Karnataka CM, Ministers salary: ಕರ್ನಾಟಕದಲ್ಲಿ ನಾಳೆಯಿಂದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಜೋಡೆತ್ತು ಸರ್ಕಾರ ರಚನೆಗೆ ಈಗಾಗಲೇ ಸಕಲ ಸಿದ್ಧತೆ ಭರದಿಂದ ಸಾಗಿದೆ. ನಾಳೆ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್​ ಪಡಗ್ರಹಣ ಮಾಡಲಿದ್ದಾರೆ. ಅವರೊಂದಿಗೆ  30 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿದ್ದ ಕೋವಿಡ್​ ಆತಂಕ ಕೊಂಚ ಮಟ್ಟಿಗೆ ತಣ್ಣಗಾದ ಬಳಿಕ ಕಳೆದ ವರ್ಷದ ಫೆಬ್ರವರಿಯಲ್ಲಿ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರು ಮತ್ತು ವಿಧಾನಪರಿಷತ್​ ಸದಸ್ಯರು ಒಕ್ಕೊರಲಿನಿಂದ  ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ, 2022 ಮತ್ತು ಕರ್ನಾಟಕ ಶಾಸಕಾಂಗ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು (ತಿದ್ದುಪಡಿ) ಮಸೂದೆ, 2022ಕ್ಕೆ ಒಪ್ಪಿಗೆ ಸೂಚಿಸಿದ್ದರು. 


ಇದನ್ನೂ ಓದಿ- ಸಿಎಂ ಪದಗ್ರಹಣ: ಕಂಠೀರವ ಸ್ಟೇಡಿಯಂಗೆ ಕನೆಕ್ಟ್ ಆಗೋ ರಸ್ತೆ ಮಾರ್ಗ ಬದಲಾವಣೆ


ವಾಸ್ತವವಾಗಿ, 2015ರಿಂದ ಮುಖ್ಯಮಂತ್ರಿ, ಸಚಿವರು, ಸಭಾಪತಿ, ಉಪ ಸಭಾಪತಿ, ಸ್ಪೀಕರ್, ಉಪಸಭಾಪತಿಗಳ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿರಲಿಲ್ಲ.  2022ರಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಪೀಕರ್​ ಮತ್ತು ಉಪ ಸ್ಪೀಕರ್​ ಮತ್ತು ಶಾಸಕರ ವೇತನ ಶೇಕಡಾ 50ರಿಂದ 60ರಷ್ಟು ಹೆಚ್ಚಿಸಲಾಯಿತು. 


ಇದನ್ನೂ ಓದಿ- ಸಚಿವ ಸ್ಥಾನಕ್ಕೆ ಶಾಸಕರ ನಡುವೆ ಭಾರಿ ಪೈಪೋಟಿ: ಸಿದ್ದು ಬಣಕ್ಕೆ ಎಷ್ಟು..? ಡಿಕೆ ಬಣಕ್ಕೆ ಎಷ್ಟು..?


ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ವೇತನ ಎಷ್ಟಿರುತ್ತದೆ? ಸಚಿವರ ವೇತನ ಎಷ್ಟು? ಸ್ಪೀಕರ್​ ಮತ್ತು ಉಪ ಸ್ಪೀಕರ್​ ಸಂಬಳ ಎಷ್ಟಿರುತ್ತೆ..?


ಮುಖ್ಯಮಂತ್ರಿ, ಸ್ಪೀಕರ್​ ಮತ್ತು ಸಭಾಪತಿ
ವೇತನ: 75 ಸಾವಿರ ರೂ. (ಪ್ರತಿ ತಿಂಗಳಿಗೆ)
===========
ವಿರೋಧ ಪಕ್ಷದ ನಾಯಕರ ವೇತನ
ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ
===========
ಗೃಹ ಭತ್ಯೆ:
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು,
ಉಪ ಸ್ಪೀಕರ್ ಮತ್ತು ಉಪ ಸಭಾಪತಿ:
1.2 ಲಕ್ಷ ರೂ. (ಪ್ರತಿ ತಿಂಗಳಿಗೆ)
-----------
ಸ್ಪೀಕರ್​ ಮತ್ತು ಸಭಾಪತಿಗೆ
1.6 ಲಕ್ಷ ರೂ. (ಪ್ರತಿ ತಿಂಗಳಿಗೆ)
===========
ಮನೆ ನಿರ್ವಹಣಾ ಭತ್ಯೆ 
35 ಸಾವಿರ ರೂ. ಪ್ರತಿ ತಿಂಗಳಿಗೆ
===========
ಇಂಧನ ಭತ್ಯೆ 
ಪ್ರತಿ ತಿಂಗಳಿಗೆ 2 ಸಾವಿರ ಲೀಟರ್​ ಇಂಧನ
=========
ಪ್ರಯಾಣ ಭತ್ಯೆ:
ಪ್ರತಿ ಕಿಲೋ ಮೀಟರ್‌ಗೆ 40 ರೂ.
=========
ಅತಿಥಿ ಭತ್ಯೆ
4 ರಿಂದ 4.5 ಲಕ್ಷ ರೂ. (ಪ್ರತಿ ತಿಂಗಳಿಗೆ)


ಮಂತ್ರಿಗಳ ವೇತನ: ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ. ಉಳಿದಂತೆ ಮುಖ್ಯಮಂತ್ರಿಗಳಿಗೆ ಸಿಗುವ ಭತ್ಯೆಗಳು ಸಚಿವರಿಗೆ ಸಿಗುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ