Rules Changing From 1 June 2021: ಜೂನ್ 1 ರಿಂದಾಗುವ ಈ ಬದಲಾವಣೆಗಳು ನಿಮಗೆ ಗೊತ್ತಿರಲಿ
Rules Changing From 1 June 2021: ಜೂನ್ 2021 ರಿಂದ ಜನಸಾಮಾನ್ಯರ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳು ಬದಲಾಗುತ್ತಿವೆ. . ಇದರಲ್ಲಿ, ಸಣ್ಣ ಉಳಿತಾಯ ಯೋಜನೆ, ಎಲ್‌ಪಿಜಿ, ಸುಕನ್ಯಾ ಸಮೃದ್ಧಿ ಮತ್ತು ಆದಾಯ ತೆರಿಗೆ ಇ-ಫೈಲಿಂಗ್‌ಗೆ ಸಂಬಂಧಿಸಿದ ಹಲವು ನಿಯಮಗಳು ಶಾಮೀಲಾಗಿವೆ. ಇವು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.
Rules Changing From 1 June 2021: 1 ಜೂನ್ 2021 ರಿಂದ ಜನಸಾಮಾನ್ಯರ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳು ಬದಲಾಗುತ್ತಿವೆ. . ಇದರಲ್ಲಿ, ಸಣ್ಣ ಉಳಿತಾಯ ಯೋಜನೆ , ಎಲ್‌ಪಿಜಿ, ಸುಕನ್ಯಾ ಸಮೃದ್ಧಿ ಮತ್ತು ಆದಾಯ ತೆರಿಗೆ (Income Tax) ಇ-ಫೈಲಿಂಗ್‌ಗೆ ಸಂಬಂಧಿಸಿದ ಹಲವು ನಿಯಮಗಳು ಶಾಮೀಲಾಗಿವೆ. ಇವು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಜೂನ್ 1 ರಿಂದ ಬ್ಯಾಂಕ್ ಆಫ್ ಬರೋಡಾದಲ್ಲಿ ಚೆಕ್‌ನಿಂದ ಹಣ ಪಾವತಿಸುವ ವಿಧಾನ ಬದಲಾಗಲಿದೆ. ಇದಲ್ಲದೆ, ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ (LPG Gas Cylinder) ಸಿಲಿಂಡರ್ ದರವನ್ನು ಪರಿಷ್ಕರಿಸುತ್ತವೆ.
ಯಾವ ಹೊಸ ನಿಯಮಗಳು (New Rules) ಬರುತ್ತಿವೆ?
1. Small Savings Scheme ಬಡ್ಡಿ ದರ ಬದಲಾಗಲಿದೆ - ಸಣ್ಣ ಉಳಿತಾಯ ಯೋಜನೆಗಳಾದ PPF, NSC, KVP ಮತ್ತು ಸುಕನ್ಯಾ ಸಮೃದ್ಧಿ ಯೋಜನಾ (Sukanya Samriddhi Yojana) ಬಡ್ಡಿದರಗಳಲ್ಲಿ ಬದಲಾವಣೆಗಲಾಗಳಿವೆ. ಸಣ್ಣ ಉಳಿತಾಯ ಯೋಜನೆಗಳ (Small Saving Schemes) ಹೊಸ ಬಡ್ಡಿದರಗಳನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಹಲವು ಬಾರಿ ಹಳೆಯ ಬಡ್ಡಿದರಗಳನ್ನೇ ಮುಂದುವರೆಸಲಾಗುತ್ತದೆ. ಮಾರ್ಚ್ 31 ರಂದು 2020-21ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಕೊನೆಯಲ್ಲಿ, ಹೊಸ ಬಡ್ಡಿದರಗಳನ್ನು ಪರಿಷ್ಕರಿಸಿ ಬಳಿಕ ಅದನ್ನು 24 ಗಂಟೆಗಳ ಒಳಗೆ ಹಿಂಪಡೆದು ಹಳೆದರಗಳನ್ನೇ ಮುಂದುವರೆಸಲಾಗಿತ್ತು. ಆದರೆ, ಇದೀಗ ಮತ್ತೆ ಜೂನ್ 30 ರಂದು ಹೊಸ ಬಡ್ಡಿದರಗಳನ್ನು ಪರಿಷ್ಕರಿಸಲಾಗುತ್ತದೆ.
2. Bank Of Badoda ಅಲ್ಲಿ Positive Pay System ಜಾರಿಗೆ ಬರುತ್ತಿದೆ - ಬ್ಯಾಂಕ್ ಆಫ್ ಬರೋಡಾ 1 ಜೂನ್ 2021 ರಿಂದ ಚೆಕ್ ಮೂಲಕ ಹಣ ಪಾವತಿ ವಿಧಾನವನ್ನು ಬದಲಾಯಿಸುತ್ತಿದೆ. ವಂಚನೆಯಿಂದ ತನ್ನ ಗ್ರಾಹಕರನ್ನು ಪಾರು ಮಾಡಲು ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಪಾಸಿಟಿವ್ ಪೆ ಕನ್ಫರ್ಮೆಶನ್ (Positive Pay Confirmation) ಕಡ್ಡಾಯಗೊಳಿಸಲಿದೆ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಂಕ್ ಚೆಕ್ ನೀಡಿದಾಗ ಮಾತ್ರ ಗ್ರಾಹಕರು ಸಕಾರಾತ್ಮಕ ವೇತನ ವ್ಯವಸ್ಥೆಯಡಿ ಚೆಕ್ ವಿವರಗಳನ್ನು ದೃಡಪಡಿಸಬೇಕಾಗಲಿದೆ ಎಂದು BoB ಅಧಿಕಾರಿಗಳು ಹೇಳಿದ್ದಾರೆ.
3. LPG Gas Cylinder ಬೆಲೆ ಪರಿಷ್ಕರಣೆ - ಬರುವ ಜೂನ್ 1 ರಿಂದ ನೂತನ LPG ಗ್ಯಾಸ್ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ತೈಲ ಕಂಪನಿಗಳು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ (Increase In LPG Price). ಹಲವು ಬಾರಿ ತಿಂಗಳಲ್ಲಿ ಎರಡು ಬಾರಿ ಕೂಡ ಈ ಬೆಲೆಯನ್ನು ಪರಿಷ್ಕರಿಸಲಾಗಿದೆ. ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 809 ರೂ. ಆಗಿದೆ . 14.2 ಕೆಜಿ ಸಿಲಿಂಡರ್‌ಗಳ ಜೊತೆಗೆ, 19 ಕೆಜಿ ಸಿಲಿಂಡರ್‌ಗಳ ಬೆಲೆ ಕೂಡ ಬದಲಾಗುವ ಸಾಧ್ಯತೆ ಇದೆ. ಆದರೆ, ಹೊಸ ಬೆಲೆಗಳನ್ನು ಜೂನ್ 1 ರಂದು ಮಾತ್ರ ಬಿಡುಗಡೆಯಾಗಲಿದೆ. ಹಲವು ಬಾರಿ ಪ್ರಸ್ತುತ ಇರುವ ಬೆಲೆಯಲ್ಲಿ ಯಾವುದೇ ಬದಲಾವಣೆ ಕೂಡ ಆಗುವುದಿಲ್ಲ.
ಇದನ್ನೂ ಓದಿ- Petrol-Diesel Price : ವಾಹನ ಸವಾರರಿಗೆ ಬಿಗ್ ರಿಲೀಫ್ : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಮುಕ್ತಿ!
4. ಜೂನ್ 30 ರಿಂದ ಬದಲಾಗಲಿದೆ IFSC ಕೋಡ್ - ಕೆನರಾ ಬ್ಯಾಂಕ್ ವೆಬ್‌ಸೈಟ್‌ನಲ್ಲಿ (Canara Bank New IFSC Code Change)ಪ್ರಕಟವಾಗಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ಜುಲೈ 1 ರಿಂದ ತನ್ನ ಐಎಫ್‌ಎಸ್‌ಸಿ ಕೋಡ್ ಬದಲಾಯಿಸುತ್ತಿದೆ. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ಜೂನ್ 30 ರೊಳಗೆ ನವೀಕರಿಸಲು ಸೂಚಿಸಲಾಗಿದೆ. ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ತಿಳಿದುಕೊಳ್ಳುವ ಮೊದಲು ಕೆನರಾ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಈ ನಿಟ್ಟಿನಲ್ಲಿ ನೀಡಲಾಗಿರುವ ಮಾಹಿತಿಯನ್ನು ಪರಿಶೀಲಿಸಿ. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ- TV, Fridge, AC ಬೆಲೆಗಳು ಮತ್ತೆ ಏರಿಕೆ! ಯಾವಾಗ, ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಿರಿ
5. ಜೂನ್ 1 ರಿಂದ ಆರು ದಿನಗಳ ಕಾಲ ಇ-ಟ್ಯಾಕ್ಸ್ ಫೈಲಿಂಗ್ (Income Tax e-Filing) ಪೋರ್ಟಲ್ ಬಂದ್ ಇರಲಿದೆ - ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಜೂನ್ 1 ರಿಂದ 6 ರವರೆಗೆ ಕಾರ್ಯನಿರ್ವಹಿಸುವುದಿಲ್ಲ. ಜೂನ್ 7 ರಂದು ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಅನ್ನು ಆರಂಭಿಸುತ್ತಿದೆ. ಆದಾಯ ತೆರಿಗೆ ನಿರ್ದೇಶನಾಲಯದ ಪ್ರಕಾರ, ಐಟಿಆರ್ ಅನ್ನು ಭರ್ತಿ ಮಾಡುವ ಅಧಿಕೃತ ವೆಬ್‌ಸೈಟ್ 7ಜೂನ್ 2021 ರಿಂದ ಬದಲಾಗುತ್ತದೆ. ಜೂನ್ 7 ರಿಂದ, ಇದು http://INCOMETAX.GOV.IN ಆಗುತ್ತದೆ. ಪ್ರಸ್ತುತ ಅದು http://incometaxindiaefiling.gov.in ಆಗಿದೆ.
ಇದನ್ನೂ ಓದಿ-Bank Alert! ಮೇ 31ರ ಮೊದಲು ನಿಮ್ಮ ಬ್ಯಾಂಕ್ ಖಾತೆಯಿಂದ ರೂ.12 ಕಡಿತವಾಗಿ, 2 ಲಕ್ಷ ರೂ.ಗಳ ಲಾಭ ನಿಮ್ಮದಾಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.