಇದರ ನಂತರ, ವಾಟ್ಸಾಪ್ನಲ್ಲಿ ಹಾಯ್, ಹಲೋ ಕಳುಹಿಸಿ. ತಕ್ಷಣ ಪ್ರತಿಕ್ರಿಯೆ ಬರುತ್ತದೆ, ಅದನ್ನು ವಾಟ್ಸ್‌ನಲ್ಲಿ ಏಜೆನ್ಸಿ ಸ್ವಾಗತಿಸುತ್ತದೆ.
- ನೀವು ಸಿಲಿಂಡರ್ ಅನ್ನು ಬುಕ್ ಮಾಡಲು ಬಯಸಿದಾಗಲೆಲ್ಲಾ ಅದನ್ನು ವಾಟ್ಸ್ ಅಪ್ಲಿಕೇಶನ್‌ನಲ್ಲಿ  Book ಸಂದೇಶ ಕಳುಹಿಸಿರಿ.
- ನೀವು Book ಸಂದೇಶ ಕಳುಹಿಸಿದ ತಕ್ಷಣ, ನಿಮಗೆ ಆರ್ಡರ್ ವಿವರಗಳು ಸಿಗುತ್ತವೆ ಮತ್ತು ಯಾವ ದಿನ ಸಿಲಿಂಡರ್ ಅನ್ನು ತಲುಪಿಸಲಾಗುತ್ತದೆ ಎಂಬುದನ್ನೂ ಕೂಡ ನಿಮಗೆ ಮಾಹಿತಿ ನೀಡಲಾಗುವುದು.

ಇದನ್ನು ಓದಿ- Good News: ಈಗ ನೀವು WhatsApp, SMS ಮೂಲಕ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬುಕ್ ಮಾಡಬಹುದು

Indane Gas ಗ್ರಾಹಕರು ಈ ರೀತಿ ಸಿಲಿಂಡರ್ ಬುಕ್ ಮಾಡಿ
-Indane Gas ಗ್ರಾಹಕರು 7588888824 (Indane Gas Whatsapp Booking number) ಮೇಲೆ ತಮ್ಮ ಸಿಲಿಂಡರ್ ಬುಕ್ ಮಾಡಬಹುದು.
- ಗ್ರಾಹಕರು 7588888824 ಈ ನಂಬರ್ ಅನ್ನು ತಮ್ಮ ಮೊಬೈಲ್ ನಲ್ಲೆ ಸೇವ್ ಮಾಡಬೇಕು.
- ಬಳಿಕ ಗ್ರಾಹಕರು ತಮ್ಮ WhatsApp ಖಾತೆ ತೆರೆದು ನಿಮ್ಮ ಅಧಿಕೃತ ಮೊಬೈಲ್ ನಂಬರ್ ನಿಂದ Book ಅಥವಾ REFILL# ಬರೆದು ಸಂದೇಶ ರವಾನಿಸಬೇಕು.
-ಬಳಿಕ ನಿಮಗೆ ನಿಮ್ಮ ಆರ್ಡರ್ ಪೂರ್ಣಗೊಂಡ ಸಂದೇಶ ಬರಲಿದೆ. ಇದರಲ್ಲಿ ಸಿಲೆಂಡರ್ ಡಿಲೆವರಿ ದಿನಾಂಕ ಇತ್ಯಾದಿ ಮಾಹಿತಿ ಇರಲಿದೆ.

ಇದನ್ನು ಓದಿ- ಡಿಸೆಂಬರ್ 1 ರಿಂದ ಬದಲಾಗಲಿವೆ ಹಲವು ನಿಯಮಗಳು, ಇವುಗಳನ್ನು ನೆನಪಿನಲ್ಲಿಡಿ

HP Gas ಗ್ರಾಹಕರು ಈ ರೀತಿ ಸಿಲಿಂಡರ್ ಬುಕ್ ಮಾಡಬೇಕು
- ಎಚ್.ಪಿ ಗ್ಯಾಸ್ ಗ್ರಾಹಕರು 9222201122 (HP Gas Cylinder Whatsapp Booking number) ನಂಬರ್ ಅನ್ನು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬೇಕು.
- ನಂಬರ್ ಸೇವ್ ಮಾಡಿದ ಬಳಿಕ ವಾಟ್ಸ್ ಆಪ್ ಗೆ ಭೇಟಿ ನೀಡಿ ಈ ನಂಬರ್ ತೆರೆಯಿರಿ.
-ಇದರಲ್ಲಿ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ Book ಸಂದೇಶ ರವಾನಿಸಿ.
- ಬಳಿಕ ನಿಮಗೆ ನಿಮ್ಮ ಆರ್ಡರ್ ಮಾಹಿತಿ ಸಿಗಲಿದೆ.
- ಇದರಲ್ಲಿ ಸಿಲಿಂಡರ್ ಡಿಲೆವರಿ ಡೇಟ್ ಸೇರಿದಂತೆ ಇತರೆ ಮಾಹಿತಿಗಳು ಕೂಡ ಇರಲಿವೆ.

ಇದನ್ನು ಓದಿ- 'LPG ಸಿಲಿಂಡರ್'‌ ಬಳಕೆದಾರರಿಗೊಂದು ಮುಖ್ಯ ಮಾಹಿತಿ!

ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಲು ಮರೆಯದಿರಿ
ನೀವು ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ನೋಂದಣಿ ಮಾಡಿದ ಮೊಬೈಲ್ ಸಂಖ್ಯೆಯಿಂದ ಮಾತ್ರ ವಾಟ್ಸ್ ಆಪ್ ಸಂದೇಶ ರವಾನಿಸಬೇಕು. ಇಲ್ಲದಿದ್ದರೆ ಸಿಲಿಂಡರ್ ಬುಕ್ ಆಗುವುದಿಲ್ಲ. ಹೀಗಾಗಿ ಈ ನಂಬರ್ ಗಳಿಗೆ ಸಂದೇಶ ರವಾನಿಸುವ ಮೊದಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ನೋಂದಣಿ ಮಾಡುವುದನ್ನು ಮರೆಯದಿರಿ.

Trending News