Post Office Monthly Income scheme: ಸರ್ಕಾರದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಆದಾಯದ ಖಾತರಿಯನ್ನು ಪಡೆಯಬಹುದು. ಸರ್ಕಾರಿ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ಇಂತಹ ಹಲವು ಯೋಜನೆಗಳಿವೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ವಿಶೇಷವೆಂದರೆ ಈ ಯೋಜನೆಗಳಲ್ಲಿ ಹೂಡಿಕೆಯು ಖಾತರಿಯ ಆದಾಯವನ್ನು ನೀಡುತ್ತದೆ. ಅಂಚೆ ಕಚೇರಿಯಲ್ಲಿ ಇಂತಹ ಹಲವು ಉಳಿತಾಯ ಯೋಜನೆಗಳಿವೆ. ಇವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಮಾಸಿಕ ಆದಾಯ ಯೋಜನೆ (MIS).


COMMERCIAL BREAK
SCROLL TO CONTINUE READING

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡುವ ಮೂಲಕ  ಪ್ರತಿ ತಿಂಗಳು ಹಣವನ್ನು ಗಳಿಸಬಹುದು. ಈ ಯೋಜನೆಯಡಿ ತೆರೆಯಲಾದ ಖಾತೆಯಲ್ಲಿ ನೀವು ಗರಿಷ್ಠ 9 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು.  


ಇದನ್ನೂ ಓದಿ: ರ‍್ಯಾಪಿಡೊ (Rapido) ಬೈಕ್ ಟ್ಯಾಕ್ಸಿ ಸೇವೆಗೆ ಧಕ್ಕೆ ಇಲ್ಲ; ಕಂಪೆನಿ ಸ್ಪಷ್ಟನೆ 


ಪೋಸ್ಟ್ ಆಫೀಸ್ MIS ಯೋಜನೆಯಲ್ಲಿ ಹೂಡಿಕೆದಾರರಿಗೆ ಪ್ರತಿ ತಿಂಗಳು ಬಡ್ಡಿಯನ್ನು ನೀಡಲಾಗುತ್ತದೆ. ಹೂಡಿಕೆದಾರರು ಈ ಬಡ್ಡಿಯನ್ನು ಪ್ರತಿ ತಿಂಗಳು ಹೆಚ್ಚುವರಿ ಆದಾಯವಾಗಿ ಬಳಸಬಹುದು. ವಿಶೇಷವೆಂದರೆ ಅಂಚೆ ಇಲಾಖೆಯ ಈ ಯೋಜನೆಯಲ್ಲಿ ಶೇ.7.4ರಷ್ಟು ಬಡ್ಡಿ ನೀಡಲಾಗುತ್ತದೆ.


ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಅವಧಿಯು 5 ವರ್ಷಗಳ ವರೆಗೆ ಇರುತ್ತದೆ. ನೀವು ಒಂದೇ ಬಾರಿಗೆ 5 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬಹುದು. 5 ವರ್ಷಗಳವರೆಗೆ ನಿರಂತರವಾಗಿ ಪ್ರತಿ ತಿಂಗಳು ನಿಮ್ಮ ಖಾತೆಯಲ್ಲಿ ಬಡ್ಡಿ ಜಮಾ ಆಗುತ್ತಲೇ ಇರುತ್ತದೆ. ನೀವು ಬಯಸಿದರೆ ಬಡ್ಡಿಯನ್ನು ಡ್ರಾ ಮಾಡಬಹುದು. ಐದು ವರ್ಷಗಳ ಅವಧಿಯ ನಂತರ ನಿಮ್ಮ ಠೇವಣಿ ಹಣವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ.


ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ವಿಶೇಷತೆ: 


- ಇದು ಸರ್ಕಾರದ ಯೋಜನೆಯಾಗಿದೆ, ಆದ್ದರಿಂದ ಹೂಡಿಕೆದಾರರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
- ಈ ಯೋಜನೆಯ ಅವಧಿಯು 5 ವರ್ಷಗಳು, ಆದರೆ ನೀವು ಮೆಚ್ಯೂರಿಟಿಗೂ ಮುಂಚೆಯೇ ಹಣವನ್ನು ಹಿಂಪಡೆಯಬಹುದು.
- ಐದು ವರ್ಷಗಳ ನಂತರ, ನೀವು ಈ ಹಣವನ್ನು ಮತ್ತೆ ಐದು ವರ್ಷಗಳವರೆಗೆ ಹೂಡಿಕೆ ಮಾಡಬಹುದು.
– ಒಬ್ಬ ವ್ಯಕ್ತಿ ಗರಿಷ್ಠ 9 ಲಕ್ಷ ರೂ. ಹೂಡಿಕೆ ಮಾಡಬಹುದು.
- ಜಂಟಿ ಖಾತೆಯಲ್ಲಿ ರೂ 15 ಲಕ್ಷದವರೆಗೆ ಠೇವಣಿ ಮಾಡಬಹುದು.
- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 7.4 ರ ದರದಲ್ಲಿ ಬಡ್ಡಿ ಲಭ್ಯವಿದೆ.


ಹೂಡಿಕೆ ಮಾಡುವುದು ಹೇಗೆ?


ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯಲು ಗುರುತಿನ ಚೀಟಿ, ಮನೆಯ ವಿಳಾಸದ ಪುರಾವೆ ಮತ್ತು ಎರಡು ಭಾವಚಿತ್ರಗಳು ಬೇಕಾಗುತ್ತವೆ. ಹಣವನ್ನು ನಗದು ರೂಪದಲ್ಲಿ ಅಥವಾ ಚೆಕ್ ಮೂಲಕ ಠೇವಣಿ ಮಾಡಬಹುದು. 


ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಇಳಿಕೆ ! ಕೋಟ್ಯಾಂತರ ಗ್ರಾಹಕರಿಗೆ ಸಿಹಿ ಸುದ್ದಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.