ಲಿಂಗಾಯತ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಎಂಪಿ ಚುನಾವಣೆಯಲ್ಲಿ ತಕ್ಕ ಪಾಠ- ಶಿವನಾಂದ ಜಮಾಧಾರ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು  ಕಡೆಗಣಿಸಿದ ಪರಿಣಾಮ  ಭಾರತೀಯ ಜನತಾ ಪಕ್ಷ ತೊರೆದು ಲಿಂಗಾಯಿತ ಜನರ ನಾಯಕರು ಕಾಂಗ್ರೆಸ್ ಸೇರಿದರು. ಸಚಿವ ಸಂಪುಟದಲ್ಲಿ ಸರಿಯಾದ ಸ್ಥಾನ ನೀಡದೆ ಇದ್ದರೆ ಕಾಂಗ್ರೆಸ್ ಪಕ್ಷ ಬರುವ  ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಹೆದರಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Written by - Yashaswini V | Last Updated : May 18, 2023, 05:01 PM IST
  • ಲಿಂಗಾಯಿತರಿಗೆ ಇದುವರೆಗೆ ಯಾವುದೇ ಸೂಕ್ತ ಸ್ಥಾನ ಮಾನ ನೀಡಲಿಲ್ಲ
  • ರಾಜ್ಯದಲ್ಲಿ ಒಟ್ಟು 39 ಜನ ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ.
  • ಸಚಿವ ಸಂಪುಟದಲ್ಲಿ ಸರಿಯಾದ ಸ್ಥಾನ ನೀಡದೆ ಇದ್ದರೆ ಕಾಂಗ್ರೆಸ್ ಪಕ್ಷ ಬರುವ ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಹೆದರಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲಿಂಗಾಯತ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಎಂಪಿ ಚುನಾವಣೆಯಲ್ಲಿ ತಕ್ಕ ಪಾಠ- ಶಿವನಾಂದ ಜಮಾಧಾರ  title=

ಹುಬ್ಬಳ್ಳಿ: ರಾಜ್ಯದ ನೂತನ ಸರ್ಕಾರದಲ್ಲಿ ಒಂದೇ ಒಂದು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಲಿಂಗಾಯತ ಒಳ ಪಂಗಡಗಳ ರಾಷ್ಟ್ರೀಯ ಸಮಿತಿ ಅಧ್ಯಕ್ಷ, ಲಿಂಗಾಯತ  ಸಮಾಜದ ಮುಖಂಡ ಹಾಗೂ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಶಿವನಾಂದ ಜಮಾಧಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಶಿವನಾಂದ ಜಮಾಧಾರ ಅವರು, ಇನ್ನು ಚುನಾವಣೆ ಮುಗಿದು ಐದು ದಿನಗಳು ಕಳೆದಿದ್ದು ಕಾಂಗ್ರೆಸ್ ಸ್ಪಷ್ಟವಾದ ಬಹುಮತ ಪಡೆದಿದೆ. ಕಾಂಗ್ರೆಸ್ ಪಕ್ಷ 135 ಸ್ಥಾನ ಗೆದ್ದಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಪಕ್ಷದ  ನಾಯಕರಿಗೆ  ಶುಭಾಶಯಗಳು ಮೊದಲು ಶುಭಾಶಯ ತಿಳಿಸುತ್ತೇನೆ ಎಂದ ಅವರು ಇನ್ನು ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರು ಮೊದಲು ಪ್ರಬಲರಾಗಿದ್ದ ಲಿಂಗಾಯತ ಸಮುದಾಯದ ನಾಯಕರಿಗೆ ಸ್ಥಾನ ನೀಡಬೇಕು  ಎಂದರು. 

ಇದನ್ನೂ ಓದಿ- ಸಿದ್ದು ಕ್ಯಾಬಿನೆಟ್ ನಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಲಿಂಗಾಯಿತರಿಗೆ ಇದುವರೆಗೆ ಯಾವುದೇ ಸೂಕ್ತ ಸ್ಥಾನ ಮಾನ ನೀಡಲಿಲ್ಲ .  ರಾಜ್ಯದಲ್ಲಿ ಒಟ್ಟು 39 ಜನ ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಿಂದ  ಗೆದ್ದಿದ್ದಾರೆ. ಇದಲ್ಲದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ 37 ಶಾಸಕರು ಗೆಲುವು ಸಾಧಿಸಿದ್ದಾರೆ‌. ಇನ್ನು ಈ ಎರಡು ಗುಂಪುಗಳು ಅತ್ಯಧಿಕ ಪ್ರಮಾಣದಲ್ಲಿ ಗೆದ್ದ ಸಮಾಜದವರು  ಕಾರಣ ಸಿದ್ದರಾಮಯ್ಯನವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಉನ್ನತ ಸ್ಥಾನ ನೀಡಬೇಕು  ಎಂದು ಆಗ್ರಹಿಸಿದರು. 

ಇದನ್ನೂ ಓದಿ- ಸೋಮಣ್ಣ ಸೋಲಿಸಿದ ಪುಟ್ಟರಂಗಶೆಟ್ಟಿಗೆ ಒಲಿಯುತ್ತಾ ಮಂತ್ರಿ ಪಟ್ಟ..?

ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು  ಕಡೆಗಣಿಸಿದ ಪರಿಣಾಮ  ಭಾರತೀಯ ಜನತಾ ಪಕ್ಷ ತೊರೆದು ಲಿಂಗಾಯಿತ ಜನರ ನಾಯಕರು ಕಾಂಗ್ರೆಸ್ ಸೇರಿದರು. ಸಚಿವ ಸಂಪುಟದಲ್ಲಿ ಸರಿಯಾದ ಸ್ಥಾನ ನೀಡದೆ ಇದ್ದರೆ ಕಾಂಗ್ರೆಸ್ ಪಕ್ಷ 
ಬರುವ  ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಹೆದರಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದರಲ್ಲಿ ಸಹ ಉಪ ಮುಖ್ಯಮಂತ್ರಿ ಸ್ಥಾನ ಯೋಗ್ಯರಿಗೆ ನೀಡಬೇಕು. ಲಿಂಗಾಯತ ಸಮುದಾಯದ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಲಿಂಗಾಯತರಿಗೆ ಉತ್ತಮ ಸ್ಥಾನ ನೀಡಬೇಕು ಎಂದವರು ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News