Digital Currency ಬಿಡುಗಡೆಗೆ RBI ಸಿದ್ಧತೆ, ಬದಲಾಗಲಿದೆ ಹಣಕಾಸು ವಹಿವಾಟಿನ ಪದ್ಧತಿ

RBI Digital Currency: ಕಪ್ಪು ಹಣ (Black Money) ಹಾಗೂ ನೋಟು ಮುದ್ರಣದಲ್ಲಾಗುತ್ತಿರುವ ವೆಚ್ಚಕ್ಕೆ ಕಡಿವಾಣ ಹಾಕಲು RBI ಡಿಜಿಟಲ್ ಕರೆನ್ಸಿ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಒಂದು ವೇಳೆ DIGITAL CURRENCY ಭಾರತದಲ್ಲಿ ಬಂದರೆ ಹಣಕಾಸಿನ ವ್ಯವಹಾರದ ಪದ್ಧತಿಯೇ ಬದಲಾಗಲಿದೆ.

Written by - Nitin Tabib | Last Updated : Jan 27, 2021, 05:45 PM IST
  • ಶೀಘ್ರವೇ ಬರಲಿದೆ ಡಿಜಿಟಲ್ ಕರೆನ್ಸಿ ಯುಗ!
  • ಬದಲಾಗಲಿದೆ ಹಣ ವಹಿವಾಟಿನ ಪದ್ಧತಿ
  • ಕಪ್ಪುಹಣದ ಹರಿವಿಗೆ ಬೀಳಲಿದೆ ಕಡಿವಾಣ
Digital Currency ಬಿಡುಗಡೆಗೆ RBI ಸಿದ್ಧತೆ, ಬದಲಾಗಲಿದೆ ಹಣಕಾಸು ವಹಿವಾಟಿನ ಪದ್ಧತಿ title=
RBI Digital Currency (File Photo)

RBI Digital Currency: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ಬದಲಾವಣೆಯೊಂದಕ್ಕೆ ನಾಂದಿ ಹಾಡುವ ಸಿದ್ಧತೆಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತದಲ್ಲಿ ಡಿಜಿಟಲ್ ಕರೆನ್ಸಿ ಯುಗ ಶೀಘ್ರದಲ್ಲಿಯೇ ಆರಂಭವಾಗುವ ಸಾಧ್ಯತೆ ಇದೆ. ಶೀಘ್ರವೇ RBIನ ಒಂದು ಆಂತರಿಕ ವಿಭಾಗ ಈ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.

DIGITAL CURRENCY ಅಗತ್ಯವೇನು?
ಹಣ ಪಾವತಿ ಉದ್ದಿಮೆಗಳ (Payment Industry) ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿ, ಸ್ಥಳೀಯ ಡಿಜಿಟಲ್ ಟೋಕನ್ ಗಳ (DIGITAL TOKAN) ಚಲನೆ ಹಾಗೂ ಕರೆನ್ಸಿ ನೋಟು ಹಾಗೂ ನಾಣ್ಯಗಳ ಮುದ್ರಣಕ್ಕೆ ಆಗುತ್ತಿರುವ ವೆಚ್ಚಗಳ ಹಿನ್ನೆಲೆ ದೀರ್ಘಕಾಲದಿಂದ ಡಿಜಿಟಲ್ ಕರೆನ್ಸಿಯ ಅವಶ್ಯಕತೆಯನ್ನು ಅನುಭವಿಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ RBI ಮೂಲಗಳು, ಕೇಂದ್ರೀಯ ಬ್ಯಾಂಕ್, ಡಿಜಿಟಲ್ ಕರೆನ್ಸಿ ಜಾರಿಗೆ ತರುವ ಕುರಿತು ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಸಂಭವನೀಯತೆಗಳ ಅಧ್ಯಯನ ಹಾಗೂ ಅವುಗಳ ಜಾರಿಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಆಂತರಿಕ ವಿಭಾಗ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯ ಮೇಲೆ CBDC ಕುರಿತು ನಿರ್ಣಯ ಕೈಗೊಳ್ಳುವ ಜವಾಬ್ದಾರಿ ಇದೆ.

ಏನಿದು CBDC?
CBDC ಒಂದು ಕಾನೂನಾತ್ಮಕ ಕರೆನ್ಸಿ ಆಗಿದೆ ಹಾಗೂ ಡಿಜಿಟಲ್ ಪದ್ಧತಿಯ ಮೂಲಕ ಇದು ಬ್ಯಾಂಕ್ ಲಯಾಬಿಲಿಟಿ ಆಗಿದ್ದು, ಸಾವೆರಿನ್ ಕರೆನ್ಸಿ ರೂಪದಲ್ಲಿ ಇದು ಲಭ್ಯವಿರಲಿದೆ. ಇದು ಬ್ಯಾಂಕ್ ನ್ ಬ್ಯಾಲೆನ್ಸ್ ಶೀಟ್ ನಲ್ಲಿಯೂ ಕೂಡ ದಾಖಲಿಸಲಾಗಿದೆ. CBCE ಕರೆನ್ಸಿ ನೋಟುಗಳ ಇ-ಆವೃತ್ತಿಯಾಗಿದೆ. ಇದನ್ನು ನೀವು ಭೌತಿಕ ಹಣದ ಜೊತೆಗೆ ಎಕ್ಸ್ಚೇಂಜ್ ಮಾಡಬಹುದು.

ಇದನ್ನು ಓದಿ- ನೀವೂ ಹಣ ಪಾವತಿಗೆ Paytm, Phonepe ಬಳಸುತ್ತೀರಾ? ಹಾಗಿದ್ದರೆ ಈ ಸುದ್ದಿ ತಪ್ಪದೆ ಓದಿ

ಇದರ ಪ್ರಭಾವವೇನು?
ಒಂದೊಮ್ಮೆ ಡಿಜಿಟಲ್ ಕರೆನ್ಸಿ ಚಾಲ್ತಿಯಲ್ಲಿ ಬಂದರೆ ಹಣ ವರ್ಗಾವಣೆ ಹಾಗೂ ಲೇವಾ-ದೇವಿ ಪದ್ಧತಿ ಸಂಪೂರ್ಣ ಬದಲಾಗಲಿದೆ. ನೋಟು ಹಾಗೂ ನಾಣ್ಯಗಳ ಜಾಗದಲ್ಲಿ ಡಿಜಿಟಲ್ ಕರೆನ್ಸಿ ಬಳಕೆಯಾಗಲಿದೆ ಮತ್ತು ಭಾರತದ ಮಟ್ಟಿಗೆ ಇದೊಂದು ಸಂಪೂರ್ಣ ನೂತನ ಅನುಭವವಾಗಿರಲಿದೆ. ಲೇವಾ-ದೇವಿ ಪದ್ಧತಿಯಲ್ಲಿನ ಜೊತೆಗೆ ಇದರಿಂದ ಕಪ್ಪುಹಣದ ಹರಿವಿಗೂ ಕಡಿವಾಣ ಬೀಳಲಿದೆ.

ಇದನ್ನು ಓದಿ- UPI ಪೇಮೆಂಟ್ ವೇಳೆ ವಹಿವಾಟು ವಿಫಲವಾದರೂ ಹಣ ಕಡಿತಗೊಂಡರೆ ತಕ್ಷಣವೇ ಮಾಡಿ ಈ ಕೆಲಸ

ಲಾಭಗಳು
ಡಿಜಿಟಲ್ ಕರೆನ್ಸಿ ಬಂದ ಬಳಿಕ ಮಾನಿಟರಿಂಗ್ ಪಾಲಸಿಯ ಅನುಷ್ಠಾನ ಉತ್ತಮ ಮತ್ತು ಸುಲಭವಾಗಲಿದೆ. ಇದರಲ್ಲಿ DIGITAL LASER TECHNOLOGY (DLT) ಬಳಕೆಯಾಗುವ ಸಾಧ್ಯತೆ ಇದೆ. ಡಿಜಿಟಲ್ ಕರೆನ್ಸಿ ಬದಲಾಗುತ್ತಿರುವ ಕಾಲದ ಒಂದು ಬೇಡಿಕೆ ಕೂಡ ಹೌದು.

ಇದನ್ನು ಓದಿ-Paytm ನಿಂದ ಹಣ ಕಡಿತಗೊಂಡಿದೆ, ಆದರೆ ಪೇಮೆಂಟ್ ಆಗಿಲ್ಲವೇ? ಚಿಂತೆಬಿಡಿ ಈ ರೀತಿ ಹಣ ವಾಪಸ್ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News