ನವದೆಹಲಿ :  PAN-Aadhaar Link: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 31 ಮಾರ್ಚ್ 2022 ರ ಮೊದಲು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ (PAN-Aadhaar Link)ಮಾಡಲು ಬ್ಯಾಂಕ್ ತನ್ನ ಖಾತೆದಾರರಿಗೆ ಸೂಚನೆ ನೀಡಿದೆ. ಗ್ರಾಹಕರು ನಿಗದಿತ ಅವಧಿಯೊಳಗೆ ಈ ಕೆಲಸ ಮಾಡದಿದ್ದಲ್ಲಿ, ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳಬಹುದು ಎಂದು ಬ್ಯಾಂಕ್ ಹೇಳಿದೆ.


COMMERCIAL BREAK
SCROLL TO CONTINUE READING

ಮಾರ್ಚ್ 31ರವರೆಗೆ ಅವಕಾಶ :
ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ (PAN-Aadhaar Link) ಮಾಡುವಂತೆ, SBI ತನ್ನ ಗ್ರಾಹಕರಿಗೆ ಟ್ವೀಟ್‌ ಮೂಲಕ ಸಲಹೆ ನೀಡಿದೆ. ಗ್ರಾಹಕರು ಸಮಯಕ್ಕೆ ಸರಿಯಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವಂತೆ, ಬ್ಯಾಂಕ್ (Bank) ಹೇಳಿದೆ. 


ಇದನ್ನೂ ಓದಿ : Business Idea: ಕೇವಲ 10 ಸಾವಿರ ಹೂಡಿಕೆ ಮಾಡಿ ಈ ಬಿಸ್ನೆಸ್ ಆರಂಭಿಸಿ, ತಿಂಗಳಿಗೆ ಒಂದು ಲಕ್ಷ ಆದಾಯ ಸಂಪಾದಿಸಿ


ಕರೋನವೈರಸ್ (Coronavirus)ಸಾಂಕ್ರಾಮಿಕದ ದೃಷ್ಟಿಯಿಂದ, ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವನ್ನು 30 ಸೆಪ್ಟೆಂಬರ್ 2021 ರಿಂದ 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿತ್ತು.  ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ಅಡೆತಡೆಯಿಲ್ಲದ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ನಮ್ಮ ಗ್ರಾಹಕರಿಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ ಎಂದು ಎಸ್‌ಬಿಐ (SBI) ಈ ಹಿಂದೆ ಟ್ವೀಟ್ ಮಾಡಿದೆ. ಇದರೊಂದಿಗೆ ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬ್ಯಾಂಕ್ ಹೇಳಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಪ್ಯಾನ್ ಅನ್ನು ಬಳಸಲಾಗುವುದಿಲ್ಲ.
  
ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ?
ಮೊದಲ ಮಾರ್ಗ
1- ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ https://www.incometaxindiaefiling.gov.in/home ಗೆ ಭೇಟಿ ನೀಡಿ 
2- ಇಲ್ಲಿ ಎಡಭಾಗದಲ್ಲಿ Link Aadhaar ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ 
3- ಈಗ ಹೊಸ ಪುಟ ತೆರೆಯುತ್ತದೆ.  ಅಲ್ಲಿ PAN, AADHAARನಲ್ಲಿ ನಮೂದಿಸಿರುವಂತೆ  ನಿಮ್ಮ ಹೆಸರನ್ನು ಭರ್ತಿ ಮಾಡಬೇಕು. 
4.ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕೇವಲ ಜನ್ಮ ವರ್ಷವಿದ್ದರೆ, 'I have only year of birth in aadhaar card' ಎಂಬ ಬಾಕ್ಸ್ ಅನ್ನು ಟಿಕ್ ಮಾಡಿ 
5- ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ OTP ಗಾಗಿ ಟಿಕ್ ಮಾಡಿ 
6- ಲಿಂಕ್ ಆಧಾರ್‌ನ ಬಟನ್ ಮೇಲೆ ಕ್ಲಿಕ್ ಮಾಡಿದರೆ PAN ಮತ್ತು Aadhaar ಲಿಂಕ್ ಆಗುತ್ತದೆ .


ಇದನ್ನೂ ಓದಿ : IT ರಿಟರ್ನ್ ಸಲ್ಲಿಸುವಾಗ ಅಪ್ಪಿತಪ್ಪಿ ಈ 6 ತಪ್ಪುಗಳನ್ನು ಮಾಡಬೇಡಿ : ಇಲ್ಲದಿದ್ದರೆ ಬೀಳುತ್ತೆ ಭಾರೀ ದಂಡ!


- ನೀವು SMS ಮೂಲಕ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬಹುದು 
- ಮೊಬೈಲ್‌ನ ಸಂದೇಶ ಬಾಕ್ಸ್‌ನಲ್ಲಿ,  UIDPAN<12-ಅಂಕಿಯ ಆಧಾರ್><10-ಅಂಕಿಯ PAN> ಟೈಪ್ ಮಾಡಿ  
- ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿದರೆ ನಿಮ್ಮ ಕೆಲಸ ಆಗುತ್ತದೆ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.