ದೆಹಲಿ:  ಏಪ್ರಿಲ್ ಒಂದರಿಂದ ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ.  ಏಪ್ರಿಲ್ ಒಂದರಿಂದ ಸರಳ್  ಪಿಂಚಣಿ ಯೋಜನೆಯನ್ನು (Saral Pension Plan) ಆರಂಭಿಸುವಂತೆ ಭಾರತೀಯ ವಿಮಾ ನಿರ್ಬಂಧ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಏಪ್ರಿಲ್ ಒಂದರಿಂದ ಸರಳ ಪಿಂಚಣಿ ಯೋಜನೆ ಆರಂಭವಾಗಬಹುದು. 


COMMERCIAL BREAK
SCROLL TO CONTINUE READING

ಐಆರ್‌ಡಿಎಐನ (IRDAI) ಮಾರ್ಗಸೂಚಿಗಳ ಪ್ರಕಾರ, ಸರಲ್ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ 1 ಸಾವಿರ ರೂ., ತ್ರೈಮಾಸಿಕಕ್ಕೆ 3 ಸಾವಿರ ರೂ., ಅರ್ಧ ವರ್ಷಕ್ಕೆ 6 ಸಾವಿರ ಅಥವಾ ವಾರ್ಷಿಕವಾಗಿ 12 ಸಾವಿರ ರೂ ಸಿಗುತ್ತದೆ. ಸಾಮಾನ್ಯ ಸೌಲಭ್ಯ ಮತ್ತು ಪ್ರಮಾಣಿತ ನಿಯಮ ಹಾಗೂ ಷರತ್ತುಗಳೊಂದಿಗೆ ವೈಯಕ್ತಿಕ ಕ್ಷಿಪ್ರ  ವರ್ಷಾಶನ ಅನ್ವಿಟಿ ಪ್ರಾರಂಭಿಸುವುದು ಬಹಳ ಮುಖ್ಯ ಎಂದು IRDAI ಹೇಳಿದೆ. ಐಆರ್‌ಡಿಎಐನ  ಕ್ರಮವು ಗ್ರಾಹಕರಿಗೆ ತುಂಬಾ ಉಪಯುಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಐಆರ್‌ಡಿಎಐ ಮಾರ್ಗಸೂಚಿಗಳ ಪ್ರಕಾರ, ಪಾಲಿಸಿಯನ್ನು(Policy)  ಪ್ರಾರಂಭಿಸಿದ ದಿನಾಂಕದಿಂದ 6 ತಿಂಗಳ ನಂತರ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಸರಂಡರ್ ಮಾಡಬಹುದು. 


ಇದನ್ನೂ ಓದಿ : Digital Currency ಬಿಡುಗಡೆಗೆ RBI ಸಿದ್ಧತೆ, ಬದಲಾಗಲಿದೆ ಹಣಕಾಸು ವಹಿವಾಟಿನ ಪದ್ಧತಿ


Annuity ವರ್ಷಾಶನ ಎಂದರೇನು :
ನೀವು ವಿಮಾ ಕಂಪನಿಗೆ (Insurence ) ವರ್ಷಕ್ಕೆ ಇಂತಿಷ್ಟು ಪಾವತಿ ಮಾಡುತ್ತೀರಿ ಅಂದಿಟ್ಟುಕೊಳ್ಳಿ. ಅದಕ್ಕೆ ಬದಲಾಗಿ, ವಿಮಾ ಕಂಪನಿ ನಿಮಗೆ ನೀಡುವ ಮೊತ್ತವನ್ನು ವರ್ಷಾಂಶ (Annuity) ಅಥವಾ ಅನ್ವುಟಿ ಎಂದು ಹೇಳುತ್ತಾರೆ. ನಿವೃತ್ತಿಯ ನಂತರ, ಹೂಡಿಕೆದಾರರು ನಿಯಮಿತ ಆದಾಯಕ್ಕಾಗಿ ಪಿಂಚಣಿ ಯೋಜನೆಯಡಿ ಈ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯು ಸರ್ಕಾರೇತರ ಉದ್ಯೋಗಿಗಳಿಗೆ ಬಹಳ ಮುಖ್ಯವೆಂದು ಹೇಳಲಾಗಿದೆ. 


ಸರಳ ಪಿಂಚಣಿ ಯೋಜನೆಯ ಲಾಭಗಳು :
ಐಆರ್ಡಿಎಐ ಪ್ರಕಾರ, ಸರಳ ಪಿಂಚಣಿ ಯೋಜನೆಯಲ್ಲಿ ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರಿ, ಅಷ್ಟು  ಹಣ ನಿಮಗೆ  ಸಿಗುತ್ತದೆ. ಇದಲ್ಲದೆ, ನೀವು ವರ್ಷಾಶನ  Annuity ಪ್ರಯೋಜನ ಸಹ ಸಿಗುತ್ತದೆ. ಗ್ರಾಹಕನು (Customer) ತನ್ನ ಜೀವನದುದ್ದಕ್ಕೂ ವರ್ಷಾಶನದ ಪ್ರಯೋಜನ ಪಡೆಯಬಹುದು. ಆತನ ನಿಧನದ ನಂತರ ಪತ್ನಿಗೆ ವರ್ಷಾಶನ ಸಿಗಲಿದೆ. ಪತ್ನಿಯ ನಿಧನದ ಬಳಿಕ ಕಾನೂನು  ಉತ್ತರಾಧಿಕಾರಿಗೆ ಸಂಪೂರ್ಣ ಹೂಡಿಕೆ ಮೊತ್ತ ಸಿಗಲಿದೆ.


ಇದನ್ನೂ ಓದಿ : Retirement Saving : ಎಸ್‌ಬಿಐನ ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.