Business Idea: ಕೇವಲ 10 ಸಾವಿರ ಹೂಡಿಕೆ ಮಾಡಿ ಈ ಬಿಸ್ನೆಸ್ ಆರಂಭಿಸಿ, ತಿಂಗಳಿಗೆ ಒಂದು ಲಕ್ಷ ಆದಾಯ ಸಂಪಾದಿಸಿ

How To Start Chalk Business - ಕೇವಲ 5-10 ಸಾವಿರ ಹೂಡಿಕೆ ಮಾಡಿದರೂ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸುವ ಕೆಲವು ಉದ್ಯೋಗಗಳಿವೆ.

Written by - Nitin Tabib | Last Updated : Jan 16, 2022, 10:20 PM IST
  • ನೀವೂ ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಬೇಕೆ?
  • ಇಲ್ಲಿದೆ ನಿಮಗೊಂದು ಸುವರ್ಣಾವಕಾಶ
  • ಕೇವಲ 10 ಸಾವಿರ ರೂ. ಹೂಡಿಕೆ ಮಾಡಿ ನೀವು ಈ ಬಿಸ್ನೆಸ್ ಆರಂಭಿಸಬಹುದು.
Business Idea: ಕೇವಲ 10 ಸಾವಿರ ಹೂಡಿಕೆ ಮಾಡಿ ಈ ಬಿಸ್ನೆಸ್ ಆರಂಭಿಸಿ, ತಿಂಗಳಿಗೆ ಒಂದು ಲಕ್ಷ ಆದಾಯ ಸಂಪಾದಿಸಿ title=
How To Start Chalk Business(File Photo)

Chalk Business - ಹಣ ಗಳಿಕೆ ಮಾಡಲು ಯಾರು ತಾನೇ ಬಯಸುವುದಿಲ್ಲ. ಸಾಮಾನ್ಯವಾಗಿ ಜೀವನೋಪಾಯ ನಡೆಸಲು ಗಳಿಸುವುದು ಬಹಳ ಮುಖ್ಯ. 2020 ನೇ ವರ್ಷವನ್ನು ಯಾರೂ ಮರೆಯಲು ಸಾಧ್ಯವಿಲ್ಲ, 2020ರಲ್ಲಿ ಸಾಕಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ವ್ಯವಹಾರಗಳು ಮುಚ್ಚಲ್ಪಟ್ಟವು, ಅನೇಕ ಜನರು ಬೀದಿಗೆ ಬಂದರು. ಆದರೂ ಕೂಡ ಜನರು ತಮ್ಮ ಹೋರಾಟ ಬಿಡಲಿಲ್ಲ ಮತ್ತು ಕರೋನಾ ಅವಧಿಯಲ್ಲಿ (ಕೋವಿಡ್ -19) ತಮ್ಮದೇ ಆದ ವ್ಯಾಪಾರವನ್ನು ಪ್ರಾರಂಭಿಸಿದರು. ನೀವೂ ಕೂಡ ಕಡಿಮೆ ಹೂಡಿಕೆ ಮಾಡುವ ಮೂಲಕ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ, ಅಂತಹ ವ್ಯವಹಾರ ಕಲ್ಪನೆಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಈ ಸಣ್ಣ ವ್ಯಾಪಾರ ಕಲ್ಪನೆಯೊಂದಿಗೆ (Business Idea), ನೀವು ಪ್ರತಿ ತಿಂಗಳು ಒಂದು ಲಕ್ಷದವರೆಗೆ ಹಣಗಳಿಕೆ ಮಾಡಬಹುದು.

ಚಾಕ್ ತಯಾರಿಕೆ ವ್ಯಾಪಾರ
ಇಂದು ನಮ್ಮ ಶಾಲಾ-ಕಾಲೇಜಿನಲ್ಲಿ ಟ್ಯಾಬ್, ಕಂಪ್ಯೂಟರಿನಲ್ಲಿ ಅಧ್ಯಯನ ನಡೆಯುತ್ತಿದ್ದರೂ ಚಾಕ್ ಗಳ  ಕೊರತೆ ಕಾಡುತ್ತಿದೆ. ನೀವು ಕಪ್ಪು ಹಲಗೆಯಲ್ಲಿ ಪ್ರಶ್ನೆಯನ್ನು ವಿವರಿಸಬಹುದು ಮತ್ತು ಉತ್ತರಿಸಬಹುದು, ಆಧುನಿಕ ಸುಸಜ್ಜಿತ ತರಗತಿಗಳಲ್ಲಿ ನೀವು ಆ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೀವು ಚಾಕ್ ತಯಾರಿಕೆಯ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ನೀವು ಅದನ್ನು ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು, ನೀವು ಕೇವಲ 10 ಸಾವಿರ ರೂಪಾಯಿಗಳವರೆಗೆ ಹೂಡಿಕೆ ಮಾಡಬೇಕು.

ಚಾಕ್ ತಯಾರಿಕೆಯ ವ್ಯವಹಾರವನ್ನು ಎಲ್ಲಿ ಪ್ರಾರಂಭಿಸಬೇಕು?
ನೀವು ಎಲ್ಲಿ ಬೇಕಾದರೂ ಕೂಡ ಚಾಕ್ ತಯಾರಿಕೆಯ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನಿಮಗೆ ಯಾವುದೇ ದೊಡ್ಡ ಕಾರ್ಖಾನೆ ಅಥವಾ ದೊಡ್ಡ ಸ್ಥಳದ ಅಗತ್ಯವಿಲ್ಲ. ನೀವು ಅದನ್ನು ಒಂದು ಕೋಣೆಯಿಂದಲೂ ಕೂಡ ಪ್ರಾರಂಭಿಸಬಹುದು.

ಇದನ್ನೂ ಓದಿ-Business Idea: ಉದ್ಯೋಗ ಜೊತೆಗೆ ಈ ವ್ಯವಹಾರ ಪ್ರಾರಂಭಿಸಿ! ಪ್ರತಿತಿಂಗಳು ಲಕ್ಷ ಲಕ್ಷ ಗಳಿಸಿರಿ

ಚಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು?
ಚಾಕ್ ತಯಾರಿಸಲು ನಿಮಗೆ ಹೆಚ್ಚಿನ ವಸ್ತುಗಳ ಅಗತ್ಯವಿಲ್ಲ. ಇದರಲ್ಲಿ ಬಿಳಿ ಚಾಕ್ ಗಳಿಂದ ಹಿಡಿದು ಬಣ್ಣದ ಚಾಕ್ ಗಳನ್ನು ತಯಾರಿಸಬಹುದು. ಚಾಕ್  ಮುಖ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲಾಗುತ್ತದೆ. ಇದು ಬಿಳಿ ಬಣ್ಣದ ಪುಡಿ. ಇದು ಜಿಪ್ಸಮ್ ಎಂಬ ಕಲ್ಲಿನಿಂದ ತಯಾರಿಸಿದ ಜೇಡಿಮಣ್ಣಿನ ಒಂದು ವಿಧವಾಗಿದೆ.

ಇದನ್ನೂ ಓದಿ-Low Investment Business Idea: ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಈ 7 ಬಿಸ್ನೆಸ್ ಆರಂಭಿಸಿ ಕೈತುಂಬಾ ಸಂಪಾದನೆ ಮಾಡಿ

ಚಾಕ್ ತಯಾರಿಕೆ ವ್ಯಾಪಾರದಿಂದ ಆದಾಯ
ನೀವು ಚಾಕ್ ತಯಾರಿಸಬಹುದು ಮತ್ತು ಅದನ್ನು ನಿಮ್ಮ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇದೇ ವೇಳೆ, ನೀವು ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದರೆ, ನೀವು ಶಾಲೆ ಮತ್ತು ಕಾಲೇಜಿನಲ್ಲಿಯೂ ಚಾಕ್ ಮಾರಾಟ ಮಾಡಬಹುದು. ಒಂದು ಚಾಕ್ ಬೆಲೆ ಕನಿಷ್ಠ 7-8 ರೂಪಾಯಿಗಳ ನಡುವೆ ಇರುತ್ತದೆ. ನೀವು ಅದನ್ನು ವ್ಯವಹಾರವಾಗಿ ಪ್ರಾರಂಭಿಸಿದರೆ, ನೀವು ತಿಂಗಳಿಗೆ 1 ಲಕ್ಷದವರೆಗೆ ಸುಲಭವಾಗಿ ಗಳಿಕೆ ಮಾಡಬಹುದು.

ಇದನ್ನೂ ಓದಿ -Small Business Idea: ಸರ್ಕಾರದ ಸಹಾಯದಿಂದ ಈ ಲಾಭದಾಯಕ ವ್ಯವಹಾರ ಪ್ರಾರಂಭಿಸಿ, ಲಕ್ಷ ಲಕ್ಷ ಗಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News